ಜಿಲ್ಲಾ ಮಟ್ಟದ ವ್ಯಕ್ತಿತ್ವ ವಿಕಸನ ಶಿಬಿರ ಆಯೋಜನೆ

ಕೊಪ್ಪಳ: ಡಾ|| ಬಿ.ಆರ್.ಅಂಬೇಡ್ಕರ ಶಿಕ್ಷಣ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆ (ರಿ) ಕೊಪ್ಪಳ, ಕರ್ನಾಟಕ ಬಾಲವಿಕಾಸ ಅಕಾಡೆಮಿ ಧಾರವಾಡ ಇವರ ಸಹಯೋಗದಲ್ಲಿ ಜಿಲ್ಲಾ ಮಟ್ಟದ ವ್ಯಕ್ತತ್ವ ವಿಕಸನ ಶಿಬಿರ ವನ್ನು ದಿನಾಂಕ: ೨/೬/೨೦೧೬ ರಂದು ನಗರದ ಡಾ|| ಜ.ಚ.ನಿ.ಜನ್ಮಶತಾಬ್ದಿ ಭವನದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮವನ್ನು ಸಣ್ಣನೀರಾವರಿ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಶಿವರಾಜ ಎಸ್. ತಂಗಡಗಿ ಉದ್ಘಾಟಿಸುವರು, ಕೊಪ್ಪಳ ಶಾಸಕರಾದ ಶ್ರೀ ರಾಘವೇಂದ್ರ ಹಿಟ್ನಾಳ ಅಧ್ಯಕ್ಷತೆ ವಹಿಸುವರು, ಮಾನ್ಯ ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷರಾದ ಶ್ರೀಮತಿ ದಾಕ್ಷಾಯಣಿ ಬಸವರಾಜ ಜ್ಯೋತಿ ಬೆಳಗಿಸುವರು, ಡಾ|| ಬಿ.ಆರ್.ಅಂಬೇಡ್ಕರ ಶಿಕ್ಷಣ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆ (ರಿ) ಅಧ್ಯಕ್ಷರಾದ ಡಾ|| ಬಿ.ಜ್ಞಾನಸುಂದರ ಉಪಸ್ಥಿತಿಯಲ್ಲಿ ಉದ್ಘಾಟನೆ ಜರುಗುವುದು. ಸುದ್ದಿ ಚಿಂತನ ಪತ್ರಿಕೆಯ ಸಂಪಾದಕರಾದ ಸಿ.ಹೆಚ್ ನಾರನಾಳ ವಿಶೇಷ ಉಪನ್ಯಾಸ ನೀಡುವರು. ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಮಾನ್ಯ ಅಧ್ಯಕ್ಷರು ಕೊಪ್ಪಳ ಜಿ.ಪಂ.  ಎಸ್.ಬಿ.ನಾಗರಳ್ಳಿ, ಮಾನ್ಯ ಕೊಪ್ಪಳ ಲೋಕಸಭಾ ಸದಸ್ಯರು  ಸಂಗಣ್ಣ ಕರಡಿ, ಮಾನ್ಯ ಯಲಬುರ್ಗಾ ಶಾಸಕರಾದ ಶ್ರೀ ಬಸವರಾಜ ರಾಯರಡ್ಡಿ, ಮಾನ್ಯ ಗಂಗಾವತಿ ಶಾಸಕರಾದ  ಇಕ್ಬಾಲ್ ಅನ್ಸಾರಿ, ಮಾನ್ಯ ಕುಷ್ಟಗಿ ಶಾಸಕರಾದ ದೊಡ್ಡನಗೌಡ ಪಾಟೀಲ್ ಮಾನ್ಯ ಕೊಪ್ಪಳ ತಾ.ಪಂ ಅಧ್ಯಕ್ಷರಾದ  ಬಾಲಚಂದ್ರನ್ ಮಾನ್ಯ ಕೊಪ್ಪಳ ನಗರಸಭೆ ಅಧ್ಯಕ್ಷರಾದ ಮಹೇಂದ್ರಕುಮಾರ ಛೋಪ್ರಾ, ಮಾನ್ಯ ಕೊಪ್ಪಳ ಜಿಲ್ಲಾಧಿಕಾರಿಗಳಾದ ಶ್ರೀಮತಿ ಕನಗವಲ್ಲಿ ಎಂ, ಮಾನ್ಯ ಕೊಪ್ಪಳ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ girishಆರ್.ರಾಮಚಂದ್ರನ್, ಕೊಪ್ಪಳ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಾದ ಡಾ|| ಕೆ.ತ್ಯಾಗರಾಜನ್, ಮಾನ್ಯ ಕೊಪ್ಪಳ ಸಾ.ಶಿ.ಇ ಉಪನಿರ್ದೇಶಕರಾದ  ಎ ಶಾಮಸುಂದರ, ಮಾನ್ಯ ಮಹಿಳಾ & ಮಕ್ಕಳ ಅಭಿವೃದ್ಧಿ ಇಲಾಖೆ ಕೊಪ್ಪಳ ಉಪನಿರ್ದೇಶಕರಾದ ಶ್ರೀ ಬಾಬು ಕಲಾದಗಿ, ಮಾನ್ಯ ಕೊಪ್ಪಳ ಜಿಲ್ಲಾ ವಾರ್ತಾಧಿಕಾರಿಗಳಾದ  ಬಿ.ವಿ.ತುಕಾರಾಮ್, ಜಿಲ್ಲಾ ಅನುಷ್ಠಾನ ಸಮಿತಿ ಸದಸ್ಯರಾದ ಗವಿಸಿದ್ದಪ್ಪ ಕರ್ಕಿಹಳ್ಳಿ, ಶೀನಿವಾಸ ಚಿತ್ರಗಾರ, ಬಿ.ಗಿರೀಶಾನಂದ ಇನ್ನೂ ಮುಂತಾದ ಗಣ್ಯರು ಆಗಮಿಸುವರು. ಕಾರ್ಯಕ್ರಮವನ್ನು ಗಣೇಶ ಹೊರತಟ್ನಾಳ ನಿರೂಪಿಸುವರು.

Leave a Reply