ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಜ್ಯೋತಿಯಾತ್ರೆ

ಕೊಪ್ಪಳ, ೧೨ : ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು, ಸುತ್ತೂರು ಮಠ ಇವರ ೧೦೦ ನೇ ವರ್ಷದ ಜನ್ಮದಿನದ ಪ್ರಯುಕ್ತ, ಜನ್ಮ ಶತಮಾನೋತ್ಸವದ ’ಜ್ಯೋತಿಯಾತ್ರೆ’ಯು ಇದೇ ದಿ. ೧೩-೦೫-೨೦೧೬, ಶುಕ್ರವಾರ ಬೆಳಿಗ್ಗೆ ೧೦ ಗಂಟೆಗೆ ಕೊಪ್ಪಳಕ್ಕೆ ಆಗಮಿಸಲಿದೆ. ಬೆಳಿಗ್ಗೆ ೧೦ ಗಂಟೆಗೆ ಶ್ರೀ ಗವಿಮಠದ ಆವರಣದಲ್ಲಿ ಜ್ಯೋತಿಯಾತ್ರೆಯು ಆಗಮಿಸಿದ ನಂತರ, ನಗರದ ಪ್ರಮುಖ ರಸ್ತೆಗಳ ಮುಖಾಂತರ ಕೋಟೆ ರಸ್ತೆಯ ಮಹೇಶ್ವರ ದೇವಸ್ಥಾನ ತಲುಪುವುದು. ಎಲ್ಲ ಶರಣ ಬಂಧುಗಳು ಈ ಜ್ಯೋತಿಯಾತ್ರೆಯಲ್ಲಿ ಭಾಗವಹಿಸಿ, ಜ್ಯೋತಿಯಾತ್ರೆಯನ್ನು ಯಶಸ್ವಿಗೊಳಿಸಬೇಕೆಂದು ಬಸವರಾಜ ಬಳ್ಳೊಳ್ಳಿ ತಿಳಿಸಿದ್ದಾರೆ.

Please follow and like us:
error

Related posts

Leave a Comment