ಜಲದೀಕ್ಷೆ ಜಾಗೃತಿ ನಡಿಗೆ

ಶ್ರೀ ಗವಿಮಠ, ಕೊಪ್ಪಳ ಜಿಲ್ಲಾಡಳಿತ, ಕೃಷಿ ವಿಸ್ತರಣಾ ಶಿಕ್ಷಣಕೇಂದ್ರ, ಕೃಷಿ ಇಲಾಖೆ, ಜಲಮಂಡಳಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ವಾರಿರ್ಯಸ್ಸ್ ಸ್ಪೋಟ್ಸ್ ಕ್ಲಬ್ ಕೊಪ್ಪಳ ಜೊತೆಗೆ ಜಿಲ್ಲೆಯ ಎಲ್ಲಾ ಖಾಸಗಿ ಅನುದಾನ ರಹಿತ ಒಕ್ಕೂಟ ಹಾಗೂ ಜಿಲ್ಲೆಯ ಎಲ್ಲ ಸಂಘ ಸಂಸ್ಥೆಗಳ ಆಶ್ರಯದಲ್ಲಿ ದಿನಾಂಕ ೧೧.೦೧.೨೦೧೭ ರಂದು ಬೆಳಗ್ಗೆ ೮ ಗಂಟೆಗೆ ಕೊಪ್ಪಳ ನಗರದ ಗೌರಿ ಶಂಕರ ದೇವಸ್ಥಾನದಿಂದ ಅಶೋಕ ಸರ್ಕಲ್, ಗಡಿಯಾರ ಕಂಭದ ಮೂಲಕ ಶ್ರೀಗಮಠದ ವರಗೆ ಜಲದೀಕ್ಷೆ ಜಾಗೃತಿ ನಡಿಗೆಯನ್ನ ಹಮ್ಮಿಕೊಳ್ಳಲಾಗಿದೆ.

ಕೃಷಿ, ಕೈಗಾರಿಕೆ ಹಾಗೂ ಮನೆ ಬಳಕೆಗಾಗಿ ಸಾಕಷ್ಟು ನೀರು ಸಿಗದ ಇಂಹ ಸಂದಿಗ್ಧ ಸನ್ನಿವೇಶದಲ್ಲಿ ಜನರಲ್ಲಿ ಜಲಸಂರಕ್ಷಣೆಯ ಅರಿವು ಮೂಡಿಸಿ ಜಲ ಸಂವರ್ಧನೆ ಮಾಡುವದು ಎಲ್ಲರ ಜವಾಬ್ದಾರಿಯೂ ಮತ್ತು ಅನಿವಾರ್ಯವೂ ಆಗಿದೆ. ಇಂತಹ ಸಂಧರ್ಭದಲ್ಲಿ ಶ್ರೀ ಸಂಸ್ಥಾನ ಗವಿಮಠ ವಿನೂತನ ಕಾರ್ಯಕ್ರಮವನ್ನು ರೂಪಿಸಿದೆ ಅದುವೇ ಜಲದೀಕ್ಷೆ,
ಈ ಕುರಿತು ಈಗಾಗಲೇ ಪ್ರೌಢ ಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಜಲ ಸಂರಕ್ಷಣೆ ಕುರಿತು ಪ್ರಭಂಧ ಸ್ಪರ್ಧೆ ಜರುಗಿಸಲಾಗಿದೆ. ವಿಜೇತರರಿಗೆ ಜಾತ್ರಾ ಮಹೋತ್ಸವದಲ್ಲಿ ಪ್ರಶಸ್ತಿ ಪ್ರಮಾಣಪತ್ರಗಳನ್ನು ನೀಡಲಾಗುವದು.ಇದರ ಜೊತೆಗೆ ವಿಜ್ಞಾನ ವಸ್ತು ಪ್ರದರ್ಶನ, ಕೃಷಿ ಇಲಾಖೆ ಹಾಗೂ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಿಂದ ಸಾವಯುವ ಕೃಷಿ ಮತ್ತು ಸಿರಿಧಾನ್ಯಗಳ ಬಗ್ಗೆ ಪ್ರಾತ್ಯಕ್ಷಿಕೆ, ಸಂದೇಶಗಳು ಮಾರಟ ಮಳಿಗೆ, ವೈಜ್ಞಾನಿಕ ಮಾಹಿತಿಗಳನ್ನ ಒಳಗೊಂಡ ಪ್ರದರ್ಶನ ಏರ್ಪಡಿಸಲಾಗಿದೆ.

ಜಿಲ್ಲೆಯಾದ್ಯಂತ ಪ್ರತಿ ಗ್ರಾಮದಲ್ಲಿಯೂ ಪಥಸಂಚಲನ ಮಾಡುವ ಮೂಲಕ ಜನಜಾಗೃತಿ ಮೂಡಿಲಾಗುತ್ತದೆ. ಇಡೀ ಜಾತ್ರೆಯನ್ನು ಸಂಪೂರ್ಣವಾಗಿ ಜಲದೀಕ್ಷೆ ಕಾರ್ಯಕ್ರಮಕ್ಕೆ ಅರ್ಪಣೆಮಾಡಲಾಗಿದ್ದು ಜನವರಿ ೧೪, ೧೫, ೧೬ ರಂದು ನಡೆಯುವ ಎಲ್ಲಾ ಕಾರ್ಯಕ್ರಮಗಳು ನೀರಿನ ಜಾಗೃತಿ ಕುರಿತಾಗಿಯೇ ಇರುತ್ತವೆ. ಈ ಮೂಲಕ ಮೂರ‍್ನಾಲ್ಕು ತಿಂಗಳು ಸುರಿಯುವ ಮಳೆನೀರನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಿ ವರ್ಷ ಪೂರ್ತಿ ನೀರಿನ ಸಮಸ್ಯ ಬಾರದಂತೆ ಮಾಡಬಹುದಾಗಿದೆ.

ಆದ್ದರಿಂದ ನಾಳೆ ದಿನಾಂಕ : ೧೧.೦೧.೨೦೧೭ ರಂದು ಬೆಳಗ್ಗೆ ೮ ಗಂಟೆಗೆ ಕೊಪ್ಪಳ ನಗರದ ಗೌರಿ ಶಂಕರ ದೇವಸ್ಥಾನದಿಂದ ಅಶೋಕ ಸರ್ಕಲ್, ಗಡಿಯಾರ ಕಂಭದ ಮೂಲಕ ಶ್ರೀಗವಿಮಠದ ವರಗೆ ಜಲದೀಕ್ಷೆ ಜಾಗೃತಿ ನಡಿಗೆಯನ್ನ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಶಾಲಾಕಾಲೇಜುಗಳ ವಿದ್ಯಾರ್ಥಿಗಳು ,ಮಹಿಳೆಯರು, ವಿವಿಧ ಸಂಘಟನೆಯವರು ಭಾಗವಹಿಸಿ ಈ ಜಾಗೃತಿ ನಡಿಗೆಯನ್ನು ?ಶಸ್ವಿಗೊಳಿಸಬೇಕೆಂದು ಗವಿಮಠದ ಪ್ರಕಟಣೆ ತಿಳಿಸಿದೆ.

Leave a Reply