‘ಚಕ್ರವ್ಯೂಹ’ ಚಿತ್ರದ ವಿಮರ್ಶೆ- ಗೆದ್ದ ಚಕ್ರವ್ಯೂಹ’

”ಒಬ್ಬ ಡ್ರೈವರ್ ಗೆ ತೊಂದರೆ ಆದರೆ ಎಲ್ಲಾ ಡ್ರೈವರ್ಸ್ ಒಂದಾಗುತ್ತಾರೆ. ಒಬ್ಬ ರಾಜಕಾರಣಿಗೆ ತೊಂದರೆ ಆದರೆ, ಆ ಪಕ್ಷದ ಸದಸ್ಯರೆಲ್ಲಾ ಒಂದಾಗುತ್ತಾರೆ. ಅದೇ ಒಬ್ಬ ಪಬ್ಲಿಕ್ ಗೆ ತೊಂದರೆ ಆದ್ರೆ ಯಾಕೆ ಎಲ್ಲಾ ಪಬ್ಲಿಕ್ ಒಂದಾಗೋಲ್ಲ…?” ಗೆದ್ದ ಚಕ್ರವ್ಯೂಹ’ “ಅಭಿಮಾನಿಗಳ ಒಂದು ವರ್ಷದ ವನವಾಸ ಇಂದು ಅಂತ್ಯಗೊಂಡಿದೆ. ಪವರ್ ಸ್ಟಾರ್ ಈಸ್ ಬ್ಯಾಕ್, ಅಪ್ಪು ಭರ್ಜರಿಯಾಗಿ ‘ಚಕ್ರವ್ಯೂಹ’ ಬೇಧಿಸಿದ್ದಾರೆ. ಚಿತ್ರದ ಆರಂಭದಿಂದ ಅಂತ್ಯದವರೆಗೂ ಕಿಂಚಿತ್ತೂ ನಿಮ್ಮ ಗಮನ ಬೇರೆಡೆ ಹೋಗುವು13133326_1702753113341145_5304383523298352513_nದೇ ಇಲ್ಲ. ಅಷ್ಟರಮಟ್ಟಿಗೆ ಚಿತ್ರ ಕುತೂಹಲಭರಿತವಾಗಿ ಸಾಗುತ್ತದೆ, ಸಮಾಜದ ಗಣ್ಯ ವ್ಯಕ್ತಿಗಳ ಮುಖವಾಡವನ್ನು, ಮುಖವಾಡ ಧರಿಸಿಯೇ ಮಟ್ಟ ಹಾಕುವ ಪುನೀತ್ ಇಲ್ಲಿ ಅಕ್ಷರಶಃ ಜನನಾಯಕ. ತನ್ನ ವಯಸ್ಸಿಗೆ, ವ್ಯಕ್ತಿತ್ವಕ್ಕೆ ತಕ್ಕುದಾದ ಪಾತ್ರವನ್ನು ಅಪ್ಪು ಆಯ್ಕೆ ಮಾಡಿ ಗೆದ್ದಿದ್ದಾರೆ”. “ಅವರ ಸಾಹಸ-ನೃತ್ಯ-ಸಂಭಾಷಣೆ ಒಪ್ಪಿಸುವ ರೀತಿ ಪ್ರೇಕ್ಷಕರಿಗೆ ಹಬ್ಬವೇ ಸರಿ. ನಾಯಕಿ ರಚಿತಾ ರಾಮ್ ಸಿಂಪ್ಲಿ ಸೂಪರ್ಬ್, ಅಪ್ಪು-ರಚಿತಾ ಜೋಡಿ ನೋಡುಗರ ಮನಸೆಳೆಯುತ್ತದೆ. ನಿರ್ದೇಶಕ ಸರವಣನ್ ಕನ್ನಡದ ಪ್ರೇಕ್ಷಕರಿಗೆ ಇಷ್ಟವಾಗುವ ಸಾಮಾಜಿಕ ಕಳಕಳಿಯಿರುವ ಸಿನಿಮಾ ನೀಡಿದ್ದಾರೆ. ಛಾಯಾಗ್ರಹಣ, ಸಂಗೀತ, ಹಿನ್ನಲೆ ಸಂಗೀತ ಎಲ್ಲವೂ ಪೂರಕ ಮತ್ತು ಸುಂದರವಾಗಿದೆ. ಸಾಧು ಕೋಕಿಲಾ ನಗಿಸುತ್ತಾರೆ, ರಂಗಾಯಣ ರಘು ಹೃದಯ ಗೆಲ್ಲುತ್ತಾರೆ, ಖಳನಟ ಅರುಣ್ ವಿಜಯ್ ಗಮನ ಸೆಳೆಯುತ್ತಾರೆ” ಒಟ್ಟಾರೆ ಹೇಳುವುದಾದರೆ ಚಕ್ರವ್ಯೂಹ ಹೆಸರಿಗೆ ತಕ್ಕ ಸಿನಿಮಾ, ಅಪ್ಪುಗೆ ಹೇಳಿಮಾಡಿಸಿದ ಸಿನಿಮಾ. ವಿಶ್ವದೆಲ್ಲೆಡೆ ಆರ್ಭಟಿಸುತ್ತಿರುವ ಕನ್ನಡದ ಸಿನಿಮಾ. ಆರಾಮವಾಗಿ ಮನೆಮಂದಿಯೆಲ್ಲ ಚಿತ್ರಮಂದಿರಕ್ಕೆ ಹೋಗಿ ನೋಡಿ. ಯಾಕೆಂದರೆ ಇದು ನಿಮ್ಮ ಸಿನಿಮಾ, ಜನರಿಂದ ಜನರಿಗಾಗಿ ಜನರಿಗೋಸ್ಕರ ಮಾಡಿರೋ ಅದ್ದೂರಿ ಸಿನಿಮಾ. ಜನಸಾಮಾನ್ಯನ ರೇಟಿಂಗ್ 5/5″. ಸಿನಿಮಾ ಸೂಪರ್ ಎಂದ ಪ್ರೇಕ್ಷಕ.13062265_1702751523341304_4124268959849949142_n
Please follow and like us:
error