ಪಕ್ಷೇತರ ಅಭ್ಯರ್ಥಿ ಮೇಲೆ ಕಾಂಗ್ರೆಸ್ ಮುಖಂಡರು ಹಲ್ಲೆ ಮಾಡಿರುವುದು ಕೊಪ್ಪಳದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಗಂಗಾವತಿ ತಾಲೂಕಿನ ಸಿದ್ದಾಪೂರ ಗ್ರಾಮದಲ್ಲಿ ಇದೇ 17 ಕ್ಕೆ ಗ್ರಾಮ ಪಂಚಾಯ್ತಿ ಚುಣಾವಣೆ ನಡೆಯಲಿದೆ. ಚುಣಾವಣೆಗೆ 5ನೇ ವಾರ್ಡ್ನಿಂದ ಪಕ್ಷೇತರವಾಗಿ ಮಹಮ್ಮದ ಆರೀಫ್ ಕಣಕ್ಕಳಿದಿದ್ದರು. ಆದರೆ ಇದೇ ವಾರ್ಡನಿಂದ ಎಮ್. ಸಿರಾಜ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಸಿರಾಜ್ ಸಂಬಂಧಿಕರು ಹಾಗೂ ಕಾಂಗ್ರೆಸ್ ಮುಖಂಡರಾದ ಮೆಹಬೂಬ್, ಅಬ್ದುಲ್ ರೌಫ್ ಅವರ ಹಿಂಬಾಲಕರೊಂದಿಗೆ ಆರೀಫ್ ಮನೆಗೆ ತೆರಳಿ ಕುಟುಂಬದ ಮೇಲೆ ಹಲ್ಲೆ ಮಾಡಿದ್ದಾರಂತೆ. ದೌರ್ಜನ್ಯದಿಂದ ಮಹಮ್ಮದ ಆರೀಫ್ ಕಳೆದ ತಿಂಗಳು 9ರಂದು ನಾಮಪತ್ರ ವಾಪಸ್ ಪಡೆದಿದ್ದಾರೆ.
Please follow and like us: