ಜಾತ್ರೆ,ಹಬ್ಬ,ಜಯಂತಿಗಳು ಎಂದರೆ ಡಿಜೆ ಹಚ್ಚಿಕೊಂಡು ಕುಣಿಯುವುದೇ? ಇಲ್ಲಾ ಈ ಯುವಕರಂತೆ ಮಾದರಿಯಾಗುವುದೇ?

koppal_newsನಾರುತ್ತಿರುವ ಕೂದಲು, ಹರಿದ ಬಟ್ಟೆಗಳ ತೊಟ್ಟ  ಮಾನಸಿಕ ಅಸ್ವಸ್ಥರು ಮತ್ತು ಅನಾಥರನ್ನು ಕರೆತಂದು ಅವರಿಗೆ ಕ್ಷೌರ ಮಾಡಿ, ಸ್ನಾನ ಮಾಡಿಸಿ, ಹೊಸ ಬಟ್ಟೆ ತೊಡಿಸಿ, ಗಾಯಗಳಾಗಿದ್ದರೆ ಅವರಿಗೆ ಪ್ರಥಮ ಚಿಕಿತ್ಸೆ ನೀಡುತ್ತಿದ್ದಾರೆ ಈ ಯುವಕರು. ಕೊಪ್ಪಳದ ಸಲಿಂ ಅಳವಂಡಿ ಮತ್ತವರ ತಂಡದವರು ಕಳೆದ 3 ವರ್ಷಗಳಿಂದ  ಈ ಕೆಲಸ ಮಾಡುತ್ತಾ ಬಂದಿದ್ದಾರೆ. ಪ್ರತಿ ವರ್ಷ ಪ್ರವಾದಿ ಮಹ್ಮದ್ ಪೈಗಂಬರ್ ಜನ್ಮದಿನದ ನಿಮಿತ್ಯ ಇಂತಹದ್ದೊಂದು ಶ್ಲಾಘನೀಯ ಕೆಲಸದಲ್ಲಿ ತೊಡುಗುತ್ತಾರೆ ಈ ಯುವಕರ ಬಳಗ.   ಈ ಕೆಲಸ ಒಂದೇ ದಿನಕ್ಕೆ ಸೀಮಿತವಲ್ಲ.  ಇಂತಹ ಮಾನಸಿಕ ಅಸ್ವಸ್ಥರ, ಅನಾಥರ ಪಟ್ಟಿ ಮಾಡಿ ದಿನದ ಬದುಕಿನ ಮೇಲೂ ನಿಗಾ ಇಟ್ಟಿರುತ್ತಾರೆ. ಆಗಾಗ ಅವರಿಗೆ ಸಾಧ್ಯವಾದ ನೆರವು ನೀಡುತ್ತಾರೆ ಈ ಯುವಕರು

ಜಾತ್ರೆ, ಹಬ್ಬ ಹರಿದಿನಗಳು, ಜಯಂತಿಗಳು ಎಂದರೆ ಡಿಜೆ ಹಚ್ಚಿಕೊಂಡು ಕುಣಿಯುವುದು, ಇಲ್ಲವೇ ಧರ್ಮೋನ್ಮಾದದಲ್ಲಿ ಬೈಕ್ ರ್ಯಾಲಿಗಳನ್ನು, ಸಮಾವೇಶಗಳನ್ನು ಮಾಡುವವರೇ ಹೆಚ್ಚಾಗಿರುವ ಇಂದಿನ ದಿನಗಳಲ್ಲಿ ಈ ಯುವಕರ ಸೇವೆ ನಿಜಕ್ಕೂ ಪ್ರಶಂಸನೀಯ. ಇವರ ಸೇವಾ ಕಾರ್ಯಕ್ಕೆ ಇಡೀ ಜಿಲ್ಲೆಯಲ್ಲಿ ಶ್ಲಾಘನೆ ವ್ಯಕ್ತವಾಗಿದೆ

 

Please follow and like us:
error