ಜನಮನ ಗೆದ್ದ ಹೈ ಕ ನಿವಾಸ

hyka_nivasa_sharat_hegde_drama-2 hyka_nivasa_sharat_hegde_drama-3ಪ್ರಜಾವಾಣಿಯ ಜಿಲ್ಲಾ ವರದಿಗಾರ ಶರತ್ ಹೆಗ್ಡೆಯವರ ಹೈಕ ನಿವಾಸ ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ತುಂಬಿ ತುಳುಕಿದ ಸಾಹಿತ್ಯ ಭವನವೇ ಇದಕ್ಕೆ ಸಾಕ್ಷಿಯಾಯಿತು. ಮೊದಲ ದಿನದ ಪ್ರದರ್ಶನವೂ ಭರ್ಜರಿ ಯಶಸ್ವಿಯಾಗಿತ್ತು. ಅದೇ ರೀತಿ ನಿನ್ನೆ ನಡೆದ ನಾಟಕ ಪ್ರದರ್ಶನವೂ ಸಹ ಗಮನ ಸೆಳೆಯಿತು. ತಮ್ಮ ವಿಡಂಭನಾತ್ಮಕ ಹಾಸ್ಯಮಯ ಮೊನಚು  ಮಾತುಗಳ ಸಂಭಾಷಣೆಗಳ ಮೂಲಕ ನಾಟಕಕಾರ ಶರತ್ ಹೆಗ್ಡೆ ವ್ಯವಸ್ಥೆಯ ವಿಡಂಭನೆ ಮಾಡುತ್ತಲೇ ಒಳ್ಳೆಯ ಸಂದೇಶ ನೀಡುತ್ತ಻ ಹೋಗುತ್ತಾರೆ. ಎಲ್ಲಿಯೂ ಇದು ಬಹಳ ವಾಚ್ಯವಾಯಿತು ಎನಿಸುವುದಿಲ್ಲ. ಅವರು ಆಯ್ಕೆ ಮಾಡಿಕೊಳ್ಳುವ ವಿಷಯಗಳು ಸಹ ವರ್ತಮಾನಕ್ಕೆ ಸಂಬಂಧಿಸಿದಂತೆ ಇರುವುದರಿಂದ ಪ್ರೇಕ್ಷಕ ಒಂದೊಂದು ಪಾತ್ರದಲ್ಲೂ ಒಬ್ಬೊಬ್ಬ ವ್ಯಕ್ತಿಯನ್ನು ಹುಡುಕುತ್ತಾನೆ. ಅದು ಆ ನಾಟಕದ ಯಶಸ್ಸೂ ಹೌದು. ನಾಟಕದ ವಿಷಯ ಕೇವಲ ಹೈದ್ರಾಬಾದ್ ಕರ್ನಾಟಕಕ್ಕೆ ಸಿಮೀತವಾಗಿಲ್ಲ ಅದು ಎಲ್ಲ ಕಾಲಕ್ಕೂ ಎಲ್ಲರಿಗೂ ಅನ್ವಯವಾಗುತ್ತೆ. ಈ ವಿಷಯದಲ್ಲಿ ನಾಟಕಕಾರರಾಗಿ ಶರತ್ ಗೆದ್ದಿದ್ಧಾರೆ.  ಕಳೆದ ಸಲ ಅವರು ಪ್ರದರ್ಶಿಸಿದ್ದ ಅಶೋಕ ಸರ್ಕಲ್ ನ ವಿಷಯವೂ ಸಹ  ಇದೇ ರೀತಿ ಇತ್ತು. ಆದರೆ ಅಶೋಕ ಸರ್ಕಲ್ ರಂಗದ ಮೇಲೆ ಪ್ರದರ್ಶನ ಗೊಂಡ ರೀತಿಗೂ ಹೈಕ ನಿವಾಸದ ರೀತಿಗೂ ಬಹಳಷ್ಟು ವ್ಯತ್ಯಾಸವಿದೆ ಎನ್ನಬಹುದು.  ಎರಡೂ ನಾಟಕಗಳೂ ಇಬ್ಬರು ಬೇರೆ ಬೇರೆ ನಿರ್ದೇಶಕರಿಂದ ನಿರ್ದೇಶನಗೊಂಡಿರುವದು ಇದಕ್ಕೆ ಕಾರಣವಾಗಿರಬಹುದು. ಆದರೆ ಅಶೋಕ ಸರ್ಕಲ್ ನ ಮಿತಿಗಳನ್ನು ಹೈ.ಕ ನಿವಾಸದಲ್ಲಿ ನಾಟಕಕಾರ ದಾಟಿದ್ದಾರೆ. ಕೇವಲ ಒಂದು ವರ್ಗದ ಜನರ ಇಷ್ಟವಾಗುವ,  ಗಂಭೀರ ಚಿಂತನೆ ಇದ್ದ ಅಶೋಕ ಸರ್ಕಲ್ ಸರಳವಾಗಿ  ಸಾಮಾನ್ಯ ಪ್ರೇಕ್ಷಕರನ್ನು ತಲುಪುವದು ಕಷ್ಟವಾಗಿತ್ತು.  ಅದೇ ಮೊನಚು , ಪಂಚ್ ಗಳನ್ನು ಇನ್ನಷ್ಟು ಕಮರ್ಷಿಯಲ್ಲಾಗಿ ಪ್ರೇಕ್ಷಕರನ್ನು ತಲುಪಿಸುವಲ್ಲಿ ಶರತ್  ಹೆಗ್ಡೆ ಹೈ.ಕ.ನಿವಾಸದಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಕಲಾವಿದರು ಒಬ್ಬರಿಗೊಬ್ಬರು ಮೀರಿಸುವಂತೆ ನಟಿಸಿದರು. ಪಾತ್ರಗಳೇ ತಾವಾದರು. ವಿಜಯಲಕ್ಷ್ಮಿ ಕೊಟಗಿ, ಸಾಹಿತಿ, ಡ್ರೈವರ್, ಡಾಕ್ಟರ್, ನರ್ಸ್, ಮಗ, ಹೆಂಡತಿ, ರಾಜಕಾರಣಿ ಪಾತ್ರಗಳ ಕಲಾವಿದರು ಯಾವುದೇ ಪ್ರೊಪೇಷನಲ್ ಕಲಾವಿದರಿಗೆ ಕಡಿಮೆಯಿಲ್ಲದಂತೆ ನಟಿಸಿದರು. ಚಪ್ಪಾಳೆ, ಸಿಳ್ಳುಗಳ ಮೂಲಕ  ಪ್ರೇಕ್ಷಕರು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದೇ ಇದಕ್ಕೆ ಸಾಕ್ಷಿಯಾಯಿತು..

ಅಭಿನಂದನೆಗಳು ನಾಟಕಕಾರ, ನಿರ್ದೇಶಕ ಮತ್ತು ಕಲಾವಿದರಿಗೆ ಕೊಪ್ಪಳದ ಜನತೆಗೊಂದು ಒಳ್ಳೆಯ ಅಭಿರುಚಿಯ ನಾಟಕ ನೀಡಿದ್ದಕ್ಕೆ..

ಅಭಿನಂದನೆಗಳು ಒಳ್ಳೆಯ ನಾಟಕಕ್ಕೆ ಪ್ರೋತ್ಸಾಹ ನೀಡಿದ ಪ್ರೇಕ್ಷಕರಿಗೆ…

Please follow and like us:
error