ಟೋಲ್ ಶುಲ್ಕ ವಿನಾಯಿತಿ ಕುರಿತು ಯಾವುದೇ ನಿರ್ಣಯವಾಗಿಲ್ಲ- ಜಿಲ್ಲಾಧಿಕಾರಿ

ಗಂಗಾವತಿ ತಾಲೂಕಿನ ಮರಳಿ ಮತ್ತು ಹೇಮಗುಡ್ಡ ಗ್ರಾಮದ ಬಳಿ ಜಿ.ಕೆ.ಸಿ. ಕಂಪನಿಯಿಂದ ನಿರ್ಮಿತವಾಗಿರುವ ಟೋಲ್‍ಗೇಟ್ ಮೂಲಕ ಸಂಚರಿಸುವ ಸ್ಥಳೀಯ ಅಥವಾ ಇತರೆ ವಾಹನಗಳಿಗೆ ಟೋಲ್ ಶುಲ್ಕ ಪಾವತಿಯಿಂದ ವಿನಾಯಿತಿ ನೀಡುವ ಕುರಿತು ಯಾವುದೇ ನಿdcರ್ಣಯವನ್ನು ಯಾವುದೇ ಸಭೆಯಲ್ಲಿ ಕೈಗೊಂಡಿಲ್ಲ ಎಂದು ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಸ್ಪಷ್ಟನೆ ನೀಡಿದ್ದಾರೆ.
ಹೇಮಗುಡ್ಡ ಗ್ರಾಮದ ಬಳಿಯ ಜಿ.ಕೆ.ಸಿ. ಕಂಪನಿಯಿಂದ ನಿರ್ಮಿತವಾಗಿರುವ ಟೋಲ್‍ಗೇಟ್ ಮೂಲಕ ಸಂಚರಿಸುವ ಸ್ಥಳೀಯ ವಾಹನಗಳಿಗೆ ಟೋಲ್ ಶುಲ್ಕ ವಿನಾಯಿತಿ ನೀಡಲಾಗಿದೆ ಎಂಬುದಾಗಿ ಕೆಲವರು ಸುಳ್ಳು ವದಂತಿಯನ್ನು ಹರಡಿರುವುದಾಗಿ ತಿಳಿದುಬಂದಿದೆ.   ಕೆಲ ಮಾಧ್ಯಮಗಳಲ್ಲೂ ಇಂತಹ ವರದಿ ಪ್ರಕಟವಾಗಿದ್ದು, ಇದರಲ್ಲಿ ಯಾವುದೇ ಸತ್ಯಾಂಶ ಇರುವುದಿಲ್ಲ. ವಾಸ್ತವವಾಗಿ ವಾಹನಗಳಿಗೆ ಟೋಲ್ ಶುಲ್ಕ ವಿನಾಯಿತಿ ನೀಡಿದ ಕುರಿತು ಯಾವುದೇ ಸಭೆಯಲ್ಲಿ ನಿರ್ಣಯ ಕೈಗೊಂಡಿರುವುದಿಲ್ಲ.  ಈ ಕುರಿತಂತೆ ಸಾರ್ವಜನಿಕರು ಯಾವುದೇ ವರದಿಗಳಿಗೆ ಹಾಗೂ ವದಂತಿಗಳಿಗೆ ಕಿವಿಗೊಡದಂತೆ ಜಿಲ್ಲಾಧಿಕಾರಿಗಳು  ತಿಳಿಸಿದ್ದಾರೆ.

 
Please follow and like us:
error