ಜಿಲ್ಲಾ ಮಟ್ಟದ ವ್ಯೆಕ್ತಿತ್ವ ವಿಕಸನ ಶಿಬಿರ ಮುಕ್ತಾಯ

bala-vikasa-academy
ಕೊಪ್ಪಳ: ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಧಾರವಾಡ ಹಾಗೂ ಡಾ.ಬಿ.ಆರ್ ಅಂಬೇಡ್ಕರ ಶಿಕ್ಷಣ ಮತ್ತು ಮಾನವ ಸಂಪನ್ಮೂಲ ಅಭಿವೃದ್ದಿ ಸಂಸ್ಥೆ (ರಿ) ಕೊಪ್ಪಳ ಇವರ ಸಯೋಗದಲ್ಲಿ ನಡೆದ ಜಿಲ್ಲಾ ಮಟ್ಟದ ವ್ಯಕ್ತಿತ್ವ ವಿಕಸನ ಶಿಬಿರವು ದಿನಾಂಕ ೦೪-೦೬-೨೦೧೬ ರಂದು ಸಾಯಂಕಾಲ ೪ ಗಂಟೆಗೆ ಡಾ. ಜ.ಚ.ನಿ ಜನ್ಮಶತಾಬ್ದಿ ಭವನದಲ್ಲಿ ಸಮಾರೋಪಗೊಂಡಿತ್ತು ಈ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅಕಾಡೆಮಿಯ ಯೋಜನಾ ನಿರ್ದೇಶಕರಾದ ವಸಂತ ಪ್ರೇಮಾ ಅಕಾಡೆಮಿಯ ಕಾರ್ಯಕ್ರಮಗಳಿರುವುದೇ ಮಕ್ಕಳ ವಿಕಾಸಕ್ಕಾಗಿ, ಇಂತಹ ಶಿಬಿರಗಳು ಯಶಸ್ವಿಯಾದರೆ ಸರ್ಕಾರದ ಯೋಜನೆಗಳು ಯಶಸ್ವಿಯಾದಂತೆ ಸ್ವಯಂ ಸೇವಾ ಸಂಸ್ಥೆಗಳು ಇನ್ನೂ ಹೆಚ್ಚಿನ ರೀತಿಯಲ್ಲಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಮುಂದೆ ಬರಬೇಕು ಎಂದು ಹೇಳಿದರು. ಸಂಸ್ಥೆಯ ಅಧ್ಯಕ್ಷರಾದ ಡಾ. ಬಿ. ಜ್ಞಾನಸುಂದರ ಮೂರು ದಿನ ಶಿಬಿರದ ವರದಿಯನ್ನು ಕಾರ್ಯಕ್ರಮದಲ್ಲಿ ಸ್ವವಿಸ್ತಾರವಾಗಿ ವಿವರಿಸಿದರು.
ಕಾರ್ಯಕ್ರಮದ ಮುಖ್ಯಅತಿಥಿಗಳಾಗಿ ಶಿಶುಅಭಿವೃದ್ದಿ ಯೋಜನಾ ಅಧಿಕಾರಿಯಾದ ಶ್ರೀಮತಿ ಮಂದಾಕಿನಿ, ಜಿಲ್ಲಾ ಅನುಷ್ಠಾನ ಸಮಿತಿ ಸದಸ್ಯರಾದ ಗವಿಸಿದ್ದಪ್ಪ ಕರ್ಕಿಹಳ್ಳಿ, ಬಿ. ಗಿರೀಶಾನಂದ ಜ್ಞಾನಸುಂದರ, ಸಂಪನ್ಮೂಲ ವ್ಯಕ್ತಿಗಳಾದ ಹೆಚ್.ಎಸ್.ಹೊನ್ನೂಂಚಿ, ವಜೀರಸಾಬ್, ಯಮನೂರಪ್ಪ ಭಜಂತ್ರಿ, ಲಕ್ಷ್ಮಣ ಕುಣಿಕೇರಿ, ಮಂಜುಶ್ರೀ ಲಕಮಾಪೂರ, ವೈಶಂಪಾಯನ, ಶರಣಪ್ಪ ಕಡಿ, ಹಾಗೂ ಇನ್ನು ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಂಸ್ಥೆಯ ನಿರ್ದೇಶಕರಾದ ಬಿ.ಮಧು ಪ್ರಸಾದ ನಿರೂಪಿಸಿ ವಂದಿಸಿದರು.

Leave a Reply