ಜೆಸ್ಕಾಂ ಗುತ್ತಿಗೆ ನೌಕರರಿಗೆ ನೇಮಕಾತಿಯಲ್ಲಿ ಆದ್ಯತೆ ನೀಡುವಂತೆ ಮನವಿ

keb-protest-koppalಆಪರೇಟರ್ ಹುದ್ದೆ ನೇಮಕಾತಿ ಕೈ ಬಿಡುವಂತೆ, ಜೆಸ್ಕಾಂ ಗುತ್ತಿಗೆ ನೌಕರರಿಗೆ ನೇಮಕಾತಿಯಲ್ಲಿ ಆದ್ಯತೆ ನೀಡುವಂತೆ  ಮನವಿ
*****

ಜೆಸ್ಕಾಂ ಕಂಪನಿಯು ಸುಮಾರು ೫೪೦ ಕಿರಿಯ ಸ್ಟೇಷನ್ ಆಪರೇಟರ್‌ಗಳ ನೇಮಕಾತಿಯನ್ನು ಘೋಷಿಸುವ ಮೂಲಕ ಈಗಾಗಲೇ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ಹತ್ತಾರು ವರ್ಷಗಳಿಂದ ಸೇವೆ ಸಲ್ಲಿಸಿರುವ ಗುತ್ತಿಗೆ ನೌಕರರನ್ನು ಬೀದಿಗೆ ತಳ್ಳುವ ಈ ನೇಮಕಾತಿಯನ್ನು ಕೈ ಬಿಡಬೇಕೆಂದು ಂIUಖಿUಅ ಸಂಯೋಜಿತ ಕರ್ನಾಟಕ ವಿದ್ಯುತ್ ಸರಬರಾಜು ಕಂಪನಿಗಳ ಗುತ್ತಿಗೆ ನೌಕರರ ಸಂಘ ಹಾಗೂ ಜೆಸ್ಕಾಂ ವಿದ್ಯುತ್ ಸರಬರಾಜು ಗುತ್ತಿಗೆ ನೌಕರರ ಸಂಘಟನೆಗಳು ಆಗ್ರಹಿಸುತ್ತವೆ.

ಗುತ್ತಿಗೆ ನೌಕರರನ್ನು ವಜಾಗೊಳಿಸಬಾರದು, ಈ ನೌಕರರನ್ನು ಖಾಯಂಗೊಳಿಸಲು ವಿಶೇಷ ನೇಮಕಾತಿ ನಿಯಮಾವಳಿಯನ್ನು ರೂಪಿಸಬೇಕೆಂದು, ಅಲ್ಲಿಯವರೆಗೂ ನೌಕರರನ್ನು ನೇರ ಗುತ್ತಿಗೆಯಡಿ ಮುಂದುವರೆಸಬೇಕು, ಇತ್ತೀಚೆಗೆ ಪರಿಷ್ಕೃತವಾದ ಹೆಚ್ಚಳವಾದ ವೇತನ, ಪಿ.ಎಫ್, ಇಎಸ್‌ಐ ಹಾಗೂ ಇತರ ಸುರಕ್ಷಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಮುಂತಾದ ಕೆಳಗೆ ಕಾಣಿಸಿದ ಬೇಡಿಕೆಗಳನ್ನು ಇದೀಗ ತಮ್ಮ ಅವಗಾಹನೆಗೆ ತರುತ್ತಿದ್ದೇವೆ.

೩೩/೧೧ ಕೆವಿ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ನೂರಾರು ವಿದ್ಯುತ್ ಗುತ್ತಿಗೆ ನೌಕರರು ಕಳೆದ ಹತ್ತಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವರು. ಹೊರ ಗುತ್ತಿಗೆ ಮೂಲಕ ಜೆಸ್ಕಾಂಗಳಲ್ಲಿ ನೇಮಕಗೊಂಡಿರುವ ವಿದ್ಯುತ್ ಗುತ್ತಿಗೆ ನೌಕರರು ಆಪರೇಟರ‍್ಸ್ ಮತ್ತು ಹೆಲ್ಪರ‍್ಸ್‌ಗಳಾಗಿ ಸೇವೆ ಸಲ್ಲಿಸುತ್ತಿರುವರು. ಖಾಯಂ ಸ್ವರೂಪದ ಹುದ್ದೆಗಳಲ್ಲಿ ಕೆಲಸ ಮಾಡುವ ಈ ನೌಕರರು ವಿದ್ಯಾರ್ಹತೆ, ಸೇವಾನುಭವ ಮತ್ತು ತಾಂತ್ರಿಕ ನೈಪುಣ್ಯತೆಯನ್ನು ಪಡೆದುಕೊಂಡು ಹಗಲಿರುಳು, ಅತ್ಯಂತ ಶ್ರದ್ಧೆಯಿಂದ ದುಡಿಯುತ್ತಾ ಇಡೀ ರಾಜ್ಯಕ್ಕೆ ಬೆಳಕು ನೀಡುತ್ತಿರುವರು. ಇವರಲ್ಲಿ ಅನೇಕರು ವಯೋಮಿತಿ ಅರ್ಹತೆಯನ್ನು ಕಳೆದುಕೊಂಡವರಿದ್ದಾರೆ. ಇಂದಿನ ದಿನಗಳಲ್ಲಿ ಇತ್ತೀಚೆಗೆ ಶಿಕ್ಷಣವನ್ನು ಮುಗಿಸಿರುವ
..ಪುಟ ೨ಕ್ಕೆ..,
– : ೨ : –
ವಿದ್ಯಾರ್ಥಿಗಳೊಂದಿಗೆ ಇವರು ಸ್ಫರ್ಧಿಸಲಾರರು. ವಯಸ್ಸಾದ ವೃದ್ಧ ತಂದೆ ತಾಯಿಗಳು, ಹೆಂಡತಿ ಮಕ್ಕಳ ಜವಾಬ್ದಾರಿಯನ್ನು ಹೊತ್ತಿರುವ ಈ ನೌಕರರು ಮತ್ತು ಇವರನ್ನು ಅವಲಂಭಿಸಿರುವ ಕುಟುಂಬಗಳು ಶಾಶ್ವತವಾಗಿ ಬೀದಿಗೆ ಬರುವಂತಾಗಿದೆ. ಇದರಿಂದ ಈ ನೌಕರರ ಬದುಕಿಗೆ ಕತ್ತಲನ್ನು ತುಂಬುವ ಜೆಸ್ಕಾಂ ಕಂಪನಿಯ ಈ ನೇಮಕಾತಿಯು ಸಾಮಾಜಿಕ ನ್ಯಾಯಕ್ಕೆ ಹೊರತಾಗಿದೆ !

ನೊಂದು ಬೆಂದಿರುವ ಗುತ್ತಿಗೆ ನೌಕರರ ನ್ಯಾಯಯುತ ಈ ಕೆಳಗಿನ ಬೇಡಿಕೆಗಳ ಪರಿಹಾರಕ್ಕೆ ಕಂಪನಿಯು ಮುಂದಾಗಬೇಕು. ಈ ನಿಟ್ಟಿನಲ್ಲಿ ಅನ್ಯಾಯಕ್ಕೊಳಗಾಗಿರುವ ವಿದ್ಯುತ್ ಗುತ್ತಿಗೆ ನೌಕರರ ಪರವಾಗಿ ತಾವು ಹಾಗೂ ರಾಜ್ಯ ಸರ್ಕಾರವು ಕೆಲವು ನಿರ್ಧಿಷ್ಟ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಈ ಮೂಲಕ ತಮ್ಮಲ್ಲಿ ಕರ್ನಾಟಕ ವಿದ್ಯುತ್ ಸರಬರಾಜು ಕಂಪನಿಗಳ ಗುತ್ತಿಗೆ ನೌಕರರ ಸಂಘಗಳು ಹಾಗೂ ಜೆಸ್ಕಾಂ ವಿದ್ಯುತ್ ಸರಬರಾಜು ಗುತ್ತಿಗೆ ನೌಕರರ ಸಂಘಗಳು ಜಂಟಿಯಾಗಿ ಕೋರುತ್ತ್ತಿವೆ.

ಬೇಡಿಕೆಗಳು:
೧. ಜೆಸ್ಕಾಂ ಕಂಪನಿಯಲ್ಲಿ ೫೪೦ ಆಪರೇಟರ‍್ಸ್ ಹುದ್ದೆ ಭರ್ತಿಗಾಗಿ ಕರೆದಿರುವ ಹೊಸ ನೇಮಕಾತಿಯನ್ನು ಸಧ್ಯ ಸೇವೆಯಲ್ಲಿರುವ ಗುತ್ತಿಗೆ ನೌಕರರಿಗೆ ಶೇ.೫೦%ರಷ್ಟು ಹುದ್ದೆಗಳನ್ನು ಮೀಸಲಿಟ್ಟು ಭರ್ತಿ ಮಾಡಿಕೊಳ್ಳಬೇಕು.
೨. ಖಾಯಂ ಸ್ವರೂಪದ ಹುದ್ದೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಈ ಗುತ್ತಿಗೆ ನೌಕರರು ಅರ್ಹ ವಿದ್ಯಾರ್ಹತೆಗೆ, ಸೇವಾನುಭವ, ತಾಂತ್ರಿಕ ನೈಪುಣ್ಯತೆ ಹೊಂದಿದ್ದು ಅದನ್ನು ಹೊಸ ನೇಮಕಾತಿಯಲ್ಲಿ ಪರಿಗಣಿಸಬೇಕು. ವಯೋಮಿತಿ ಹಾಗೂ ಇತರೆ ನಿಬಂಧನೆಗಳನ್ನು ಸಡಿಲಗೊಳಿಸಬೇಕು.
೩. ಸಧ್ಯ ಸೇವೆಯಲ್ಲಿರುವ ಗುತ್ತಿಗೆ ನೌಕರರು ಅತ್ಯಂತ ಕಡುಬಡವರಾಗಿದ್ದು, ಯಾವುದೇ ಕಾರಣಕ್ಕೂ ಅವರನ್ನು ಮತ್ತು ಕುಟುಂಬದವರನ್ನು ಹೊಸ ನೇಮಕಾತಿಯಿಂದ ಬೀದಿ ಪಾಲು ಮಾಡಬಾರದು.
೪. ಹೈದರಾಬಾದ್-ಕರ್ನಾಟಕ ಪ್ರದೇಶಾಭಿವೃದ್ಧಿಗೆ ಅನುಚ್ಛೇದ-೩೭೧(ಜೆ)ಯ ಅನ್ವಯ ದಿನಗೂಲಿ ಮತ್ತು ಗುತ್ತಿಗೆ ನೌಕರರಿಗೆ ಉದ್ಯೋಗ ಭದ್ರತೆ ಹಾಗೂ ಇತರೆ ಸೌಲಭ್ಯಗಳನ್ನು ಕಲ್ಪಿಸಬೇಕು.
೫. ಕಾರ್ಮಿಕ ವಿವಾದ ಕಾಯ್ದೆ ೧೯೪೭ ರ ಅಡಿಯಲ್ಲಿ ಸೇವೆ ಖಾಯಂಗಾಗಿ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಯು ಇತ್ಯರ್ಥವಾಗುವವರೆಗೂ ಅರ್ಜಿದಾರರ ಸೇವೆಯಲ್ಲಿ ಯಾವುದೇ ಬದಲಾವಣೆ ಮಾಡಬಾರದು ಹಾಗೂ ಅವರನ್ನು ಸೇವೆಯಿಂದ ವಜಾಗೊಳಿಸಬಾರದು.
೬. ವಿದ್ಯುತ್ ಗುತ್ತಿಗೆ ನೌಕರರ ಸೇವೆಯನ್ನು ಖಾಯಂಗೊಳಿಸಲು ಸೇವಾ ನಿಯಮಗಳಿಗೆ ಸೂಕ್ತ ತಿದ್ದುಪಡಿ ಮಾಡಬೇಕು. ಅಲ್ಲಿಯವರೆಗೂ ಹೊರ ಗುತ್ತಿಗೆ ಪದ್ದತಿಯನ್ನು ರದ್ದುಗೊಳಿಸಿ, ನೇರಗುತ್ತಿಗೆಯಲ್ಲಿ ಆ ನೌಕರರ ಸೇವೆಯನ್ನು ವಿಲೀನಗೊಳಿಸಿರಿ.
೭. ರಾಜ್ಯದ ವಿವಿಧ ಇಲಾಖೆಗಳಲ್ಲಿ ಗುತ್ತಿಗೆ ನೌಕರರ ಸೇವೆಯನ್ನು ಖಾಯಂಗೊಳಿಸಲು ಅನುಸರಿಸುವ ಮಾದರಿಯನ್ನು ಜೆಸ್ಕಾಂ ಕಂಪನಿಯು ಪಾಲಿಸಬೇಕು.
ಇಂದು ಕೊಪ್ಪಳ ಬಸ್ ನಿಲ್ದಾಣದಿಂದ ಪ್ರತಿಬಟಣಾ ಮೆರವಣಿಗೆ ಪ್ರಾರಂಬಿಸಿ ಂIUಖಿUಅ & ಂIPಈ ಗೆ ಸೇರ್ಪಡೆಗೊಂಡಿರುವ ಜೆಸ್ಕಾಂ ವಿದ್ಯುತ್ ಸರಬರಾಜು ಗುತ್ತಿಗೆ ನೌಕರರ ಸಂಘ ಮತ್ತು ಕರ್ನಾಟಕ ವಿದ್ಯುತ್ ಸರಬರಾಜು ಕಂಪನಿಗಳ ಗುತ್ತಿಗೆ ನೌಕರರ ಸಂಘಟನೆಗಳ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಈ ಪ್ರತಿಭಟನೆಯನ್ನು ಉದ್ದೇಶಿಸಿ ಸಂಘದ ರಾಜ್ಯಾಧ್ಯಕ್ಷರಾದ ಕೆ.ಸೋಮಶೇಖರ್ ರವರು ಮಾತನಾಡಿದರು. ಜೆಸ್ಕಾಂ ವಿದ್ಯುತ್ ಸರಬರಾಜು ಗುತ್ತಿಗೆ ನೌಕರರು ಭಾಗವಹಿಸಿದರು. ಪ್ರತಿಭಟನೆಯ ನಂತರ ಮಾನ್ಯ ಅಭಿಯಂತರರು, ಜೆಸ್ಕಾಂ ವಲಯ, ಕೊಪ್ಪಳ ಇವರ ಮೂಲಕ ಮಾನ್ಯ ಅಪರ ಮುಖ್ಯ ಕಾರ್ಯದರ್ಶಿಗಳು, ಇಂಧನ ಇಲಾಖೆ ಕರ್ನಾಟಕ ಸರ್ಕಾರ ಇವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ನಂತರ ಪ್ರತಿಭಟನೆಯು ಜೆಸ್ಕಾಂ ಮುಖ್ಯ ಅಭಿಯಾಂತರರ ಕಛೇರಿ ಮುಂದೆ ಪ್ರತಿಭಟನೆ ನಡೆಸಿ ಮಾನ್ಯ ವ್ಯವಸ್ಥಾಪಕ ನಿರ್ದೇಶಕರು ಜೆಸ್ಕಾಂ ಕಂಪನಿ ಇವರಿಗೆ ಮನವಿ ಪತ್ರವನ್ನು ಮುಖ್ಯ ಅಭಿಯಾಂತರರ ಮೂಲಕ ಕಳುಹಿಸಲಾಯಿತು.
ಈ ಪ್ರತಿಭಟನೆಯಲ್ಲಿ ಜಿಲ್ಲಾ ನಾಯಕರಾದ ಎ.ದೇವದಾಸ್, ಜೆಸ್ಕಾಂ ವಿದ್ಯುತ್ ಸರಬರಾಜು ಗುತ್ತಿಗೆ ನೌಕರರ ಸಂಘದ ಪದಾದಿಕಾರಿಗಳಾದ ದೇವರಾಜ್, ಸಂತೋಷ್, ಭಷೀರ್, ಶರಣಪ್ಪ, ಕೃಷ್ಣ, ಅಂಜಿನಪ್ಪ
ಮಾರುತಿ ಕಿನ್ನಾಳ್, ಎಮ್ಮಿಗನೂರಪ್ಪ, ಪ್ರಕಾಶ್ ಕುರಿ, ಕಲ್ಲೇಶ್,ಮಾರುತಿ, ರಮೇಶ ಗಿಣಗೇರ, ಗ್ಯಾನಪ್ಪ, ಶಿವು, ಬಸವರಾಜ ಕಟ್ಟಿ, ಬಸವರಾಜ ಉಸರಟ್ಟಿ, ಮೌಲಾಸಾಬ್. ಮತ್ತಿತರರು ಭಾಗವಹಿಸಿದ್ದರು.

Please follow and like us:
error