ಜಿಲ್ಲೆಯನ್ನು ಹಸಿರಾಗಿಸಲು ಪ್ರತಿಯೊಬ್ಬರು ಮುಂದಾಗಿ: ಎಂ.ಕನಗವಲ್ಲಿ

koppal_dc_m_kanagavalli

ಪ್ರತಿಯೊಬ್ಬ ನಾಗರಿಕರು ಸಸಿ ನೆಡುವ ಮೂಲಕ ಪರಿಸರ ಹಸಿರಾಗಿಸಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಸಸಿ ನೆಡುವ ಮೂಲಕ ಪರಿಸರ ಹಸಿರಾಗಿಸುವ ಅಭಿಯಾನವನ್ನು ಆಯೋಜಿಸುವ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಜೂನ್.೫ ರಂದು ಪರಿಸರ ದಿನಾಚರಣೆಯಿದ್ದು ಅಂದು ಜಿಲ್ಲೆಯ ಎಲ್ಲ ನಾಗರಿಕರು ತಮ್ಮ ತಮ್ಮ ಮನೆಮುಂಭಾಗದಲ್ಲಿ ಎರಡೆರಡು ಸಸಿನೆಟ್ಟು ಪರಿಸರ ಹಸಿರಾಗಿಸುವ ಅಭಿಯಾನಕ್ಕೆ ಕೈಜೋಡಿಸಬೇಕು. ಕೊಪ್ಪಳ ಜಿಲ್ಲೆಯಲ್ಲಿ ಅರಣ್ಯದ ಪ್ರಮಾಣ ಕೇವಲ ಶೇ.೫ ರಷ್ಟಿದ್ದು ಇದರಿಂದಾಗಿ ಜಿಲ್ಲೆಗೆ ಸತತ ಬರ ಬರಿಸ್ಥಿತಿ ಎದುರಾಗುತ್ತಿದೆ ಆದ್ದರಿಂದ ಪ್ರತಿಯೊಬ್ಬ ನಾಗರಿಕರು ಜಿಲ್ಲೆಯನ್ನು ಹಸಿರಾಗಿಸಲು ಮುಂದಾಗಬೇಕೆಂದು ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಮನವಿ ಮಾಡಿದರು.
ಸುಂದರ ಉದ್ಯಾನ:ನಗರಸಭೆ ಹಾಗೂ ನಗರಾಭಿವೃದ್ಧಿಯ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಎಷ್ಟು ಖಾಲಿ ಜಾಗೆಗಳಿವೆ ಎಂದು ನೋಡಿ ಸೂಕ್ತವಾದ ಸ್ಥಳಗಳಲ್ಲಿ ಮಕ್ಕಳಿಗೆ ಆಟವಾಡಲು ಸುಂದರವಾದ ಉದ್ಯಾನ ನಿರ್ಮಿಸಲು ತೀರ್ಮಾನಿಸಲಾಯಿತು. ನೀರಿನ ಅಭಾವವರಿರುವ ಉದ್ಯಾನದ ಸ್ಥಳಗಳಲ್ಲಿ ಬೋರ್‌ವೆಲ್ ಕೊರೆಯಿಸಿ ನೀರು ಪೂರೈಸಲು ಕ್ರಮ ಕೈಗೊಳ್ಳುವಂತೆಯೂ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಮಾತನಾಡಿ ಕೊಪ್ಪಳ ಸುತ್ತಮುತ್ತ ಇರುವ ಎಲ್ಲಾ ಕಾರ್ಖಾನೆಗಳು ತಮ್ಮ ಸುತ್ತಮುತ್ತಲಿನ ಶಾಲೆ ಹಾಗೂ ಗ್ರಾಮ ಪಂಚಾಯತಿ ಪ್ರದೇಶಗಳಲ್ಲಿ ಉದ್ಯಾನವನಗಳನ್ನ ನಿರ್ಮಿಸಿ ಹಸಿರು ಅಭಿಯಾನಕ್ಕೆ ಕೈಜೊಡಿಸಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಪ್ರವೀಣ ಕುಮಾರ ಮಾತನಾಡಿ ದೇವಸ್ಥಾನ, ಮಸೀದಿ, ಚರ್ಚ್‌ಗಳ ಮುಂಭಾಗದಲ್ಲಿ ಹಾಗೂ ಎಲ್ಲೆಲ್ಲಿ ಸಾರ್ವಜಿಕ ಸ್ಥಳ ಖಾಲಿ ಇವೆಯೊ ಅಲ್ಲಿ ಸಸಿನೆಡಲಾಗುತ್ತಿದ್ದು ಸಂಘ ಸಂಸ್ಥೆಗಳು ಪರಿಸರ ಹಸಿರಾಗಿಸುವ ಅಭಿಯಾನಕ್ಕೆ ಕೈಜೋಡಿಸಬೇಕು ಎಂದರು. ಕೊಪ್ಪಳವನ್ನು ಹಸಿರುಮಯ ಮಾಡಲು ಪ್ರತಿಯೊಬ್ಬ ನಾಗರಿಕರು ಮುಂದಾಗಬೇಕು ಎಂದರು. ನಗರದಲ್ಲಿ ಎಲ್ಲೆಲ್ಲಿ ಸಾರ್ವಜನಿಕ ಸ್ಥಳ ಖಾಲಿ ಇವೆ ಎಂದು ಇನ್ನೆರಡು ದಿನಗಳಲ್ಲಿ ವಿವರಣೆ ನೀಡಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.
ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್.ರಾಮಚಂದ್ರನ್, ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ, ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ಬಿ.ಸುಂಕಪ್ಪ, ಜಿಲ್ಲಾ ಅರಣ್ಯಾಧಿಕಾರಿ ಸಿ.ಡಿ.ಬೋರ‍್ಕರ್, ನಗರಸಭೆ ಪೌರಾಯುಕ್ತ ರಮೇಶ್ ಪಟ್ಟೇದಾರ, ಬಸವರಾಜ ಬಳ್ಳೊಳ್ಳಿ, ಶಿವಾನಂದ ಹೊದ್ಲೂರ, ವಿವಿಧ ಕಾರ್ಖಾನೆಯ ಪ್ರತಿನಿಧಿಗಳು ಹಾಗೂ ಸಂಘ ಸಂಸ್ಥೆಯ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Related posts

Leave a Comment