You are here
Home > Koppal News-1 > ಜಲ ದೀಕ್ಷೆ ಪ್ರಬಂಧ ಸ್ಪರ್ಧೆ

ಜಲ ದೀಕ್ಷೆ ಪ್ರಬಂಧ ಸ್ಪರ್ಧೆ

gavimath-koppal

ಕೊಪ್ಪಳ ೦೯: ಜಿಲ್ಲಾಡಳಿತ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೃಷಿ ಇಲಾಖೆ, ಜಲ ಮಂಡಳಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ವಾರಿಯರ‍್ಸ್ ಸ್ಪೋರ್ಟ್ಸ್ ಕ್ಲಬ್ ಮತ್ತು ಶ್ರೀಗವಿಮಠ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಶ್ರೀ ಗವಿಸಿದ್ಧೇಶ್ವರ ಮಹಾವಿದ್ಯಾಲಯದಲ್ಲಿ ಪ್ರೌಢಶಾಲೆ, ಪದವಿ ಪೂರ್ವ ಮತ್ತು ಪದವಿ ವಿದ್ಯಾರ್ಥಿಗಳಿಗಾಗಿ ಜಲ ನಿರ್ವಹಣೆ ತಪ್ಪುವುದು ಬರದ ಬವಣೆ ಎಂಬ ವಿಷಯದ ಮೇಲೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಈ ಪ್ರಬಂಧ ಸ್ಪರ್ಧೆಯಲ್ಲಿ ಜಿಲ್ಲೆಯ ಅನೇಕ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿ ಪ್ರಬಂಧವನ್ನು ಬರೆದರು. ಈ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಜನೇವರಿ ೧೪ರಂದು ಜಾತ್ರಾ ಮಹೋತ್ಸವದಲ್ಲಿ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳು ಬಹುಮಾನವನ್ನು ವಿತರಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಯೂನಿಸೆಫ್ ಅಧಿಕಾರಿ ಶ್ರೀ ಹರೀಶ ಜೋಗಿ, ಪ್ರಾಚಾರ್ಯರಾದ ಶ್ರೀ ಎಚ್ ಪರೀಕ್ಷಿತರಾಜ, ಶ್ರೀ.ಎಂ.ಎಸ್ ದಾದ್ಮಿ ಪ್ರಬಂಧ ಸ್ಪರ್ಧಾ ಸಂಯೋಜಕರಾದ ಡಾ.ಬಸವರಾಜ ಪೂಜಾರ, ಡಾ.ಸಿದ್ದಲಿಂಗಪ್ಪ ಕೊಟ್ನೆಕಲ್, ಶ್ರೀ ರಾಜೇಶ ಯಾವಗಲ್ ಮುಂತಾದವರು ಉಪಸ್ಥಿತರಿದ್ದರು.

Leave a Reply

Top