ಚಿಕ್ಕಬೆಣಕಲ್-ಗಂಗಾವತಿ ಮಾರ್ಗಕ್ಕೆ ಹೊಸ ರೈಲು : ಸಂಸದರಿಂದ ಚಾಲನೆ

ರೈಲು, ರಸ್ತೆ, ಜಲ ಮತ್ತು ವಾಯು ಮಾರ್ಗಗಳ ಸ್ಥಾಪನೆಯಿಂದ ಆರ್ಥಿಕ ಅಭಿವೃದ್ಧಿ : ಕರಡಿ ಸಂಗಣ್ಣಕೊಪ್ಪಳ ಮಾ. 04 (ಕರ್ನಾಟಕ ವಾರ್ತೆ): ಹೆಚ್ಚು-ಹೆಚ್ಚು ರೈಲು, ರಸ್ತೆ, ಜಲ ಮತ್ತು ವಾಯು ಮಾರ್ಗಗಳ ಸ್ಥಾಪನೆಯಿಂದ ರಾಷ್ಟ್ರದ ಆರ್ಥಿಕ ಅಭಿವೃದ್ಧಿ ಹೆಚ್ಚಳವಾಗುತ್ತದೆ ಎಂದು ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರು ಹೇಳಿದರು.ನೈರುತ್ಯ ರೈಲ್ವೆ ಇವರ ವತಿಯಿಂದ ಚಿಕ್ಕಬೆಣಕಲ್ ಮತ್ತು ಗಂಗಾವತಿ ನಡೆವಿನ ಹೊಸ ರೈಲು ಮಾರ್ಗದಲ್ಲಿ ಉದ್ಘಾಟನಾ ರೈಲು ಸೇವೆಗೆ ಸೋಮವಾರದಂದು ಹಸಿರು ನಿಶಾನೆ ನೀಡಿ, ಕಾರ್ಯಕ್ರಮದ ಉದ್ಘಾಟಿಸಿ ಅವರು ಮಾತನಾಡಿದರು.ಗಂಗಾವತಿಗೆ ರೈಲು ಬೇಕು ಎಂಬುವುದು ಬಹು ದಶಕಗಳ ಬಿಡಿಕೆಯಾಗಿದ್ದು, ಇಂದು ಗಂಗಾವತಿಯ ಎಲ್ಲಾ ಸಾರ್ವಜನಿಕರ ಕನಸು ಈಡೇರಿದಂತಾಗಿದೆ. ವಾಯಾ ಗಂಗಾವತಿ ಮುನಿರಾಬಾದ್-ಮಹೆಬೂಬ್‍ನಗರ ರೈಲು ಮಾರ್ಗಗಕ್ಕೆ 1996-97 ರಲ್ಲಿ ಚಾಲನೆ ನೀಡಲಾಗಿದೆ. ಆದರೆ ಇದುವರೆಗೂ ಈ ಯೋಜನೆಯು ನಿಂತು ಹೋಗಿತ್ತು. ಈಗ ಕಾಮಗಾರಿ ಪೂರ್ಣಗೊಂಡು ಗಂಗಾವತಿಗೆ ರೈಲು ಬಂದಿರುವುದು ತುಂಬಾ ಅನುಕೂಲವಾಗಿದೆ. ಆನೆಗುಂದಿ, ಕಿಷ್ಕಿಂದ, ಪಂಪಾಸರೋವರ, ಶಬರಿ ಆಶ್ರಮ, ಹೇಮಗುಡ್ಡ, ಗಂಡುಗಲಿ ಕುಮಾರರಾಂ ಅನೇಕ ವಿಷಯವಾಗಿ ಗಂಗವಾತಿಯು ಐತಿಹಾಸಿಕ ಪ್ರದೇಶಗಳನ್ನು ಹೊಂದಿದೆ. ಅಲ್ಲದೇ ಗಂಗಾವತಿ ಭತ್ತದ ಕಣಜ ಎಂದು ಪ್ರಸಿದ್ದಿಪಡೆದಿದ್ದು, ರೈಲು ಸೇವೆಯಿಂದಾಗಿ ವ್ಯಾಪಾರಕ್ಕೆ ಇನ್ನೂ ಅನುಕೂಲವಾಗಿದಂತಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಜನ ಸಾಮಾನ್ಯರೆಲ್ಲರಿಗೂ ಅನುಕೂಲವಾಗುವಂತೆ ಅನೇಕ ಯೋಜನೆಗಳನ್ನು ನೀಡಿದ್ದು, ಈಡಿ ವಿಶ್ವವೇ ಮೆಚ್ಚುವಂತಾಗಿದೆ. ಮಾಜಿ ಪ್ರದಾನಿ ಇಂದಿರಾಗಾಂಧಿ ಅವರು ಬ್ಯಾಂಕುಗಳ ರಾಷ್ಟ್ರೀಕರಣವನ್ನು ಮಾಡಿ, ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಪ್ರಧಾನಿ ಮೋದಿ ಅವರು ಜನ-ಧನ ಎಂಬ ಯೋಜನೆಯನ್ನು ಜಾರಿಗೆ ತಂದಿದ್ದು, ಇದರಿಂದ ಶೇ.100 ರಷ್ಟು ಜನರು ಬ್ಯಾಂಕ್ ಖಾತೆ ಹೊಂದುವಂತಾಗಿದೆ. ಗುಣಮಟ್ಟದ ಶಿಕ್ಷಣ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲೆಯ ಕೊಪ್ಪಳ ಮತ್ತು ಗಂಗಾವತಿ ತಾಲೂಕಿನಲ್ಲಿ ಕೇಂದ್ರಿಯ ವಿದ್ಯಾಲಯಗಳನ್ನು ಮಂಜೂರು ಮಾಡಿದೆ. ಗದಗ-ವಾಡಿ ರೈಲು ಯೋಜನೆಯಡಿ ಕುಷ್ಟಗಿ ತಾಲೂಕಿನಲ್ಲಿ ರೈಲು ನಿಲ್ದಾಣ ಸ್ಥಾಪನೆಗೆ ಈಗಾಗಲೇ ಅಡಿಗಲ್ಲು ಹಾಕಲಾಗಿದೆ. ಭಾಗ್ಯನಗರ ರಸ್ತೆ ಮೇಲಸುತುವೆ, ಕಿನ್ನಾಳ ರಸ್ತೆಯ ಕೆಳಸೇತುವೆಗಳ ನಿರ್ಮಾಣದಿಂದ ಕೊಪ್ಪಳದ ಜನಕ್ಕೆ ತುಂಬಾ ಅನುಕೂಲವಾಗಿದೆ. ರಾಷ್ಟ್ರೀಯ ಹೆದ್ದಾರಿಯೋಜನೆಡಿ ಚತುಸ್ಪತ ರಸ್ತೆ ನಿರ್ಮಾಣ, ಗಿಣಿಗೇರಾದಲ್ಲಿ ರೈಲ್ವೆ ಸೇತುವೆ ನೀರ್ಮಾಣ, ರೈಲು ನಿಲ್ದಾಣಗಳ ಅಭಿವೃದ್ಧಿ ಹೀಗೆ ಅನೇಕ ಕಾರ್ಯಕ್ರಮಗಳು ಪ್ರಗತಿಯಲ್ಲಿವೆ ಮತ್ತು ಪೂರ್ಣಗೊಂಡಿವೆ. ಇಂತಹ ಯೋಜನೆಗಳನ್ನು ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ನೀಡಿದ್ದು, ಪ್ರಧಾನ ಮಂತ್ರಿಗಳಿಗೆ, ಕೇಂದ್ರ ಸರ್ಕಾರಕ್ಕೆ, ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಧನ್ಯವಾದಗಳನ್ನು ಹೇಳುತ್ತೇನೆ.ಮುನಿರಾಬಾದ್-ಮಹಬೂಬ್‍ನಗರ್ (246 ಕಿ.ಮೀ.) ಹೊಸ ರೈಲು ಮಾರ್ಗ ಯೋಜನೆಯ ಭಾಗವಾದ ಗಿಣಿಗೇರಾ-ರಾಯಚೂರು ಹೊಸ ರೈಲು ಮಾರ್ಗ ಯೋಜನೆಗೆ ರೈಲು ಮಂಡಳಿಯು 2013 ರಲ್ಲಿ 1350 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಮುಂಜೂರಾತಿಯನ್ನು ನೀಡಿತು. ಯೋಜನೆಯ ಅಂದಾಜು ವೆಚ್ಚವು 2228 ಕೋಟಿ ರೂಪಾಯಿಗಳು. ಭೂಮಿಯೂ ಸೇರಿ ಯೋಜನೆಯ ವೆಚ್ಚವನ್ನು ಕರ್ನಾಟಕ ಸರ್ಕಾರದೊಂದಿಗೆ 50:50 ಆಧಾರದಲ್ಲಿ ಹಂಚಿಕೊಳ್ಳಲಾಗಿದೆ. ಈ ಯೋಜನೆಯ ಮಾರ್ಗವು ರಾಜ್ಯದ ಎರಡು ಜಿಲ್ಲೆಗಳಾದ ಕೊಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಹಾದುಹೋಗಲಿದ್ದು, ಗಿಣಗೇರಾ, ಗಂಗಾವತಿ, ಕಾರಟಗಿ, ಸಿಂಧನೂರು ಮತ್ತು ರಾಯಚೂರು, ಈ ಯೋಜನೆಯ ಮೊದಲ ಭಾಗದಲ್ಲಿ ಗಿಣಿಗೇರಾ-ಚಿಕ್ಕಬೆಣಕಲ್ (27 ಕೀ.ಮೀ) ರೈಲು ಮಾರ್ಗವು, 2017ರ ಮಾರ್ಚ್. 31 ರಂದು ಕಾರ್ಯಸಮರ್ಪಣೆಗೊಂಡಿದೆ. ಚಿಕ್ಕಬೆಣಕಲ್-ಗಂಗಾವತಿ (12.41 ಕಿ.ಮೀ.) ಮಾರ್ಗವು ಇಂದು ಪ್ರಾರಂಭವಾಗಿದೆ. ಗಿಣಗೇರಾ-ರಾಯಚೂರು ಹೊಸ ರೈಲು ಮಾರ್ಗ ಯೋಜನೆಯ ಭಾಗವಾದ ಚಿಕ್ಕಬೆಣಕಲ್ ಗಂಗಾವತಿ ರೈಲು ಮಾರ್ಗದ (12.41 ಕಿ.ಮೀ.) ಉದ್ಘಾಟನೆಯಾಗಿದ್ದು, ಈ ಮಾರ್ಗ ಗಂಗಾವತಿ ಮತ್ತು ಉತ್ತರ ಕರ್ನಾಟಕದ ಪಟ್ಟಣಗಳನ್ನು ಮತ್ತು ಬೆಂಗಳೂರಿನೊಂದಿಗೆ ಸಂರ್ಕಿಸುವ ಪ್ರಮುಖ ಮಾರ್ಗವಾಗಿದೆ. ಈ ಪ್ರದೇಶವು ಸಂಪೂರ್ಣವಾಗಿ ಭತ್ತದ ಗದ್ದೆಗಳಿಂದ ಕೂಡಿದ್ದು, ಗಂಗಾವತಿಯು ಕರ್ನಾಟಕದ “ಅನ್ನದ ಬಟ್ಟಲು” ಎಂದು ಹೆಸರಾಗಿದೆ. ಈ ಭಾಗದ ರೈಲು ಮಾರ್ಗ ನಿರ್ಮಾಣಕ್ಕಾಗಿ 208 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿದ್ದು, 160 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. ಗಂಗಾವತಿಯಲ್ಲಿನ ನಿಲ್ದಾಣದ ಕಟ್ಟಡವು ಆಧುನಿಕ ವಾಸ್ತುಶಿಲ್ಪದ ವಿನ್ಯಾಸವನ್ನು ಹೊಂದಿದ್ದು, ವಿಶಾಲವಾದ ಸಕ್ರ್ಯುಲೇಂಟಿಗ್ ಪ್ರದೇಶವನ್ನು ಹೊಂದಿದೆ. ಈ ಕಟ್ಟಡವು ಸುಮಾರು 12.5 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಕಾನ್‍ಕೋರ್ಸ್, ಪ್ಲಾಟ್‍ಫಾಮ್‍ಗಳನ್ನು ಸುಲಭವಾಗಿ ತಲುಪಲು ಪಾದಚಾರಿ ಮೇಲ್ಸೇತುವೆ, 3 ಪ್ಲಾಟ್‍ಫಾಮ್‍ಗಳು, ಪ್ಲಾಟ್‍ಫಾಮ್ ಚಾವಣಿ, ಬೆಂಚ್‍ಗಳು ಮತ್ತು ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರು ಹೇಳಿದರು.ಸಮಾರಂಭದಲ್ಲಿ ಶಾಸಕರಾದ ಪರಣ್ಣ ಈಶ್ವರಪ್ಪ ಮುನವಳ್ಳಿ ಹಾಗೂ ಬಸವರಾಜ ದಢೇಸೂಗೂರು, ಗಂಗಾವತಿ ತಾ.ಪಂ. ಅಧ್ಯಕ್ಷ ವಿರುಪಾಕ್ಷಗೌಡ ಡಿ. ಮಾಲಿಪಾಟೀಲ್, ಎ.ಪಿ.ಎಂ.ಸಿ. ಅಧ್ಯಕ್ಷ ಸಣ್ಣಕ್ಕಿ, ಜಿ.ಪಂ. ಸದಸ್ಯರಾದ ರಾಮಣ್ಣ ಚೌಡಕಿ ಹಾಗೂ ಗವಿಸಿದ್ದಪ್ಪ ಕರಡಿ, ರೈಲ್ವೆ ಇಲಾಖೆ ಅಧಿಕಾರಿಗಳಾದ ಡಿ.ಆರ್.ಎಂ. ರಾಜೇಶ ಮೋಹನ, ರಾಮಗೋಪಾಲ, ಮೋಹನ್ ರಾಜ್, ಮಾಜಿ ವಿದಾನ ಪರಿಷತ್ ಸದಸ್ಯ ಹೆಚ್.ಆರ್. ಶ್ರೀನಾಥ ಸೇರಿದಂತೆ ಹಲವು ಗಣ್ಯರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.