ಡಿ.೧೧ ಕೊಪ್ಪಳ ಕಾವ್ಯ ಪರಂಪರೆ: ವಿಚಾರ ಸಂಕಿರಣ ಮತ್ತು ಕವಿಗೋಷ್ಠಿ

koppal_poets
ಕೊಪ್ಪಳ, ಡಿ ೦೮ : ತಿರುಳ್ಗನ್ನಡ ಸಾಹಿತಿಗಳ ಸಹಕಾರ ಸಂಘ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಇವರ ಸಹಯೋಗದಲ್ಲಿ ನಗರದ ಸರಕಾರಿ ಪದವಿಕಾಲೇಜು ಸಭಾಭವನದಲ್ಲಿ ಡಿ. ೧೧ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಕೊಪ್ಪಳ ಕಾವ್ಯಪರಂಪರೆ ವಿಚಾರ ಸಂಕಿರಣ ಮತ್ತು ಕವಿಗೋಷ್ಠಿ ಆಯೋಜಿಸಲಾಗಿದೆ.
ವಿಚಾರ ಸಂಕಿರಣದ ಉದ್ಘಾಟನೆಯನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಅಮರೇಶ ನುಗಡೋಣಿ ನೆರವೇರಿಸಲಿದ್ದಾರೆ. ಡಾ. ಸಿದ್ಧಯ್ಯ ಪುರಾಣಿಕ(ಕಾವ್ಯಾನಂದ)ರ ಕಾವ್ಯ ಕುರಿತು ಕಾನಾಹೊಸಳ್ಳಿಯ ನಿವೃತ್ತ ಪ್ರಾಚಾರ್ಯ ಡಾ. ವೃಷಭೇಂದ್ರಾಚಾರ್ಯ ಅರ್ಕಸಾಲಿ ಅವರು, ಡಾ. ದೇವೇಂದ್ರಕುಮಾರ ಹಕಾರಿ(ರವಿ)ಯವರ ಕಾವ್ಯ ಕುರಿತು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗ ನಿರ್ದೇಶಕ ಡಾ. ಹರಿಲಾಲ ಪವಾರ ಮತ್ತು ಡಾ. ಪಂಚಾಕ್ಷರಿ ಹಿರೇಮಠ(ತಿರುಕ)ರ ಕಾವ್ಯ ಕುರಿತು ಬಸವಕಲ್ಯಾಣ ಸರಕಾರಿ ಪ್ರಥಮದರ್ಜೆ ಕಾಲೇಜು ಪ್ರಾಧ್ಯಾಪಕ ಡಾ. ಗವಿಸಿದ್ಧಪ್ಪ ಎಚ್. ಪಾಟೀಲ ಅವರು ಉಪನ್ಯಾಸ ನೀಡಲಿದ್ದಾರೆ. ಡಾ. ಸಿದ್ಧಯ್ಯ ಪುರಾಣಿಕ, ಡಾ. ದೇವೇಂದ್ರಕುಮಾರ ಹಕಾರಿ ಹಾಗೂ ಡಾ. ಪಂಚಾಕ್ಷರಿ ಹಿರೇಮಠ ಅವರ ಕವಿತೆಗಳನ್ನು ಡಾ. ವೃಷಭೇಂದ್ರಾಚಾರ್ಯ ಅರ್ಕಸಾಲಿ ಅವರು ಸಂಗೀತ ಸಂಯೋಜಿಸಿ ಹಾಡಲಿದ್ದಾರೆ.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಸಂಗಮೇಶ ಕೋಟಿ ಹಾಗೂ ಕೊಪ್ಪಳ ಸರಕಾರಿ ಪ್ರಥಮದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ. ತಿಮ್ಮಾರೆಡ್ಡಿ ಮೇಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ತಿರುಳ್ಗನ್ನಡ ಸಾಹಿತಿಗಳ ಸಹಕಾರ ಸಂಘದ ಅಧ್ಯಕ್ಷರು ಹಾಗೂ ಬಂಡಾಯ ಸಾಹಿತಿ ಪ್ರೊ. ಅಲ್ಲಮಪ್ರಭು ಬೆಟ್ಟದೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಆಯ್ದ ಕವಿಗಳ ಕವಿಗೋಷ್ಠಿ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಡಾ. ಕೆ. ಬಿ. ಬ್ಯಾಳಿ, ಈಶ್ವರ ಹತ್ತಿ, ಡಾ. ಮಹಾಂತೇಶ ಮಲ್ಲನಗೌಡರ, ಶಾಂತಾದೇವಿ ಹಿರೇಮಠ, ಮುನಿಯಪ್ಪ ಹುಬ್ಬಳ್ಳಿ, ಬಸವರಾಜ ಆಕಳವಾಡಿ, ನಿಂಗಪ್ಪ ಸಜ್ಜನ, ರಮೇಶ ಗಬ್ಬೂರ, ಚಂದಪ್ಪ ಹಕ್ಕಿ, ಡಾ. ಮುಮ್ತಾಜ್ ಬೇಗಂ, ಡಾ. ಜಾಜಿ ದೇವೇಂದ್ರಪ್ಪ, ಮಹೇಶ ಬಳ್ಳಾರಿ, ವಿಜಯಲಕ್ಷ್ಮಿ ಕೊಟಗಿ, ಡಾ. ಶರಣಬಸಪ್ಪ ಕೋಲ್ಕಾರ, ಅರುಣಾ ನರೇಂದ್ರ, ಅಜಮೀರ ನಂದಾಪುರ, ಪುಷ್ಪಲತಾ ಏಳುಬಾವಿ, ಮಹಾಂತೇಶ ಚೌಡಾಪುರ, ವಿಮಲಾ ಇನಾಮದಾರ, ವೀರಣ್ಣ ವಾಲಿ, ವಿಜಯ ಅಮೃತರಾಜ್, ಶ್ರೀನಿವಾಸ ಚಿತ್ರಗಾರ, ಜಿ. ಎಸ್. ಗೋನಾಳ, ಅನಸೂಯಾ ಜಹಗೀರದಾರ, ವೈ. ಬಿ. ಜೂಡಿ, ಮುಂತಾದ ಕವಿಗಳು ಭಾಗವಹಿಸಲಿದ್ದಾರೆ ಎಂದು ತಿರುಳ್ಗನ್ನಡ ಸಾಹಿತಿಗಳ ಸಹಕಾರ ಸಂಘದ ಅಧ್ಯಕ್ಷ ಪ್ರೊ. ಅಲ್ಲಮಪ್ರಭು ಬೆಟ್ಟದೂರು, ಉಪಾಧ್ಯಕ್ಷ ಬಸವರಾಜ ಆಕಳವಾಡಿ ಮತ್ತು ಗೌರವ ಕಾರ್ಯದರ್ಶಿ ವೈ. ಬಿ. ಜೂಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:
error