ಜಿಲ್ಲೆಯಾಧ್ಯಂತ ಬಂದ್ : ಬೃಹತ್ ಪ್ರತಿಭಟನೆ

ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಕುಮಾರ ಶೆಟ್ಟಿ ಬಣ) ದಿಂದ ಮತ್ತು ಇತರೆ ಸಂಘಟನೆಗಳಿಂದ ಈಗಾಗಲೇ ಉತ್ತರ ಕರ್ನಾಟಕದ ಕಳಸಾ-ಬಂಡೂರಿ ಮತ್ತು ಮಹಾದಾಯಿ ನೀರಿಗಾಗಿ ಹೋರಾಟಕ್ಕಾಗಿ ಬಂದ್, ಹೋರಾಟ, ಪ್ರತಿಭಟನೆ ಮುಖಾಂತರ ಹೋರಾಟ ಮಾಡುತ್ತಿದ್ದು, ರಾಜ್ಯ ಸರ್ಕಾರವಾಗಲೀ, ಕೇಂದ್ರ ಸರ್ಕಾರವಾಗಲೀ ಈ ಭಾಗದ ರೈತರ ಕೂಗನ್ನು ಗಮನಿಸಿರುವುದಿಲ್ಲ. ಇದನ್ನು ಮನಗಂಡು ಕರ್ನಾಟಕ ರಕ್ಷಣಾ ವೇದಿಕೆಯು ದಿನಾಂಕ: ೩೦.೦೭.೨೦೧೬ ರಂದು ಕೊಪ್ಪಳ ಜಿಲ್ಲೆಯಾಧ್ಯಂತ ಬಂದ್ ಆಚರಿಸಿ ಬೃಹತ್ ಪ್ರತಿಭಟನೆ ಮೂಲಕ ನಮ್ಮ ಭಾಗದ ಅಂದರೆ ಉತ್ತರ ಕರ್ನಾಟಕ ಭಾಗದ ಜೀವ ನಾಡಿಯಾಗಿರುವ ಕಳಸಾ-ಬಂಡೂರಿ ಹಾಗೂ ಮಹಾದಾಯಿ ನೀರಿಗಾಗಿ ಹೋರಾಟ ಮಾಡುತ್ತಿದ್ದು, ಈ ಸಂಬಂಧಪಟ್ಟ ಕಳಸಾ-ಬಂಡೂರಿ ಹಾಗೂ ಮಹಾದಾಯಿ ಹಕ್ಕನ್ನು ನ್ಯಾಯಾಧೀಕರಣ ತಿರಸ್ಕರಿಸಿದ ಕುರಿತು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಹಾಗೂ ಇಲ್ಲಿದ್ದ ೨೮ ಸಂಸದರ ವಿರುದ್ಧ ಕೊಪ್ಪಳ koppal-strike koppal-strike1 ಆಚರಿಸುವುದರ ಜೊತೆಗೆ ಬೃಹತ್ ಪ್ರತಿಭಟನೆ ಮಾಡಲಾಗಿದ್ದು, ಇವರಿಗೆ ಈ ಜನಗಳ ಕೂಗು ಮತ್ತು ಅಳಿಲು ಕಿಂಚಿತ್ತಾದರೂ ಗೊತ್ತಿದ್ದರೆ ತಕ್ಷಣ ೨೮ ಮಂದಿ ಸಂಸದರು ರಾಜೀನಾಮೆ ಕೊಟ್ಟು ಹಾಗೂ ಈ ರಾಜ್ಯವನ್ನು ಆಳುತ್ತಿರುವ ರಾಜ್ಯ ಸರ್ಕಾರವು ಈ ಜನಗಳ ನ್ಯಾಯಯುತವಾಗಿರುವ ಹೋರಾಟಕ್ಕೆ ಬೆಂಬಲಿಸಿ ಮುಂದಿನ ಹೋರಾಟಕ್ಕೆ ಸಿದ್ಧರಾಗಬೇಕು. ಇಲ್ಲದಿದ್ದರೆ ರಾಜೀನಾಮೆ ನೀಡಿ ಮನೆಗೆ ಹೋಗಬೇಕೆಂದು ಬೃಹತ್ ಪ್ರತಿಭಟನೆ ಮೂಲಕ ಗೋವಾ ಸರ್ಕಾರದ ಭಂಡತನದ ನಿರ್ಧಾರಕ್ಕೆ ಎಚ್ಚರಿಕೆ ನೀಡಿ ಮನವಿ ಮಾಡಿಕೊಳ್ಳುತ್ತಿದ್ದೇವೆ.
ಈ ಸಂದರ್ಭದಲ್ಲಿ ಕಾರ್ಯಕರ್ತರುಗಳಾದ ಮುರಳಿ, ಶರಣಪ್ಪ ಪಲ್ಲವಿ, ಲಕ್ಷ್ಮಣ ಯಾದವ, ಉಮೇಶ, ರವಿ ಕೆಂಗೇರಿ, ಹುಲುಗಪ್ಪ ನಾಯಕ, ಪಾಂಡು ಕಟ್ಟಿಮನಿ ಇನ್ನಿತರರು ಉಪಸ್ಥಿತರಿದ್ದರು.

Please follow and like us:
error