ಟಿಪ್ಪು ಸುಲ್ತಾನ್ ಜಯಂತಿ ಸತ್ಯ ಸಂದೇಶ ಸಾರುವ ಸಾಂಸ್ಕೃತಿ ಕಾರ್ಯಕ್ರಮ ನಡೆಸುವಂತೆ ಮನವಿ

tippu-jayanti

ಕೊಪ್ಪಳ:ನ-೮, ಕೊಪ್ಪಳ ಜಿಲ್ಲೆಯಲ್ಲಿ ಟಿಪ್ಪು ಸುಲ್ತಾನ್ ಜಯಂತಿಯನ್ನು ಶಾಂತಿಯುತವಾಗಿ ಆಚರಿಸುವುದು ಮತ್ತು ಸಾಮರಸ್ಯದ ಸತ್ಯ ಸಂದೇಶ ಸಾರುವ ಸಾಂಸ್ಕೃತಿ ಕಾರ್ಯಕ್ರಮಗಳನ್ನು ನಡೆಸುವಂತೆ ಕೊಪ್ಪಳ ಜಿಲ್ಲಾ ಕೋಮುಸೌಹಾರ್ಧತ ಸಮಿತಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದೆ.

ಕೊಪ್ಪಳ ಜಿಲ್ಲಾ ಕೋಮು ಸೌಹಾರ್ಧತೆ ಸಮಿತಿ ಈ ಪತ್ರದ ಮೂಲಕ ವಿನಂತಿಸಿಕೊಳ್ಳುವುದೇನೆಂದರೆ, ಈಗಾಗಲೆ ರಾಜ್ಯ ಸರ್ಕಾರ ಟಿಪ್ಪು ಸುಲ್ತಾನ ಜಯಂತಿಯನ್ನು ಆಚರಿಸಲು ತಿರ್ಮಾನಿಸಿದೆ. ಕೊಪ್ಪಳ ಜಿಲ್ಲೆಯಲ್ಲಿ ಜಯಂತಿಯನ್ನು ಶಾಂತಿಯುತವಾಗಿ ಆಚರಿಸಲು ನಮ್ಮ ಸಮಿತಿ ಎಲ್ಲಾ ಧರ್ಮದ ಜನರಿಗೆ ವಿನಂತಿಸಿದೆ. ಮತ್ತು ನಮ್ಮ ಸಮಿತಿಯ ಮುಖಂಡರು ಮತ್ತು ಸದ್ಯಸರು ದಿ ೧೦ ರಂದು ನಡೆಸುವ ಜಯಂತಿ ಕಾರ್ಯಕ್ರಮದಲ್ಲಿ ಬಾಗವಹಿಸಲಿದ್ದಾರೆ.

ರಾಜಕೀಯ ಲಾಭಕ್ಕಾಗಿ ಕೆಲವು ಕೋಮುವಾದಿ ಶಕ್ತಿಗಳು ರಾಜ್ಯದ ಬೇರೆ ಬೇರೆ ಭಾಗದಲ್ಲಿ ಟಿಪ್ಪುವಿನ ಬಗ್ಗೆ ತಪ್ಪಾದ ಪ್ರಚಾರ ನಡೆಸುವದರಿಂದ ಜಿಲ್ಲಾಡಳಿತ ಸತ್ಯವಾದ ವಿಷಯವನ್ನು ಪ್ರಚುರ ಪಡಿಸಲು ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂದು ವಿನಂತಿಸಿಕೊಳ್ಳುತೆವೆ. ಕೊಪ್ಪಳ ಜಿಲ್ಲೆಯ ಜನರು ಎಲ್ಲಾ ಧಾರ್ಮಿಕ, ಸೌಹಾರ್ಧತೆ ಸಹೋದರತೆಯುಳ್ಳವರಾಗಿದ್ದಾರೆ. ಜಯಂತಿಗೆ ವಿರೋಧ ಮಾಡುವಂತ ಸಂಕುಚಿತ ಮನಸುಳ್ಳವರಲ್ಲ. ಈ ಭಾಗದಲ್ಲಿ ಶಾಂತಿ ಸಾಮಾರಸ್ಯಗೆ ಸಹಕರಿಸುವ ಜನರಿರುವದರಿಂದ ತಾವುಗಳು ಯಾವುದೆ ಕಾರ್ಯಕ್ರಮ ಹಮ್ಮಿಕೊಂಡರು ಬೆಂಬಲಿಸಿ ಭಾಗವಹಿಸುತ್ತಾರೆ.

ಕೊಪ್ಪಳ ಕೋಮು ಸೌಹಾರ್ದತೆಗೆ ಹೆಸರಾದ ಶ್ರೀ ಸಿರಸಪ್ಪಯ್ಯ ಮಠದಿಂದ ಮೆರವಣಿಗೆ ಹೊರಟು ಮುಖ್ಯ ಬೀದಿಯ ಮೂಲಕ ಮೆರವಣಿಗೆ ನಡೆಸಬೇಕು, ಇದರಲ್ಲಿ ಜಿಲ್ಲಾಡಳಿತದ ಕಲಾತಂಡಗಳನ್ನು ಹೊರತುಪಡಿಸಿ ಬೇರೆ ವಾದ್ಯ ಧ್ವನಿ ವರ್ಧಕಗಳಿಗೆ ಅವಕಾಶ ಕೊಡಬಾರದು ಇಂಥ ಸಂದರ್ಭದಲ್ಲಿ ಮೂರನೆಯ ವ್ಯಕ್ತಿಗಳು ಹೊರಗಿನಿಂದ ಬಂದು ಸೃಷ್ಟಿಸುವ ವ್ಯಕ್ತಿಗಳ ಮೇಲೆ ಗುಪ್ತದಳ ಪೋಲಿಸರಿಂದ ಎಚ್ಚರಿಕೆ ಕಣ್ಣಿರಿಸಿ ಮೊದಲಿಗೆ ನಿಯಂತ್ರಿಸಬೇಕು.

ದೇಶಕ್ಕಾಗಿ ಹೋರಾಡಿದ ಎಲ್ಲಾ ಮಹಾತ್ಮರ ಜಯಂತಿಯನ್ನು ಆಚರಿಸಿದಂತೆ ಆಚರಿಸಬೇಕು ಮತ್ತು ಎಲ್ಲಾ ಇಲಾಖೆಯ ನೌಕರರು ಭಾಗವಹಿಸುವಂತೆ ಆದೇಶ ಮಾಡಬೇಕೆಂದು ಕೊಪ್ಪಳ ಜಿಲ್ಲಾ ಕೋಮುಸೌರ್ಹಾಧತ ಸಮಿತಿಯ ಮುಖಂಡರಾದ ವಿಠ್ಠಪ್ಪ ಗೋರಂಟ್ಲಿ, ಎಸ್.ಅಮ್ಜದ್ ಪಟೇಲ್, ಡಿ.ಹೆಚ್.ಪೂಜಾರ, ಮೈಲಪ್ಪ ಬಿಸರಳ್ಳಿ, ಎಂ.ಡಿ.ಯೂಸೂಫ್ ಖಾನ್, ಬಸವರಾಜ ಶೀಲವಂತರ್, ಮಹಾಂತೆಶ ಕೊತ್ಬಾಳ, ಎಂ.ಸಲೀಮ್ ಮಂಡಲಕೇರಿ, ಹೆಚ್.ಆರ್.ಎಫ್.ಡಿ.ಎಲ್. ಜಿಲ್ಲಾ ಸಂಚಾಲಕ ಹನುಮಂತಪ್ಪ ಮ್ಯಾಗಳಮನಿ, ಎಂ.ಎನ್.ದದೇಗಲ್, ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್, ಹೈದರಾಬಾದ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡ, ಸೈಯ್ಯದ್ ನಾಸೀರ್ ಕಂಠಿ, ಖತೀಬಬಾಶು ಸಾಬ, ಬಸವರಾಜ ಪೂಜಾರ, ಭಾರತ ಮಾನವ ಹಕ್ಕುಗಳ ಮತ್ತು ಗ್ರಾಹಕರ ಹಕ್ಕುಗಳ ಸಂರಕ್ಷಣಾ ಸಂಸ್ಥೆಯ ಜಿಲ್ಲಾ ಅಧ್ಯಕ್ಷ ಖಲೀಲ್ ಅಹ್ಮದ ಇನ್ನೂ ಮುಂತಾದವರು ಭಾಗವಹಿಸಿದ್ದರು.

Leave a Reply