ಗೊಂಡಬಾಳ ಕುಟುಂಬದಿಂದ ಉಚಿತ ಸ್ವರ್ಣಾಮೃತ ಪ್ರಾಶನ.

ಕೊಪ್ಪಳ, ಏ. ೧೩. ನಗರದ ಯುವ ಪತ್ರಕರ್ತ ಮಂಜುನಾಥ ಜಿ. ಗೊಂಡಬಾಳ ಕುಟುಂಬದಿಂದ ಭಾಗ್ಯನಗರದ ಮಕ್ಕಳಿಗೆ ಉಚಿತ ಸ್ವರ್ಣಾಮೃತ ಪ್ರಾಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಸದುಪಯೋಗ ಪಡಿಸಿಕೊಳ್ಳಲು ಕೋರಲಾಗಿದೆ. ಏಪ್ರಿಲ್ ೧೫ ರಂದು ಬೆಳಿಗ್ಗೆ ೯ ಗಂಟೆಯಿಂದ ೨ ಗಂಟೆಯವರೆಗೆ ಭಾಗ್ಯನಗರದ ಜನತೆಗೆ ಮಾತ್ರ ಎಫ್‌ಸಿಐ ಗೋಧಾಮು ಹಿಂದುಗಡೆ ಇರುವ ಗೊಂಡಬಾಳ ಅವರ ಮನೆಯ ಪ್ರಾಂಗಣದಲ್ಲಿ ಶ್ರೀ ಶಿರಡಿ ಸಾಯಿ ಭಿಕ್ಷಾ ಕೇಂದ್ರ, ಯುವಚೇತನ swarnamruta prashanaಶಿವರಾಜ ತಂಗಡಗಿ ವೇದಿಕೆ ಮತ್ತು ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆಯವರ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದೇ ಮೊದಲ ಬಾರಿಗೆ ಬೆಂಗಳೂರಿನ ಮುದ್ರಾ ರತ್ನ ಶ್ರೀ ಲಕ್ಷ್ಮೀಶ್ರೀನಿವಾಸ ಗುರೂಜಿರವರ ಮತ್ತು ಆಂಜನೇಯನ ಆರಾಧಕರಾದ ಶ್ರೀ ಪ್ರಕಾಶ ಶಿಲ್ಪಿಯವರ ಮಾರ್ಗದರ್ಶನದಲ್ಲಿ ಇಂಥಹ ಸೇವೆಯನ್ನು ಉಚಿತವಾಗಿ ಮಾಡುತ್ತಿದ್ದು, ೫೦೦ ಮಕ್ಕಳಿಗೆ ಈ ಭಾರಿ ಸ್ವರ್ಣಾಮೃತ ಪ್ರಾಶನ ಮಾಡಲಾಗುವದು. ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ನೇರವಾಗಿ ಬಂದು ೨೦ ರೂಪಾಯಿ ಕೊಟ್ಟು ಕಾರ್ಡ ಪಡೆದುಕೊಳ್ಳಬೇಕು ಒಂದು ವರ್ಷದವರೆಗೆ ಇದೀಗ ಜನಿಸಿದ ಮಗುವಿನಿಂದ ಹಿಡಿದು ೬ ವರ್ಷದ (೦-೬) ಮಕ್ಕಳಿಗೆ ದಾವಣಗೆರೆಯ ಖ್ಯಾತ ವೈದ್ಯರು ತಯಾರಿಸಿದ ಸ್ವರ್ಣಾಮೃತ ಹನಿಗಳನ್ನು ಹಾಕಲಾಗುವದು.
ಸ್ವರ್ಣಾಮೃತ ಆಯುರ್ವೇದ ವೈದ್ಯ ಲೋಕದಲ್ಲಿ ಸಿದ್ಧಗೊಳಿಸಿದ ದಿವ್ಯೌಷದವಾಗಿದ್ದು, ಮಕ್ಕಳಿಗೆ ಇದನ್ನು ಕೊಡಿಸುವದರಿಂದ ಉತ್ತಮ ಬೆಳವಣಿಗೆಯಾಗುತ್ತದೆ, ರೋಗ ನಿರೋಧಕ ಶಕ್ತಿವೃದ್ಧಿಸುತ್ತದೆ, ಸ್ಮರಣಶಕ್ತಿ ಹೆಚ್ಚುತ್ತದೆ ಎಂದು ರಾಜ್ಯ ಯುವ ಪ್ರಶಸ್ತಿ ಪುರಸ್ಕೃತೆ ಜ್ಯೋತಿ ಗೊಂಡಬಾಳ ತಿಳಿಸಿದ್ದಾರೆ.

Related posts

Leave a Comment