ಜಿಲ್ಲಾಧಿಕಾರಿಯ ಮುಂದೆಯೇ ರೈತ ವಿಷ ಸೇವಿಸಿ ಆತ್ಮಹತ್ಯೆ ಗೆ ಯತ್ನ

ಜಿಲ್ಲಾಧಿಕಾರಿಯ  ಮುಂದೆಯೇ ರೈತ ವಿಷ ಸೇವಿಸಿ ಆತ್ಮಹತ್ಯೆ ಗೆ ಯತ್ನಿಸಿದ ಘಟನೆ ಕೊಪ್ಪಳದಲ್ಲಿ ನಡೆದಿದೆ.   ಕೊಪ್ಪಳ ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಕಛೇರಿಯಲ್ಲಿ ರೈತ ಕುಟುಂಬ ದವರು ತಮ್ಮ ಸಮಸ್ಯೆ ಯನ್ನು ಹೇಳಲು ಬಂದಿದ್ದರು.    ಜಿಲ್ಲಾಧಿಕಾರಿ ಮುಂದೆ ತಮ್ಮ ಸಮಸ್ಯೆ ಹೇಳುತ್ತಿರುವಾಗಲೇ ರೈತ ರುದ್ರಪ್ಪ 45 ವಷ೯ ವಿಷ ಸೇವಿಸಿ ಆತ್ಮಹತ್ಯೆ ಗೆfarmer-suicide-attempt-koppal ಯತ್ನಿಸಿದ್ದಾನೆ. ಕೂಡಲೇ ಜಿಲ್ಲಾ ಆಸ್ಪತ್ರೆ ಗೆ ಸೇರಿಸಿಲಾಗಿದೆ.  ಕುಷ್ಟಗಿ ತಾಲೂಕಿನ ಕೂಡ್ಲರು ಗ್ರಾಮದ ನಿವಾಸಿಯಾಗಿದ್ದಾರೆ.  ಗ್ರಾಮದಲ್ಲಿ 3 ಎಕರೆ 38 ಗುಂಟೆ ಜಮೀನು ಇದೆ.    6  ವಷ೯ ಗಳ ಹಿಂದೆ ಹೊಲದ ಮೇಲೆ ಕಂಠಪ್ಪ ಉಡ್ಡೆರ ಎನ್ನುವರು ಬಳಿ 1 ಲಕ್ಷ 42 ಸಾವಿರ ರೂಪಾಯಿ ಹಣ ಪಡೆದು ಕೊಂಡಿದ್ದಾರೆ.   ಈಗ ಬಡ್ಡಿ ಮತ್ತು ಚಕ್ರ ಬಡ್ಡಿ ಹಾಕಿ 6 ಲಕ್ಷ ರೂಪಾಯಿ ಹಣ ಕೊಡಬೇಕು ಎನ್ನುತ್ತಿದ್ದಾನೆ.  ನಮಗೆ ನ್ಯಾಯ ಕೊಡಿಸಿ ಎಂದು  ಈಗಾಗಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಸಹ ಬೇಟಿನೀಡಿದ್ದರು. ಆದರೆ ಯಾವದೇ ಫಲ ಸಿಗದ ಹಿನ್ನೆಲೆಯಲ್ಲಿ ಇಂದು ಇಡೀ ರೈತನ ಕುಟುಂಬ ಜಿಲ್ಲಾಧಿಕಾರಿಗಳ ಮುಂದೆ ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳಲು ಬಂದಿದ್ದರು. ಈ ಸಮಯದಲ್ಲಿ ರೈತ ರುದ್ರ ವಿಷ ಸೇವಿಸಿದ್ದಾನೆ. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಸೇರಿಸಲಾಗಿದ್ದು ಪರಿಸ್ಥಿತಿ ಇನ್ನೂ ಗಂಭೀರವಾಗಿದೆ

 

Leave a Reply