ಜರ್ಮನ್ ಪ್ರಜೆಯ ಪಾಸ್‌ಪೋಟ್ ಸಹಿತ ಬ್ಯಾಗ್ ನಾಪತ್ತೆ : ಹುಡುಕಿಕೊಟ್ಟವರಿಗೆ ವಿಶೇಷ ಬಹುಮಾನ

: ಜರ್ಮನ್ ದೇಶದ ಪ್ರಜೆ ಉಡೋ ಹೆಲ್ಮಟ್ ಲುಟ್ಜ್ ಎಂಬುವವರು ತಮ್ಮ ಪಾಸ್‌ಪೋರ್ಟ್, ವಿಸಾ, ನೋಟ್‌ಪ್ಯಾಡ್ ಹಾಗೂ ಭಾರತದ ಕರೆನ್ಸಿಯುಳ್ಳ ಬ್ಯಾಗ್ ಕಳೆದುಕೊಂಡಿದ್ದು, ಹುಡುಕಿ ಕೊಟ್ಟವರಿಗೆ ವಿಶೇಷ ಬಹುಮಾನ ನೀಡಲಾಗುವುದು ಎಂದು ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಪ್ರಕಟಣೆಯಲ್ಲಿ ತಿಳಿಸಿದೆ.
ಜರ್ಮನ್ ಪ್ರಜೆ ಉಡೋ ಹೆಲ್ಮಟ್ ಲುಟ್ಜ್ ಅವರು ಅಂತರರಾಷ್ಟ್ರೀಯ ಪಾಸ್‌ಪೋರ್ಟ್, ವಿಸಾ, ನೋಟ್‌ಪ್ಯಾಡ್, ಹಾಗೂ ಭಾರತದ ಕರೆನ್ಸಿ ರೂ-೩೬೦೦ ಸೇರಿದಂತೆ ಇತರ ವಸ್ತುಗಳಿದ್ದ ಬ್ಯಾಗ್‌ನೊಂದಿಗೆ ಧಾರವಾಡ ದಿಂದ ಕೊಪ್ಪಳ ಮಾರ್ಗವಾಗಿ ಹಂಪಿಗೆ ಪ್ರಯಾಣಿಸುತ್ತಿದ್ದಾಗ ಗಿಣಿಗೇರಿಯಲ್ಲಿ ಬ್ಯಾಗ್ ಕಳೆದುಕೊಂಡಿದ್ದಾರೆ. ಈ ಕುರಿತು ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವಿದೇಶಿ ಪ್ರಜೆಯ ವಸ್ತುಗಳ ಬ್ಯಾಗ್ ಯಾರಿಗಾದರು ಸಿಕ್ಕಿದ್ದಲ್ಲಿ ಅಥವಾ ಮಾಹಿತಿ ಇದ್ದಲ್ಲಿ ಕೂಡಲೆ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ದೂ.ಸಂ: ೦೮೫೩೯-೨೨೧೩೩೩, ಪಿಎಸ್‌ಐ ಕೊಪ್ಪಳ ಗ್ರಾಮೀಣ-೯೪೮೦೮೦೩೭೪೬ ಇಲ್ಲಿಗೆ ತಲುಪಿಸಬೇಕು. ಬ್ಯಾಗ್ ತಲುಪಿಸಿದವರಿಗೆ ವಿಶೇಷ ಬಹುಮಾನ ನೀಡಲಾಗುವುದು ಎಂದು ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಆರಕ್ಷಕ ಉಪ-ನಿರೀಕ್ಷಕರು  ತಿಳಿಸಿದ್ದಾರೆ.

Leave a Reply