ಜೈನ ತೇರಾಪಂಥ ಸಾಹಿತ್ಯ ಹಾಗೂ ಹಸ್ತಕಲಾ ಪ್ರದರ್ಶನ

jain_community_koppal jain_koppal
ಕೊಪ್ಪಳ: ಕೊಪ್ಪಳದ ತೇರಾಪಂಥ ಭವನದಲ್ಲಿ ಜೈನ ತೇರಾಪಂಥ ಸಾಹಿತ್ಯ ಹಾಗೂ ಹಸ್ತಕಲಾ ಪ್ರದರ್ಶನವನ್ನು ಕೊಪ್ಪಳದ ಜಿಲ್ಲಾಧಿಕಾರಿಗಳಾದ ಎಂ. ಕನಗವಲ್ಲಿರವರು ಉದ್ಘಾಟಿಸಿದರು.

ದುಶ್ಚಟಗಳಿಂದಾಗುವ ದುಷ್ಪರಿಣಾಮಗಳು, ಪರಿಸರ ಹಾನಿಯಿಂದಾಗುವ, ಕಳ್ಳತನ, ಅತ್ತೆ-ಸೊಸೆಯಂದಿರ ಜಗಳ, ಮಾಂಸಸೇವನೆ, ಮಧ್ಯಪಾನ, ಆತ್ಮಹತ್ಯೆ ಯಂತಹ ಕೃತ್ಯ ಎಸಗಿದರೆ ಮಾನವ ನರಕಕ್ಕೆ ಹೋಗುತ್ತಾನೆ ಎನ್ನು ಸಂದೇಶ ಸಾರುವ ಚಿತ್ರಗಳನ್ನು ಸಾದ್ವಿ ಶ್ರೀವಿದ್ಯಾವತಿಜೀ ಯವರು ಜಿಲ್ಲಾಧಿಕಾರಿಗಳಾದ ಎಂ. ಕನಗವಲ್ಲಿಯವರಿಗೆ ವಿವರಿಸಿದರು.

’ಇಂದಿರಾಗಾಂಧಿ ರಾಷ್ಟ್ರೀಯ ಸದ್ಭಾವನಾ ಏಕತಾ ಪ್ರಶಸ್ಥಿ’ ಪುರಸ್ಕೃತರು ಹಾಗೂ ಜೈನ ತೇರಾಪಂಥ ಆಚಾರ್ಯರಾದ ದಿವಂಗತ ಆಚಾರ್ಯ ತುಳಸಿ, ಆಚಾರ್ಯ ಮಹಾಪ್ರಜ್ಞ್ಯ ಇವರಿಂದ ರಚಿತವಾದ ೨೦೦ಕ್ಕೂ ಹೆಚ್ಚು ಕೃತಿಗಳ ಪ್ರದರ್ಶನವೂ ಇದೆ.

ನಗರಸಭೆ ಅಧ್ಯಕ್ಷರಾದ ಮಹೇಂದ್ರ ಛೋಪ್ರಾ, ತೇರಾಪಂಥ ಸಭಾ ಭವನದ ಅಧ್ಯಕ್ಷರಾದ ರಾಮಲಾಲ್‌ಜೀ ಜೈನ್, ಕಾರ್ಯದರ್ಶಿಗಳಾದ ರಾಜೇಂದ್ರ ಜೈನ್, ಜಿಲ್ಲಾ ವಾರ್ತಾಧಿಕಾರಿಗಳಾದ ಬಿ.ವಿ. ತುಕಾರಾಮ, ಹಿರಿಯರಾದ ದ್ಯಾಮಣ್ಣ ಚಿಲವಾಡಗಿ, ಪ್ರಮೋದ ಜೈನ್, ಭವರಲಾಲ ಜೈನ್, ನಯನಸುಖ್ ಜೈನ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Please follow and like us:
error