ಜ.೧೧,೧೨ ರಂದು ಕನಕದಾಸ ಶಿಕ್ಷಣ ಸಂಸ್ಥೆಯ ಸುವರ್ಣಮಹೋತ್ಸವ ಹಾಗೂ ಅಮೃತ ಮಹೋತ್ಸವ

ಕೊಪ್ಪಳ ಡಿ,೨೬ : ಗದಗಿನ ಕನಕದಾಸ ಶಿಕ್ಷಣ ಸಂಸ್ಥೆಯ ಸುವರ್ಣ ಮಹೋತ್ಸವ ಹಾಗೂ ಸಂಸ್ಥಾಪಕರಾದ ಡಾ.ಬಿ.ಎಫ್.ದಂಡನ್‌ರವರ ಅಮೃತ ಮಹೋತ್ಸವದ ಸಂಭ್ರಮಾಚರಣೆಯು ಜನೇವರಿ ೧೧ ಹಾಗೂ ೧೨ ರಂದು ಗದಗ್‌ನ ಅಂಜುಮನ್ ಸಂಸ್ಥೆಯ ಆವರಣದಲ್ಲಿ ಜರಗಲಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ರವಿ ದಂಡಿನ್ ತಿಳಿಸಿದ್ದಾರೆ.
ಈ ಸಂಸ್ಥೆಯು ೬೦ ದಶಕದಿಂದ ಎಲ್ಲಾ ಸಮೂದಾಯದ ವಿದ್ಯಾರ್ಥಿಗಳು ಕನಕದಾಸ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಕೈಗೊಂಡು ಇಂದು ವಿವಿಧ ರಂಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಇದು ನಮಗೆ ಹರ್ಷವೆನಿನಸುತ್ತದೆ.
ಜನೇವರಿ ೧೧ ರಂದು ನಾಡಿನ ವಿವಿಧ ಮಠಾಧೀಶರರ ಸಮ್ಮುಖದಲ್ಲಿ ಸಂಸ್ಥಾಪಕ ಅಧ್ಯಕ್ಷರಾದ ಡಾ.ಬಿ.ಎಫ್.ದಂಡನ್ ಅವರಿಗೆ ಗೌರವಾಭಿನಂದನೆ ಅಮೃತ ಮಹೋತ್ಸವ ಜರುಗಲಿದೆ, ಜನೇವರಿ ೧೨ ರಂದು ಅಮೃತ ಮಹೋತ್ಸವದ ದಿವ್ಯ ಸಾನಿಧ್ಯವನ್ನು ಡಂಬಳ-ಗದಗ್‌ದ ಪೂಜ್ಯ ಶ್ರೀ ಜಗದ್ಗುರು ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು,ಕಾಗಿನೆಲೆ ಕನಕಗುರು ಪೀಠದ ಪೂಜ್ಯ ಶ್ರೀ ಜಗದ್ಗುರು ನಿರಂಜನಾನಂದಪುರಿ ಮಹಾಸ್ವಾಮಿಗಳು ವಹಿಸುವರು. ಉದ್ಘಾಟನೆ ಹಾಗೂ ಸುವರ್ಣಸಂಪುಟ ದಂಡಿನ ದಾರಿ ಗ್ರಂಥವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಲೋಕರ್ಪಣೆಗೊಳಿಸುವರು, ಎಸ್.ಸಿದ್ಧರಮಯ್ಯ ಸ್ನಾತಕೋತ್ತರ ಕೇಂದ್ರದ ನಾಮಫಲಕವನ್ನು ರಾಜ್ಯಸಭಾ ಸದಸ್ಯ ಆಸ್ಕರ ಫರ್ನಾಂಡಿಸ್ ನೇರವೇರಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಸ್ಥಾಪಕ ಡಾ.ಬಿ.ಎಫ್.ದಂಡಿನ್ ವಹಿಸುವರು.
ಸುವರ್ಣ ಸಂಚಿಕೆಯನ್ನು ಸಚಿವರಾದ ಹೆಚ್.ಕೆ.ಪಾಟೀಲ್ ಬಿಡುಗಡೆಗೊಳಿಸುವರು, ಈ ಕಾರ್ಯಕ್ರಮಕ್ಕೆ ಸಂಸ್ಥೆಯಲ್ಲಿ ಅಭ್ಯಸಿಸಿದ ವಿದ್ಯಾರ್ಥಿಗಳು, ಸಾಹಿತಿಗಳು, ಶಿಕ್ಷಣ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶ್ವಸಿಗೊಳಿಸಬೇಕು ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ಜಿಲ್ಲೆಯ ಕಾರ್ಯಕ್ರಮದ ಸಂಚಾಲಕರಾದ ಶಂಭುಲಿಂಗನಗೌಡ ಪಾಟೀಲ್ ಹಲಗೇರಿ ೯೯೦೨೫೭೪೨೨೨, ಬ್ರಹ್ಮಾನಂದ ಬಗನಾಳ ೯೪೮೨೬೫೩೯೯೯ ಸಂಪರ್ಕಿಸಲು ತಿಳಿಸಿದ್ದಾರೆ.

Please follow and like us:
error