ಟೊಲ್ಗೆಟ್ ಸಿಬ್ಬಂದಿಯ ಮೇಲೆ ಹಲ್ಲೆ ಬಂದನ

ಟೊಲ್ಗೆಟ್ ಸಿಬ್ಬಂದಿಯ ಮೇಲೆ  ಗ್ರಾಮಸ್ಥರು ಹಲ್ಲೆ ಮಾಡಿದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಗಂಗಾವತಿ ತಾಲೂಕಿನ  ಹೇಮಗುಡ್ಡದ ಬಳಿಯ ಟೋಲ್ ಗೇಟ್ ನಲ್ಲಿ ಮದ್ಯರಾತ್ರಿ ಈ ಘಟನೆ ನಡೆದಿದ್ದು. ಸ್ಥಳೀಯರಾಗಿರುವ ಕಂಪ್ಯೂಟರ್ ಆಪರೇಟ್ ಮಾಡುವ ಯುವಕರ ಮೇಲೆ ಹೆರೂರು ಗ್ರಾಮದ ಕೆಲವು ವ್ಯಕ್ತಿಗಳು ಹಲ್ಲೆ ಮಾಡಿದ್ದಾರೆ. ತಮ್ಮದೇ ಸಿಬ್ಬಂದಿಯ ಮೇಲೆ ಹಲ್ಲೆ ನಡೆಯುತ್ತಿದ್ದರೂ ಜಿಕೆಸಿ ಕಂಪನಿಯ ಇತರೆ ಸಿಬ್ಬಂದಿ ಹಾಗೂ ಪೊಲೀಸರು ಸುಮ್ಮನೇ ನೋಡುತ್ತಾ ನಿಂತಿದ್ದರು ಎನ್ನಲಾಗಿದೆ ,ಮಹೇಶ, ಕರಿಯಪ್ಪ, ಏಳುಕೊಂಡಲವಾಡ ಹಲ್ಲೆಗೊಳಗಾದ ಯುವಕರು ಸ್ಥಳಿಯರು.. ಟೊಲ್ಗೆಟ್ ನಲ್ಲಿ ಕೆಲಸ ಮಾಡುತ್ತಿದ್ದರು. ಹಲ್ಲೆಗೊಳಗಾಗಿರುವ ಯುವಕರು ಗಂಬೀರವಾಗಿ ಗಾಯಗೊಂಡಿದ್ದಾರೆ. ಇವರನ್ನು ತಾಲೂಕಾ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಇಂದು ಬೆಳಿಗ್ಗೆ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾದ ನಂತರ ಗ್ರಾಮೀಣ ಠಾಣೆಯ ಪೊಲೀಸರು ಆರೋಪಿಗಳನ್ನು ಬಂದಿಸಿದ್ದಾರೆ.

Please follow and like us:
error