ಜಿ.ಪಂ. ಗ್ರೂಪ್’ಡಿ’ ನೌಕರರಿಂದ ನಿವೃತ್ತರಿಗೆ ಸನ್ಮಾನ

zp-koppalಕೊಪ್ಪಳ ಜು. ೦೧ : ಜಿಲ್ಲಾ ಪಂಚಾಯತಿಯಲ್ಲಿ ವಯೋನಿವೃತ್ತಿ ಹೊಂದಿದ ಗ್ರೂಪ್’ಡಿ ಸಿಬ್ಬಂದಿ ದ್ಯಾಮಣ್ಣ ಅವರನ್ನು ಜಿ.ಪಂ. ನ ಎಲ್ಲ ಗ್ರೂಪ್ ಡಿ ನೌಕರರು ಸನ್ಮಾನಿಸಿ, ಆತ್ಮೀಯವಾಗಿ ಬೀಳ್ಕೊಟ್ಟರು.
ಜಿಲ್ಲಾ ಪಂಚಾಯತಿಯಲ್ಲಿ ಸುಮಾರು ೧೪ ವರ್ಷಗಳ ಕಾಲ ಗ್ರೂಪ್’ಡಿ ನೌಕರರಾಗಿ ಸೇವೆ ಸಲ್ಲಿಸಿದ ದ್ಯಾಮಣ್ಣ ಅವರು ಜೂ. ೩೦ ರಂದು ವಯೋ ನಿವೃತ್ತಿ ಹೊಂದಿದ ಕಾರಣ, ಜಿಲ್ಲಾ ಪಂಚಾಯತಿ ಗ್ರೂಪ್-ಡಿ ನೌಕರರು ದ್ಯಾಮಣ್ಣ ಅವರನ್ನು ಶಾಲು ಹೊದಿಸಿ, ಸನ್ಮಾನಿಸಿ, ಆತ್ಮೀಯವಾಗಿ ಬೀಳ್ಕೊಟ್ಟರು. ಜಿಲ್ಲಾ ಪಂಚಾಯತಿಯ ಎಲ್ಲ ಗ್ರೂಪ್-ಡಿ ನೌಕರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Please follow and like us:
error