ಜುಲೈ 1 ರಿಂದ ವೈನ್ ದರ ಹೆಚ್ಚಳ.

ರಾಜ್ಯದಲ್ಲಿ ವೈನ್ ದರವನ್ನು ಶೇ.177ರಷ್ಟು ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದ್ದು, ನೂತನ ದರ ನಾಳೆಯಿಂದಲೇ ಜಾರಿಗೆ ಬರಲಿದೆ. ರಾಜ್ಯ ಗೆಜೆಟ್ ನಲ್ಲಿ ಜುಲೈ13438 1ರಿಂದ ಜಾರಿಗೆ ಬರುವಂತೆ ವೈನ್ ದರವನ್ನು ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ವೈನ್ ಪ್ರೋತ್ಸಾಹಕ್ಕೆ ಹೆಚ್ಚಿನ ಮಹತ್ವ ನೀಡುವ ಭರವಸೆ ನೀಡಿದ್ದ ಸರಕಾರ, ಇದೀಗ ರಾಜ್ಯದ ದ್ರಾಕ್ಷಿ ಬೆಳೆಗಾರರ ಜೀವನೋಪಾಯಕ್ಕೆ ಹೊಸ ಆಶಾಕಿರಣವನ್ನು ಹುಟ್ಟಿಸಿದ್ದ, ವೈನ್ ಉತ್ಪನ್ನಗಳ ಮೇಲೆ ಶೇಕಡಾ 160 ತೆರಿಗೆಯನ್ನು ಹೆಚ್ಚಿಸುವ ತೀರ್ಮಾನಕ್ಕೆ ಬಂದಿದೆ. ಜೂನ್ 22 ರಂದು ಗೆಜೆಟ್ ಪ್ರಕಟಣೆ ಹೊರಡಿಸಿರುವ ಸರಕಾರ ಕೇವಲ 7 ದಿನಗಳಲ್ಲಿ ಆಕ್ಷೇಪಣೆಯನ್ನು ಸಲ್ಲಿಸಲು ಅವಕಾಶ ನೀಡಿದ್ದು, ಅಲ್ಲದೆ ಜುಲೈ 1 ರಿಂದ ಈ ತೆರಿಗೆಗಳು ಅನ್ವಯವಾಗಲಿವೆ ಎನ್ನುವ ಎಚ್ಚರಿಕೆಯನ್ನೂ ನೀಡಿದೆ.
Please follow and like us:
error