ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ ಪಟ್ಟಿ ಪ್ರಕಟ

: ಕೊಪ್ಪಳ ಜಿಲ್ಲಾ ಮಟ್ಟದ ೨೦೧೬-೧೭ ನೇ ಸಾಲಿನ ಅತ್ಯುತ್ತಮ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಪ್ರಶಸ್ತಿಗೆ ಆಯ್ಕೆಯಾಗಿರುವ ಶಿಕ್ಷಕರ ಪಟ್ಟಿಯನ್ನು ಕೊಪ್ಪಳದ ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಿಸಿದೆ.
ಜಿಲ್ಲಾ ಮಟ್ಟದ ಅತ್ಯುತ್ತಮ ಪ್ರಾಥಮಿಕ ಶಾಲಾ ಶಿಕ್ಷಕರ ಪ್ರಶಸ್ತಿಗೆ ಆಯ್ಕೆಯಾಗಿರುವ ಶಿಕ್ಷಕರ ವಿವರ ಇಂತಿದೆ. ಬಸವರಾಜ ಕಲ್ಗುಡಿ, ದೈಹಿಕ ಶಿಕ್ಷಕ, ಸರ್ಕಾರಿ ಹಿ.ಪ್ರಾ.ಶಾಲೆ, ಹೊಸ ಬಂಡಿಹರ್ಲಾಪುರ, ತಾ: ಕೊಪ್ಪಳ. ಸಂಗನ ಬಸಮ್ಮ, ದೈಹಿಕ ಶಿಕ್ಷಕರು, ಸರ್ಕಾರಿ ಹಿ.ಪ್ರಾ.ಶಾಲೆ, ಚಿಕ್ಕಜಂತಕಲ್, ತಾ: ಗಂಗಾವತಿ. ಉಮೇಶ, ಸಹ ಶಿಕ್ಷಕ, ಸರ್ಕಾರಿ ಹಿ.ಪ್ರಾ.ಶಾಲೆ, ಹಿರೇತೆಮ್ಮಿನಾಳ, ತಾ: ಕುಷ್ಟಗಿ. ಮತ್ತು ಶಿವಪ್ಪ ದ್ಯಾಬೇರಿ, ಸಹ ಶಿಕ್ಷಕ, ಸರ್ಕಾರಿ ಹಿ.ಪ್ರಾ.ಶಾಲೆ, ಚಿಕೇನಕೊಪ್ಪ, ತಾ: ಯಲಬುರ್ಗಾ.
ಜಿಲ್ಲಾ ಮಟ್ಟದ ಅತ್ಯುತ್ತಮ ಪ್ರೌಢಶಾಲಾ ಶಿಕ್ಷಕರ ಪ್ರಶಸ್ತಿಗೆ ಆಯ್ಕೆಯಾಗಿರುವ ಶಿಕ್ಷಕರ ವಿವರ ಇಂತಿದೆ. ಗವಿಸಿದ್ದಪ್ಪ ಎಸ್ ಮಟ್ಟಿ, ಸಹಶಿಕ್ಷಕ, ಬಾಲಕೀಯರ ಸರ್ಕಾರಿ ಪ್ರೌಢಶಾಲೆ, ಅಳವಂಡಿ, ತಾ: ಕೊಪ್ಪಳ. ಸಿದ್ದಲಿಂಗೇಶ ಪೂಲಭಾವಿ, ಸಹಶಿಕ್ಷಕ, ಸರ್ಕಾರಿ ಪ್ರೌಢಶಾಲೆ, ಇಸ್ಲಾಂಪುರ, ತಾ: ಗಂಗಾವತಿ. ಶಾಕೀರ ಬಾಬಾ, ಸಹಶಿಕ್ಷಕ, ಸರ್ಕಾರಿ ಪ್ರೌಢಶಾಲೆ, ಚಳಗೇರಿ, ತಾ: ಕುಷ್ಟಗಿ. ಮತ್ತು ಬಸಯ್ಯ ಹಿರೇಮಠ, ಸಹಶಿಕ್ಷಕ, ಸ.ಪ.ಪೂ. ಕಾಲೇಜು, ಬನ್ನಿಕೊಪ್ಪ, ತಾ: ಯಲಬುರ್ಗಾ.
ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರಿಗೆ ಸೆ. ೦೮ ರಂದು ಯಲಬುರ್ಗಾದ ಬುದ್ಧ ಬಸವ ಅಂಬೇಡ್ಕರ್ ಭವನದಲ್ಲಿ ಜರುಗಲಿರುವ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಂಬಂಧಪಟ್ಟ ಶಿಕ್ಷಕರು ಅಂದು ಬೆಳಿಗ್ಗೆ ೧೦-೩೦ ಗಂಟೆಗೆ ಕಾರ್ಯಕ್ರಮಕ್ಕೆ ಹಾಜರಾಗುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ. ಶ್ಯಾಮಸುಂದರ್ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

Please follow and like us:
error