You are here
Home > Koppal News-1 > ಜಿಲ್ಲಾ ಮಟ್ಟದ ಅಂತರ ಕಾಲೇಜು ನಾಟಕ ಮತ್ತು ಜಾನಪದ ನೃತ್ಯ ಸ್ಪರ್ಧೆ

ಜಿಲ್ಲಾ ಮಟ್ಟದ ಅಂತರ ಕಾಲೇಜು ನಾಟಕ ಮತ್ತು ಜಾನಪದ ನೃತ್ಯ ಸ್ಪರ್ಧೆ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ, ಜಿಲ್ಲೆಯ ಕಾಲೇಜುಗಳಲ್ಲಿ ದೇಶೀಯ ಸಾಂಸ್ಕೃತಿಕ ವಾತಾವರಣ ಪುನರ್ ಸ್ಥಾಪಿಸಲು ಜಿಲ್ಲಾ ಮಟ್ಟ, ವಿಭಾಗಮಟ್ಟ ಹಾಗೂ ರಾಜ್ಯ ಮಟ್ಟದ ಅಂತರ ಕಾಲೇಜುಗಳ ನಾಟಕ ಹಾಗೂ ಜಾನಪದ ನೃತ್ಯ ಸ್ಪರ್ಧೆ ಏರ್ಪಡಿಸಲಾಗಿದ್ದು ಆಸಕ್ತ ಕಾಲೇಜು ಮುಖ್ಯಸ್ಥರಿಂದ ಅರ್ಜಿ ಆಹ್ವಾನಿಸಲಾಗಿದೆ.
ಕನ್ನಡ ಆಧುನಿಕ ರಂಗಭೂಮಿಗೆ ೬೦ ಮತ್ತು ೭೦ ರ ದಶಕದಲ್ಲಿ ಕಾಲೇಜು ರಂಗಭೂಮಿ ಮಹತ್ವದ ಕೊಡುಗೆ ನೀಡಿದೆ. ಈ ದಶಕದಲ್ಲಿ ಕಾಲೇಜು ಆವರಣದಲ್ಲಿ ವೈಚಾರಿಕ ಪ್ರಜ್ಞೆ ಪ್ರಧಾನ ಸ್ಥಾನ ಪಡೆದಿತ್ತು. ವಿದ್ಯಾರ್ಥಿಗಳಲ್ಲಿ ಸಾಮುದಾಯಿಕ ಚಿಂತನೆ ಸಮಾಜಮುಖಿಯಾದ ಆಲೋಚನೆಗಳನ್ನು ಬಿತ್ತುವ ಕಾರ್ಯ ರಂಗಭೂಮಿಯಿಂದಲೇ ಆಗುತ್ತಿತ್ತು. ಕಾಲೇಜು ಆವರಣದಲ್ಲಿ ಆರೋಗ್ಯಪೂರ್ಣವಾದ ಸಾಂಸ್ಕೃತಿಕ ವಾತಾವರಣ ಸದಾ ನಳನಳಿಸುತ್ತು. ಈ ಸಂದರ್ಭದಲ್ಲಿ ಅನೇಕಾನೇಕ ರಂಗ ಪ್ರಯೋಗಗಳು ನಡೆದವು. ಇದರಿಂದಾಗಿ ರಂಗಭೂಮಿಯಲ್ಲಿ ಉತ್ತಮ ನಟರ ಪಡೆ, ಬಹುಮುಖ ಪ್ರತಿಭೆಯ ನಾಟಕಕಾರರ, ಕ್ರೀಯಾಶೀಲ ನಿರ್ದೇಶಕರು ಕಾಣಿಸಿಕೊಂಡು ಕನ್ನಡ ರಂಗಭೂಮಿಯನ್ನು ಉತ್ತುಂಗಕ್ಕೇರಿಸಿತ್ತು. ಕನ್ನಡ ಆಧುನಿಕ ರಂಗಭೂಮಿಯ ಕೊಡುಗೆ ಅಪಾರವಾಗಿದ್ದು, ವಿದ್ಯಾರ್ಥಿಗಳಲ್ಲಿ ಸುಪ್ತವಾಗಿ ಅಡಕವಾಗಿದ್ದ ಪ್ರತಿಭೆಯ ಅನಾವರಣಕ್ಕರ ಕಾಲೇಜು ರಂಗಭೂಮಿ ಒಂದು ಉತ್ತಮ ವೇದಿಕೆಯಾಗಿತ್ತು.
ಈ ಹಿನ್ನೆಲೆಯಲ್ಲಿ ರಾಜ್ಯದ ಕಾಲೇಜುಗಳಲ್ಲಿ ದೇಶಿಯ ಸಾಂಸ್ಕೃತಿಕ ವಾತಾವರಣ ಪುನರ್ ಸ್ಥಾಪಿಸುವ ಉದ್ದೇಶದಿಂದ ಕಾಲೇಜುಗಳ ನಾಟಕ ಹಾಗೂ ಜಾನಪದ ನೃತ್ಯ ಸ್ಪರ್ಧೆ ಏರ್ಪಡಿಸಲಾಗಿದೆ.
ಭಾಗವಹಿಸಲು ಇಚ್ಛಿಸುವ ಜಿಲ್ಲೆಯ ಕಾಲೇಜು ಮುಖ್ಯಸ್ಥರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೊಪ್ಪಳ ಇಲ್ಲಿ ಅರ್ಜಿ ನಮೂನೆ ಹಾಗೂ ಸಂಬಂಧಿಸಿದ ಮಾಹಿತಿ ಪಡೆದು ಡಿ.೦೭ ರೊಳಗಾಗಿ ಸಲ್ಲಿಸಬಹುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

Leave a Reply

Top