ತಂಗಡಗಿ ಕೈಬಿಡುವದರಿಂದ ಕಾಂಗ್ರೆಸ್‌ಗೆ ನಷ್ಟ

tangadagi-shivaraj
ಕೊಪ್ಪಳ ಜೂ.೧೮., ಸಚಿವ ಸಂಪುಟದಿಂದ ಶಿವರಾಜ ತಂಗಡಗಿ ಕೈಬಿಡುತ್ತಿರುವ ನಿರ್ಧಾರದಿಂದ ಕಾಂಗ್ರೆಸ್‌ಗೆ ತೀವ್ರ ನಷ್ಟವಾಗಲಿದೆ ಎಂದು ಯುವಚೇತನ ಶಿವರಾಜ ತಂಗಡಗಿ ವೇದಿಕೆಯ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಸಚಿವ ತಂಗಡಗಿ ತಮ್ಮ ಸಣ್ಣ ನೀರಾವರಿ ಖಾತೆಗೆ ನ್ಯಾಯ ಒದಗಿಸುವದರೊಂದಿಗೆ ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಕಾಳಜಿವಹಿಸಿದ್ದಾರೆ. ಅವರು ಜಿಲ್ಲೆಯ ಎಲ್ಲಾ ಚುನಾವಣೆಗಳಾದ ಜಿಲ್ಲಾ ಪಂಚಾಯತ, ತಾಲೂಕ ಪಂಚಾಯತ, ಸ್ಥಳಿಯ ಸಂಸ್ಥೆಗಳಲ್ಲಿ ಭರ್ಜರಿ ಯಶಸ್ಸಿಗೆ ಕಾರಣೀಕರ್ತರಾಗಿದ್ದಾರೆ, ಅಲ್ಲದೇ ಅವರು ಯಾವುದೇ ಕ್ಷೇತ್ರದಲ್ಲಿ, ಅಧಿಕಾರಿಗಳ ವರ್ಗಾವಣೆಯಲ್ಲಿ ಮೂಗು ತೂರಿಸಲಿಲ್ಲ ಅಲ್ಲದೇ ಅವರ ವಿರುದ್ಧ ಮಾಡಲಾಗಿರುವ ಯಾವುದೇ ಆರೋಪಗಳು ಸಾಬೀತಾಗಿಲ್ಲವಾದ್ದರಿಂದ ಅವರನ್ನು ಸಂಪುಟದಿಂದ ಬಿಟ್ಟಿರುವದು ಕೇವಲ ಸಿದ್ದರಾಮಯ್ಯ ಸರಕಾರದ ಹಿಂದುಳಿದ ಹಣೆಪಟ್ಟಿ ಕಳಚಿಕೊಳ್ಳುವ ಪ್ರಯತ್ನವಾಗಿದೆ ಹೊರತು ಕಾಂಗ್ರೆಸ್ ಕಟ್ಟಲು ಶ್ರಮಿಸಿದವರಿಗೆ ಅನ್ಯಾಯ ಮಾಡಿದಂತಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Please follow and like us:
error