ಜಿಲ್ಲಾ ವಕೀಲರ ಸಂಘಕ್ಕೆ ಸಂಸದರಿಂದ 5 ಲಕ್ಷ ಅನುಧಾನ

karadi_sanganna_koppalಇತ್ತೀಚಿಗೆ ನಡೆದ ವಕೀಲರ ದಿನಾಚರಣೆ ಕಾರ್ಯಕ್ರಮದಲ್ಲಿ ವಾಗ್ದಾನ ಮಾಡಿದಂತೆ ಕೊಪ್ಪಳದ ಸಂಸದರಾದ  ಸಂಗಣ್ಣ ಕರಡಿಯವರು ತಮ್ಮ ಸ್ಥಳಿಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ರೂ. ೫,೦೦,೦೦೦/- ಗಳ ಅನುಧಾನವನ್ನು ಕೊಪ್ಪಳ ಜಿಲ್ಲಾ ವಕೀಲರ ವಾಚನಾಲಯ ಕಟ್ಟಡ ಹಾಗು ಕಾನೂನು ಪುಸ್ತಕಗಳು ಮತ್ತು ಪೀಠೋಪಕರಣಗಳಿಗಾಗಿ ಹಣ ಬಿಡುಗಡೆ ಮಾಡಿದ್ದಾರೆ. ಜಿಲ್ಲಾ ವಕೀಲರ ಸಂಘದ ಮನವಿಗೆ ಸ್ಪಂದಿಸಿ ಅನುಧಾನ ಬಿಡುಗಡೆ ಮಾಡಿರುವ ಮಾನ್ಯ ಸಂಸದರಾದ  ಸಂಗಣ್ಣ ಕರಡಿ ಅವರಿಗೆ ಕೊಪ್ಪಳದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ  ರಾಘವೇಂದ್ರ. ಬಿ. ಪಾನಘಂಟಿ, ಕಾರ್ಯದರ್ಶಿಗಳಾದ  ಉಮೇಶ ಮಾಳೆಕೊಪ್ಪ ಹಾಗು ಸಂಘದ ಸರ್ವ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.

 

Leave a Reply