You are here
Home > Koppal News-1 > ಡಾ.ಅಂಬೇಡ್ಕರ ಅವರಿಗೆ ಅವಹೇಳಕಾರಿ ಹೇಳಿಕೆಗೆ ಡಿಎಸ್‌ಎಸ್(ಅಂಬೇಡ್ಕರ ವಾದ) ಖಂಡನೆ

ಡಾ.ಅಂಬೇಡ್ಕರ ಅವರಿಗೆ ಅವಹೇಳಕಾರಿ ಹೇಳಿಕೆಗೆ ಡಿಎಸ್‌ಎಸ್(ಅಂಬೇಡ್ಕರ ವಾದ) ಖಂಡನೆ

ಕೊಪ್ಪಳ: ಡಾ.ಅಂಬೇಡ್ಕರ ಅವರಿಗೆ ಅವಹೇಳನಕಾರಿಯಾಗಿ ಮಾತನಾಡಿರುವ ಇಂದಿರಾ ಗಾಂಧಿಯ ರಾಷ್ಟ್ರೀಯ ಕಲಾ ಕೇಂದ್ರದ ರಾಮಬಹದ್ದೂರ ರಾಯ್ ಯನ್ನು ದೇಶದ್ರೋಹದ ಆರೋಪದಡಿ ಬಂಧಿಸಿ ದೇಶದಿಂದ ಗಡಿಪಾರು ಮಾಡುವಂತೆ ಒತ್ತಾಯಿಸಿ ಸೋಮವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ ವಾದ) ಸಂಘಟನೆಯಿಂದ ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರ ಮುಖಾಂತರ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಲಾಯಿತು.
ಡಾ.ಬಾಬಾ ಸಾಹೇಬ್ ಅಂಬೇಡ್ಕರ ಅವರು ದೇಶದ ಸಂವಿಧಾನ ರಚನೆಗೆ ೨ ವರ್ಷ ೧೧ ತಿಂಗಳು ೧೭ ದಿನಗಳವರೆಗೆ ಕಣ್ಣಲ್ಲಿ ಕಣ್ಣಿಟ್ಟು ಮತ್ತು ಜಗತ್ತಿನ ವಿವಿಧ ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ ತಮ್ಮ ಆರೋಗ್ಯವನ್ನ ಲೆಕ್ಕಿಸದೇ ಭಾರತದ ದೇಶದಲ್ಲಿರುವ ಎಲ್ಲಾ ಜಾತಿ ಧರ್ಮದ ಜನರು ಒಂದಾಗಿ ಹಾಗು ಸಾಮಾಜಿಕ ನ್ಯಾಯ ದೊರಕಿಸಿಕೊಡುವ ಸಂವಿಧಾನವನ್ನು ನಮ್ಮdss-koppal ದೇಶಕ್ಕೆ ಅರ್ಪಿಸಿದ್ದಾರೆ. ಅಂತಹ ಮಹಾನ್ ನಾಯಕರ ಕೊಡುಗೆಗಳನ್ನು ನೋಡಿ ವಿಶ್ವ ಸಂಸ್ಥೆಯೂ ಕೂಡ ಕೊಂಡಾಡುತ್ತದೆ. ಡಾ. ಅಂಬೇಡ್ಕರ ಅವರ ಜನ್ಮ ದಿನಾಚರಣೆಯನ್ನು ವಿಶ್ವಜ್ಞಾನ ದಿನವನ್ನಾಗಿ ವಿಶ್ವದಾದ್ಯಂತ ಆಚರಿಸಲಾಗುತ್ತಿದೆ.
ವಿಶ್ವ ನಾಯಕರಾದ ಅಂಬೇಡ್ಕರ ಅವರು ಸಂವಿಧಾನ ಬರೆದಿದ್ದು ಬರಿ ಕಾಲ್ಪನಿಕ ಎಂದು ಹೇಳಿಕೆ ನೀಡಿರುವ ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ರಾಮಬಹದ್ದೂರ ರಾಯ ಎನ್ನುವ ದೇಶದ್ರೋಹಿಯು ಭಾರತದ ಸಂವಿಧಾನ ಶಿಲ್ಪ ಕುರಿತು ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವುದು ದೇಶದ ಜನ ತಲೆ ತಗ್ಗಿಸುವಂತಾಗಿದೆ. ಇಂತಹ ಅವಹೇಳನಕಾರಿ ಮತ್ತು ದೇಶದ್ರೋಹಿ ಹೇಳಿಕೆ ನೀಡಿರುವ ರಾಮಬಹದ್ದೂರ ರಾಯ ಅವರನ್ನು ದೇಶದ್ರೋಹದ ಆರೋಪಡಿ ಬಂಧಿಸಿ ಕ್ರಿಮಿನಲ್ ಮುಖದ್ದಮೆ ಹೂಡಿ ಬಂಧಿಸಿ ದೇಶದಿಂದ ಗಡಿಪಾರು ಮಾಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ ವಾದ) ಕೊಪ್ಪಳ ಜಿಲ್ಲಾ ಪ್ರಧಾನ ಸಂಚಾಲಕ ರಮೇಶ್ ಬೆಲ್ಲದ್ ಒತ್ತಾಯಿಸಿದ್ದಾರೆ.
ಉಪ ಪ್ರಧಾನ ಸಂಚಾಲಕ ಪಿ.ರಮೇಶ, ಸಂಚಾಲಕರಾದ ಡಿ.ಬೋಜಪ್ಪ, ಹುಸೇನಪ್ಪ, ಹನುಮಂತಪ್ಪ, ಖಜಾಂಚಿ ಚಂದಪ್ಪ ಗುಡಗಲದಿನ್ನಿ, ವಿದ್ಯಾಥಿ ಸಂಘ ಪ್ರಧಾನ ಸಂಚಾಲಕ ಮಹಾಂತೇಶ ಚಾಕ್ರಿ, ರಾಘು ಬೆಲ್ಲದ್, ಮಂಜುನಾಥ ಬಾವಿಮನಿ, ವೆಂಕಟೇಶ ಬೆಲ್ಲದ, ರಾಘು ಚಾಕ್ರಿ, ಗೌತಮ್ ಬಳಗಾನೂರ, ನಾಗರಾಜ ದೊಡ್ಡಮನಿ, ಹಾಗೂ ಸಂಘಟನೆಯ ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಕ್ರೀಡಾಂಗಣಕ್ಕೆ ಡಾ.ಬಿ ಆರ್ ಅಂಬೇಡ್ಕರ ಅವರ ಹೆಸರನ್ನು ನಾಮಕರಣ ಮಾಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ ವಾದ) ಸಂಘಟನೆಯಿಂದ ಮನವಿ ಸಲ್ಲಿಸಲಾಯಿತು.

Leave a Reply

Top