ಡಿ.೧೭ ರಂದು ದತ್ತಿ ಉಪನ್ಯಾಸ, ದತ್ತಿ ಪ್ರಶಸ್ತಿ ಪ್ರಧಾನ

tunturu_mahiboob_mulla

ಕೊಪ್ಪಳ: ನಗರದ ಸಾಹಿತ್ಯ ಭವನದ ಕಸಾಪ ಕಚೇರಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಹಾಗೂ ತಾಲೂಕು ಘಟಕ ಆಶ್ರಯದಲ್ಲಿ ಡಿ.೧೭ ರಂದು ದತ್ತಿ ಉಪನ್ಯಾಸ ಹಾಗೂ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಹಿರಿಯ ನ್ಯಾಯವಾದಿ ವಿ.ಎಂ.ಭೂಸನೂರಮಠ ಸಮಾರಂಭ ಉದ್ಘಾಟಿಸುವರು. ಜಿಲ್ಲಾ ಕಸಾಪ ಅಧ್ಯಕ್ಷ ರಾಜಶೇಖರ್ ಅಂಗಡಿ ಅವರು ಅಧ್ಯಕ್ಷತೆ ವಹಿಸುವರು. ಶಿವಶರಣೆ ಹೇಮರೆಡ್ಡಿ ಮಲ್ಲನ ಪತ್ತಿನ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಸ್.ಡಿ.ಡಂಬಳ, ವೈಜನಾಥ ದಿವಟರ, ವಿರುಪಾಕ್ಷಪ್ಪ ಮುರಳಿ, ಡಾ.ಮಹಾಂತೇಶ ಮಲ್ಲನಗೌಡರ ಭಾಗವಹಿಸಲಿದ್ದಾರೆ.
ದಿ.ಬಸಪ್ಪ ಕೆಂಚಪ್ಪ ದಿವಟರ ಅವರ ದತ್ತಿ ಉಪನ್ಯಾಸವನ್ನು ಮುಂಡರಗಿಯ ನಿವೃತ್ತ ಉಪನ್ಯಾಸಕ ಎ.ವೈ.ನವಲಗುಂದ ಅವರು ವಚನ ಸಾಹಿತ್ಯದಲ್ಲಿ ವೈಚಾರಿಕತೆ ಕುರಿತು ಉಪನ್ಯಾಸ ನೀಡುವರು. ದಿ.ಯಮನಪ್ಪ ನಿಂಗಪ್ಪ ಮರಳಿ ದತ್ತಿ ಉಪನ್ಯಾಸವನ್ನು ಉಪನ್ಯಾಸಕ ಶಿವಕುಮಾರ ಕುಕನೂರು ಅವರು ಕನ್ನಡ ಬಳಲುತ್ತಿಲ್ಲ, ಬೆಳೆಯುತ್ತದೆ ಎನ್ನುವ ಕುರಿತು ಉಪನ್ಯಾಸ ನೀಡುವರು. ದಿ.ಮರಿಗೌಡ ಮಲ್ಲನಗೌಡ ಸ್ಮಾರಕ ದತ್ತಿ ಪ್ರಶಸ್ತಿಯನ್ನು ತುಂತುರು ಕವನ ಸಂಕಲನ ಕೃತಿಯ ಮೆಹಬೂಬ್‌ಸಾಬ್ ಖಾಸಿಂಸಾಬ್ ಮುಲ್ಲಾ ವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ ಎಂದು ತಾಲೂಕು ಕಸಾಪ ಅಧ್ಯಕ್ಷ ಗಿರೀಶ ಪಾನಘಂಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:
error