ಧಿಕ್ಕಾರವಿರಲಿ…. ಜಿಲ್ಲೆಯಲ್ಲಿ ಇನ್ನೂ ಜೀವಂತವಿದೆ ಅಸ್ಪೃಶ್ಯತೆ ಆಚರಣೆ

untouchability_in_koppal-1 untouchability_in_koppal-2 untouchability_in_koppal-3

ಡಾ,ಬಿ.ಆರ್.ಅಂಬೇಡ್ಕರವರ 125ನೇ ಜನ್ಮದಿನೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿಯೂ ಸಹ ಜಿಲ್ಲೆಯಲ್ಲಿ ಇನ್ನೂ ಅಸ್ಪೃಶ್ಯತೆ ಜೀವಂತವಾಗಿದೆ. ಹೆಸರಿಗೆ ಮಾತ್ರ ಯಾವುದೇ ಜಾತಿ ತಾರತಮ್ಯ ಮಾಡಲಾಗುತ್ತಿಲ್ಲ , ಎಲ್ಲರೂ ಸಮಾನರು ಎಂದು ವೇದಿಕೆಗಳ ಮೇಲೆ  ನಾಯಕರುಗಳು ಬೊಬ್ಬೆಯೊಡದಿದ್ದೇ ಬಂತು. ಆದರೆ ಏನೂ ಬದಲಾಗಿಲ್ಲ. ಅಸ್ಪೃಶ್ಯತೆ ಎನ್ನುವ ಪಿಡುಗು ಇನ್ನೂ ಕೊಪ್ಪಳದಲ್ಲಿ ಎದ್ದು ಕಾಣುತ್ತಿದೆ.  ಜಿಲ್ಲಾ ಕೇಂದ್ರ ಕೊಪ್ಪಳದಿಂದ ಕೇವಲ 20 ಕಿಮಿಗಳ ಅಂತರದ ಕಾತರಕಿ ಗುಡ್ಲಾನೂರಿನಲ್ಲಿ ಈಗಲೂ ಅಸ್ಪೃಶ್ಯತೆಯನ್ನು ಮುಕ್ತವಾಗಿ ಆಚರಿಸಲಾಗುತ್ತಿದೆ. ಅದು ಸಹಜ ಕ್ರಿಯೆ ಎನ್ನುವಂತೆ ನಡೆದುಕೊಳ್ಳಲಾಗುತ್ತಿದೆ. ಇದು ನಿರಂತರವಾಗಿ ಇದ್ದೇ ಇದೆ. ಆದರೆ ನಿನ್ನೆಯ ದಿನ ಮಗುವಿಗೆ ಕ್ಷೌರ ಮಾಡಿಸಲು ಹೋದ ಲಕ್ಷ್ಮಣ ಎನ್ನುವ ಯುವಕನಿಗೆ ಕ್ಷೌರ ಮಾಡುವುದಿಲ್ಲ ಹೋಗಿ ಎಂದು ವಾಪಸ್ ಕಳಿಸಲಾಗಿದೆ.   ಈ ಊರಿನಲ್ಲಿ ಈಗಲೂ ದಲಿತರು ಕಟಿಂಗ್ ಮಾಡಿಸಿಕೊಳ್ಳಲು ಹಿರೇಸಿಂದೋಗಿ ಇಲ್ಲವೇ ಜಿಲ್ಲಾ ಕೇಂದ್ರ ಕೊಪ್ಪಳಕ್ಕೆ ಬರಬೇಕು. ಇಲ್ಲಿ ಯಾವುದೇ ದೇವಸ್ಥಾನಗಳಲ್ಲಿ ದಲಿತರಿಗೆ ಪ್ರವೇಶವಿಲ್ಲ. ಹೋಟೆಲ್ ಗಳಲ್ಲಿ ಪ್ರವೇಶವಿಲ್ಲ.  ಇದು ನಿರಂತರವಾಗಿ ನಡೆದುಕೊಂಡು ಬಂದಿದೆ.  ನಾವಂತೂ  ಅಸ್ಪೃಶ್ಯತೆಗೆ ಬಲಿಯಾಗಿದ್ದೇವೆ ನಮ್ಮ ಮಕ್ಕಳಿಗಾದರೂ ಕಟಿಂಗ್ ಮಾಡಿ ಎಂದು ಅಂಗಡಿಗೆ ಹೋಗಿದ್ದೇ ತಪ್ಪಾಗಿದೆ. ಮೊದಲಿನಿಂದ ಬಂದಂತಹ ರೀತಿಯಲ್ಲಿಯೇ ನಡೆದುಕೊಳ್ಳಿ ನಿಮಗೆ ಕಟಿಂಗ್ ಮಾಡುವುದಿಲ್ಲ  ಹೋಗಿ ಎಂದು ಕ್ಷೌರಿಕ ವಾಪಸ್ ಕಳಿಸಿದ ಮೇಲೆ ದಲಿತ ಸಂಘಟನೆಯವರು ಕೇಳಲು ಹೋದರೆ ಊರಿನ ಹಿರಿಯರು ನೋಡೋಣ ಮುಂದೆ ಮೀಟಿಂಗ್ ಮಾಡೋಣ ಎನ್ನುತ್ತಿದ್ಧಾರೆ. ಇದೇ ಊರಿನಲ್ಲಿ ಜಿಲ್ಲಾ ಪಂಚಾಯತ್ , ತಾಲೂಕ ಪಂಚಾಯತ್ ಸದಸ್ಯರಿದ್ದಾರೆ, ಇಲ್ಲಿ  ಸಾರ್ವಜನಿಕವಾಗಿಯೇ ಅಸ್ಪೃಶ್ಯತೆ ಆಚರಿಸಲಾಗುತ್ತಿದೆ.

ಕೊಪ್ಪಳ ತಾಲೂಕಿನ ಕಾತರಕಿ ಗುಡ್ನಾನೂರು ಗ್ರಾಮದಲ್ಲಿ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ೬೯ ವರ್ಷಗಳು ಕಳೆದರೂ ಕೂಡಾ ಈ ಗ್ರಾಮದ ದಲಿತ ಜನರಿಗೆ ಮಾತ್ರ ಇನ್ನು ವರೆಗೂ ಸ್ವಾತಂತ್ರ್ಯ ಸಿಕ್ಕಿಲ್ಲ. ಯಾಕೇಂದರೆ ಈ ಗ್ರಾಮದ ದಲಿತರು ಯಾವದೇ ಹೋಟೇಲ್ ಗಳಿಗೆ ಹೋಗಬೇಕು ಎಂದರು ಇವರನ್ನು ಹೋಟೇಲ್ ಒಳಗಡೆ ಕರೆದುಕೋಳ್ಳಲ್ಲ ಇವರಿಗೆಂದೇ ಹೋಟೇಲ್ ಹೋರಗಡೆ ಪ್ರತ್ಯೇಕವಾದ ತಟ್ಟೆಗಳನ್ನು ಇಡಲಾಗಿದೆ. ಇನ್ನು ನೀರನ್ನು ಕುಡಿಯಲು ಹೋದರೆ ಇವರಿಗೆ ಗ್ಲಾಸ್ ಗಳನ್ನು ಕೂಡಾ ಕೋಡುವದಿಲ್ಲ. ಜಗ್ ನ್ನು ಬಳಸಿ ನೀರನ್ನು ಮೇಲಿನಿಂದ ಎತ್ತಿ ನೀರನ್ನು ಹಾಕುತ್ತಾರೆ. ಸ್ವಂತ ಗ್ರಾಮದಲ್ಲಿ ಮಾತ್ರ ಇವರು ಇನ್ನುವರೆಗೂ ಕ್ಷೌರವನ್ನು ಮಾಡಿಸಿಯೇ ಇಲ್ಲ. ಇವರು ಏನಾದರೂ ಕ್ಷೌರ ಮಾಡಿಸಿಕೋಳ್ಳಬೇಕು ಎಂದರೆ ೨೦ ಕಿಲೋ ಮಿಟರ್ ದೂರದ ಕೊಪ್ಪಳಕ್ಕೆ ಹೊಗಬೇಕು.

ಈ ಕುರಿತು ಸ್ಥಳಿಯ ಯುವಕರು ಸಾಕಷ್ಟು ಬಾರಿ ಸ್ಥಳಿಯ ಮೆಂಬರ್ ಗಳ, ಮುಖಂಡರ  ಗಮನಕ್ಕೆ ತಂದರೂ ಯಾವದೇ ಪ್ರಯೋಜನವಾಗಿಲ್ಲ.

ಲಕ್ಷ್ಮಣ ಎಂಬಾತ ನಿನ್ನೆ ತನ್ನ ಮಗಳನ್ನು ತೆಗೆದುಕೋಂಡು ಕ್ಷೌರಿಕ್ ಅಂಗಡಿಗೆ ಕಟಿಂಗ್ ಮಾಡಿಸಲು ಹೋಗಿದ್ದಾನೆ. ಈ ಸಂದರ್ಭದಲ್ಲಿ  ಕ್ಷೌರಿಕ್ ಕಟಿಂಗ್ ಮಾಡಲು ಆಗುವದಿಲ್ಲ ಎಂದಿದ್ದಾನೆ, ಆಗ ಆತ ಬಂದು ಕೆಲ  ಯುವಕರಿಗೆ ತಿಳಿಸಿದ್ದಾನೆ, ಯುವಕೆರೆಲ್ಲರೊ ಒಟ್ಟಿಗೆ ಸೇರಿ ಚಿಕ್ಕ ಮಕ್ಕಳಿಗೆ ಕಟಿಂಗ್ ಮಾಡಿದರೇನೆ ತೋಂದರೆ, ನಮಗಂತೂ ಇಲ್ಲಿ ಕಟಿಂಗ್ ಮಾಡುವದಿಲ್ಲ, ಚಿಕ್ಕಮಕ್ಕಳಿಗಾದರೂ ಮಾಡಿ ಎಂದು ವಾಗ್ವಾದಕ್ಕೆ ಇಳಿದಿದ್ದಾರೆ. ಆಗ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿದೆ. ಆಗ ಗ್ರಾಮದ ಹಿರಿಯರು ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಆಗಮಿಸಿ ಈ ಸಮಸ್ಯೆಯ ಕುರಿತು ಸಭೆ ಮಾಡುತ್ತೇವೆ ಬಳಿಕ ಒಂದು ನಿರ್ಣಯ ಕೈಗೋಳ್ಳುತ್ತೇವೆ ಹಿಂದಿನಿಂದ ನಡೆದು ಕೋಂಡು ಬಂದ ಸಂಪ್ರದಾಯವನ್ನು ನೀವು ಪಾಲಿಸಲೇ ಬೇಕು ಎಂದು ಹೇಳಿ ಕಳುಹಿಸಿದ್ದಾರೆ.   ಸುದ್ದಿ ಪ್ರಸಾರವವಾಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು, ಪೋಲಿಸರು ಗ್ರಾಮಕ್ಕೆ ಆಗಮಿಸಿ ಶಾಂತಿ ಸಭೆ ನಡೆಸಿದರು. ಅಸ್ಪೃಶ್ಯತೆ ಆಚರಣೆ ಮಾಡಲಾಗುತ್ತಿರುವುದರ ಬಗ್ಗೆ ದಲಿತರು ಹೇಳಿದ್ದನ್ನು ಕೇಳಿಕೊಂಡು ಅಧಿಕಾರಿಗಳು ಗ್ರಾಮದ ಮುಖಂಡರು, ಹಿರಿಯರೊಂದಿಗೆ ಮಾತುಕತೆ ನಡೆಸಿದರು.ಸುದ್ದಿ ಪ್ರಸಾರವಾದ ಮೇಲೆ ಎಚ್ಚೆತ್ತ ಅದಿಕಾರಿಗಳು ಗ್ರಾಮಸ್ಥರೊಂದಿಗೆ ಸಭೆ ನಡೆಸಿ ಅಸ್ಪೃಶ್ಯತೆಯನ್ನು ಆಚರಿಸುತ್ತಿರುವವರಿಗೆ ನೋಟಿಸ್ ನೀಡಿ ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ನೋಡಿಕೊಳ್ಳುವುದಾಗಿ ಭರವವಸೆ ನೀಡಿದ್ದಾರೆ. ಗ್ರಾಮದ ಹಿರಿಯರು ಇದಕ್ಕೆ ಒಪ್ಪಿಕೊಂಡಿದ್ದು ಮುಂದಿನ ದಿನಗಳಲ್ಲಿ ಈ ರೀತಿ ಘಟನೆ ಮರುಕಳಿಸದಂತೆ ನೋಡಿಕೊಳ್ಳುವುದಾಗಿ ಹೇಳಿದ್ದಾರೆ.ಹಾಲೇಶ್ ಕಂದಾರಿ ಸೇರಿದಂತೆ ಇತರೆ ದಲಿತ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು.  ಈಗ ಪರಿಸ್ಥಿತಿಯೇನೋ ನಿಯಂತ್ರಣದಲ್ಲಿದೆ ಮತ್ತು ಶಾಂತಿ ಸಭೆ ನಡೆಸಿ ಸಂಧಾನ ಮಾಢಲಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ೬೯ ವರ್ಷ ಕಳೆದರೂ ಅಸ್ಪ್ರಶ್ಯತೆ ಮಾತ್ರ ಈ ಗ್ರಾಮದಲ್ಲಿ ದೂರವಾಗದಿರುವದು ವಿಪರ್ಯಾಸವೇ ಸರಿ,  ಮುಂದಿನ ದಿನಗಳಲ್ಲಿ ಇದು ಮರುಕಳಿಸದಂತೆ ನೋಡಿಕೊಳ್ಳುವುದು ಜಿಲ್ಲಾಡಳಿತದ ಜವಾಬ್ದಾರಿಯಾಗಿದೆ.  ಇಲ್ಲದಿದ್ದರೆ ಸಮಾತನತೆಯ ಬದುಕಿಗಾಗಿ ದಲಿತರು ಹೋರಾಟಕ್ಕೆ ಸಿದ್ದರಾಗುವ ಎಚ್ಚರಿಕೆ ನೀಡಿದ್ದಾರೆ.

Leave a Reply