ಜಮಾಅತೆ ಇಸ್ಲಾಮಿ ಹಿಂದ್ ಕೊಪ್ಪಳ ಘಟಕದಿಂದ ಜಿಲ್ಲಾ ಕಾರಾಗೃಹದಲ್ಲಿ ಇಫ್ತಿಯಾರ್ ಕೂಟ

koppal-ramjan
ಕೊಪ್ಪಳಜೂ,೧೪: ಜಿಲ್ಲಾ ಕಾರಾಗೃಹದಲ್ಲಿ ೧೨ರ ರವಿವಾರ ಜಮಾಅತೆ ಇಸ್ಲಾಮಿ ಹಿಂದ್ ಕೊಪ್ಪಳ ಘಟಕದಿಂದ ಇಫ್ತಿಯಾರ್ ಕೂಟವನ್ನು ಏರ್ಪಡಿಸಲಾಗಿತ್ತು. ಜಿಲ್ಲಾ ಕಾರಾಗೃಹದ ಅಧೀಕ್ಷಕ ಸಂಜಯ್ ಜತ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಭಾರತೀಯ ಸಂಸ್ಕೃತಿಯಂತೆ ವಾರಕ್ಕೊಮ್ಮೆ ಉಪವಾಸ, ಏಕಾದಶಿಯ ಹಾಗೇಯೆ ನಮ್ಮ ಮುಸ್ಲಿಂ ಬಾಂಧವರು ಕೂಡಾ ಒಂದು ತಿಂಗಳ ರಮಝಾನ್ ಉಪವಾಸ ವೃತ ಆಚರಿಸುತ್ತಾರೆ. ಪ್ರತಿಯೊಬ್ಬರು ಉಪವಾಸ ಆಚರಿಸುವುದನ್ನು ರೂಢಿಸಿಕೊಳ್ಳಬೇಕು ಇದರಿಂದ ದುರ್ನಡತೆ ಕಡಿಮೆಯಾಗುತ್ತದೆ ಎಂದು ವಿವರಿಸಿದರು. ಪ್ರತಿವರ್ಷದಂತೆ ಈ ವರ್ಷವೂ ನಮ್ಮ ಕಾರಾಗೃಹದಲ್ಲಿ ಜಮಅತೆ ಇಸ್ಲಾಹಿಂದ್ ಕೊಪ್ಪಳ ಘಟಕವು ನೆರವೇರಿಸುವ ಇಫ್ತಿಯಾರ್ ಕೂಟ ನಮಗೆ ಬಹಳ ಸಂತೋಷವನ್ನು ತಂದಿದೆ ಎಂದರು.
ಮುಂದುವರೆದು ಮಾತನಾಡಿದ ಅವರು ಯಾವುದೇ ಕೆಟ್ಟ ಘಳಿಗೆಯಲ್ಲಿ ತಪ್ಪು ಸಂಭವಿಸಿ ನೀವು ಕಾರಾಗೃಹ ಶಿಕ್ಷೆ ಅನುಭವಿಸುವಂತಾಗಿದೆ ನಿಮ್ಮ ನಡೆತೆಯನ್ನು ತಿದ್ದಿಕೊಂಡು ಆದಷ್ಟು ಬೇಗ ಬಿಡುಗಡೆಹೊಂದಿ ನಿಮ್ಮ ಕುಟುಂವನ್ನು ಸೇರಿ ಉತ್ತಮ ಜೀವನ ನಿಮ್ಮದಾಗಲಿ ಇಂಥಹ ಉತ್ತಮ ಕಾರ್ಯವನ್ನು ನಡೆಸಿಕೊಟ್ಟ ಜಮಾಅತೆ ಇಸ್ಮಾಮಿ ಹಿಂದ್ ಕೊಪ್ಪಳ ಘಟಕದ ಅಭಿನಂದನೀಯ ಎಂದು ಜಿಲ್ಲಾ ಕಾರಾಗೃಹ ಅಧೀಕ್ಷಕ ಸಂಜಯ್ ಜತ್ತಿ ಅವರು ಹೇಳಿದರು.
ಕಾರಾಗೃಹದ ಖೈದಿಗಳನ್ನುದ್ದೇಶಿಸಿ ಶಫೀ ಅಹಮ್ಮದ್ ಕುಕನೂರು ಮಾತನಾಡಿ ಮನುಷ್ಯ ಯಾರು, ಎಲ್ಲಿಂದ ಬಂದಿದ್ದಾರೆ ಮತ್ತು ಎಲ್ಲಿಗೆ ಹೋಗಬೇಕಾಗಿದೆ ಎಂಬ ಪ್ರಶ್ನೆಯನ್ನು ಪ್ರತಿಯೊಬ್ಬ ಮನುಷ್ಯ ಚಿಂತಿಸಬೇಕಾಗಿದೆ. ಯಾಕೆಂದರೆ ಮನುಷ್ಯನನ್ನು ನಾವು ಎಂದೂ ಅವನನ್ನೂ ಯಾರು ಹೇಳಿದರೂ ಕೇಳದಂತೆ ಮಾಡಿಬಿಟ್ಟಿದ್ದೇವೆ. ಅಥವಾ ದೇವನಿಗೆ ಸಮಾನಾಗಿ ದೇವಾಂಶ ಸಂಭೂತನನ್ನಾಗಿಮಾಡಿಬಿಟ್ಟಿದ್ದೇವೆ. ಇದು ತಪ್ಪು. ಪವಿತ್ರ ಕುರಾನ್ ಶಿಕ್ಷಣದಿಂದ ಮನುಷ್ಯನನ್ನು ಗೌರವಿಸಿದ್ದಾನೆ. ಮಾನವರೆಲ್ಲರೂ ಸಮಾನರಾಗಿದ್ದಾರೆ. ದೇವರು ನಮ್ಮನ್ನು ಸೃಷ್ಠಿಸಿ ಹಾಗೇಯೆ ಬಿಟ್ಟುಬಿಡಲಿಲ್ಲ ಮನುಷ್ಯನ ಸಂಸ್ಕರಣೆಗಾಗಿ ಪ್ರವಾದಿಗಳನ್ನು ನಿಯುಕ್ತಗೊಳಿಸಿ ಅವನ ಸನ್ಮಾರ್ಗದರ್ಶನವನ್ನು ಮಾಡಿರುವನು. ಅದೇರೀತಿಯಾಗಿ ಪ್ರವಾದಿ ಮಹಮ್ಮದ್(ಸ)ರವರನ್ನು ಇಂದಿಗೆ ಸುಮಾರು ೧೪೦೦ ವರ್ಷಗಳಹಿಂದೆ ಈ ಭೂಮಿಗೆ ಕಳುಹಿಸಿದ್ದರು ನಾವೆಲ್ಲರೂ ಏಕೋದರ ಸಹೋದರರಾಗಿದ್ದೇವೆ ಮತ್ತು ನಮ್ಮೆಲ್ಲರ ದೇವನು ಏಕಮಾತ್ರನಾಗಿದ್ದಾನೆ ಎಂಬುದೇ ಆ ಪ್ರವಾದಿಗಳ ಶಿಕ್ಷಣವಾಗಿತ್ತು.
ಪ್ರವಾದಿಗಳು ಮನುಷ್ಯನನ್ನು ಅಂಧಕಾರದಿಂದ ಬೆಳಕಿನೆಡೆಗೆ ಕರೆದು, ಮರಣದ ನಂತರ ಆ ದೇವನಲ್ಲಿಗೆ ಪ್ರತಿಯೊಬ್ಬನಿಗೂ ಹೋಗಲಿಕ್ಕಿದೆ, ಅದೇರೀತಿ ಪ್ರತಿಯೊಬ್ಬನಿಗೂ ತನ್ನ ಜೀವನದ ಕರ್ಮಗಳ ಲೆಕ್ಕಾಚಾರ ಒಪ್ಪಿಸಲಿಕ್ಕಿದೆ ಎಂಬುವುದನ್ನು ಜನರಲ್ಲಿ ಅರಿವು ಮೂಡಿಸಿದರು. ಈ ರಮಝಾನ್ ಮಾಸದಲ್ಲಿ ಉಪವಾಸ ಕೈಗೊಳ್ಳುವುದರ ಮೂಲಕ ಭಯ, ಭಕ್ತಿ ಪಡೆಯಲಿಕ್ಕೆ ಹಾಗೂ ಬಡವರ, ನಿರ್ಗತಿಕರ ಜೀವನವನ್ನು ಅರ್ಥೈಸಿಕೊಳ್ಳಲೂ ಸಮಾಜದ ಎಲ್ಲ ವರ್ಗಗಳ ಜನರ ಕಷ್ಟಗಳಲ್ಲಿ ಸಹಾಯ ಮತ್ತು ಸಂಪತ್ತಿನಲ್ಲಿ ಬಡವರ ಪಾಲನ್ನು ವ್ಯಯಿಸುವ ಶಿಕ್ಷಣವನ್ನು ಪ್ರವಾದಿಗಳು ನೀಡಿದರು. ನಾಲಿಗೆ ಮತ್ತು ಗುಪ್ತಾಂಗದ ಭರವಸೆ ನೀಡಿದರೆ ಅವರಿಗೆ ಸ್ವರ್ಗದ ಸುವಾರ್ತೆ ನೀಡುವುದಾಗಿ ಪ್ರವಾದಿ ಹೇಳಿರುವರು. ನಾವೆಲ್ಲರೂ ಆ ದೇವನಿಗೆ ಭಯಪಡಬೇಕು ನಮ್ಮ ಜೀವನವನ್ನು ಹಸನುಗೊಳಿಸಬೇಕು. ಪವಿತ್ರ ಕುರ್ ಆನ್ ಮತ್ತು ಹದೀಸಗಳ ಹಿತವಚನಗಳನ್ನು ಹೀಗೆ ತಮ್ಮ ಭಾಷಣದಲ್ಲಿ ಶಫೀ ಅಹಮ್ಮದ್ ಕುಕನೂರು ಅವರು ವಿವರಿಸಿದರು.
ಕಾರ್ಯಕ್ರಮ ಕುರಾನ್ ಪಠಣದೊಂದಿಗೆ ಆರಂಭವಾಯಿತು ಅಜೀಮ್ ಹುಂಡೇಕಾರ್ ಕುರಾನ್ ಪಠಿಸಿ ಅನುವಾದಿಸಿದರು. ಮಹಮ್ಮದ್ ಫಹೀಮುದ್ದೀನ್ ಪ್ರಸ್ತಾವಿಕವಾಗಿ ಮಾತನಾಡಿದರು. ಮಹಮ್ಮದ್ ಉಮರ್ ಅವರು ಕಾರ್ಯಕ್ರಮನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ೧೩೫ ಖೈದಿಗಳು ಹಾಗೂ ಕಾರಾಗೃಹ ಸಿಬ್ಬಂದಿವರ್ಗ ಪಾಲ್ಗೊಂಡಿದ್ದರು. ನಂತರ ಎಲ್ಲರಿಗೂ ಫಲಹಾರ ವಿತರಿಸಿ ಉಪವಾಸ ಪಾರಣಾಮಾಡಲಾಯಿತು.ಅಭಿಯಂತ ತಾಜುದೀನ್ ಮಹಮ್ಮದ್ ಅಶ್ಫಾಕ್, ಮೊಹಮ್ಮದ್ ಅಲ್ತಾಪ್, ತಾಜುದೀನ್ ಅಡ್ಡೇವಾಲೆ, ಮಹೇಬೂಬ ಸಾಬ್ ಮಂಗಳಾಪೂರ, ಫಹಿಮ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

Please follow and like us:
error