ಗೆಳತಿ ದೂರವಾದಳೆಂದು ಕೈ ಕೊಯ್ದುಕೊಂಡ ಪ್ರೇಮಿ

desi_love_story

ಗಂಗಾವತಿ :  ಗೆಳತಿ ದೂರವಾದಳೆಂದು ಬೇಸತ್ತು ಕೈ ಕೊಯ್ದುಕೊಂಡು ನರಳಾಡುತ್ತಿದ್ದ ವಿದೇಶಿ ಪ್ರಜೆಯನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕು ವಿರೂಪಾಪುರ ಗಡ್ಡಿ ಗ್ರಾಮದಲ್ಲಿ ಇಂದೆ ಬೆಳಗ್ಗೆ ಕೈ ಕತ್ತರಿಸಿಕೊಂಡಿದ್ದ 26 ವರ್ಷದ ಇಸ್ರೇಜ್ ಪ್ರಜೆ ಡ್ಯಾನಿಯಲ್ ನನ್ನು ಸ್ಥಳೀಯರು ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬೆಳ್ಳಂಬೆಳಗ್ಗೆಯೇ ಕೈ ಕತ್ತರಿಸಿಕೊಂಡು ಐ ವಾಂಟ್ ಡಾಕ್ಟರ್ ಎಂದು ಕಿರುಚಾಡುತ್ತಿದ್ದ ಡ್ಯಾನಿಯಲ್ ನನ್ನು ಸ್ಥಳೀಯರು 108 ಮೂಲಕ ಆಸ್ಪತ್ರೆಗೆ ಸೇರಿಸಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಹಂಪಿಯಲ್ಲಿ ಅನಾ ಎಂಬ ಇಸ್ರೇಲ್ ಪ್ರವಾಸಿ ಪರಿಚಯವಾಗಿದ್ದಾಳೆ. ಸುಮಾರು ನಾಲ್ಕು ದಿನ ಜೊತೆಯಲ್ಲೆ ಸುತ್ತಾಡಿ ಒಂದೇ ರೆಸಾರ್ಟನಲ್ಲೆ ಉಳಿದುಕೊಂಡಿದ್ದಾರೆ. ಡ್ಯಾನಿಯಲ್ ಆಕೆಯನ್ನು ಲೈಂಗಿಕವಾಗಿಯೂ ಮುಂದುವರೆಯುವಂತೆ ಕೇಳಿದ್ದು, ಯುವತಿ ಅನಾ ಇದನ್ನು ತಿರಸ್ಕರಿಸಿ, ಇತನನ್ನು ಬಿಟ್ಟು ಹೋಗಿದ್ದಾಳೆ. ಇದರಿಂದ ಬೇಸರಗೊಂಡ‌ ಡ್ಯಾನಿಯಲ್ ಕೈ ಕತ್ತರಿಸಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಗಾಯಗೊಂಡ ಡ್ಯಾನಿಯಲ್ ಗೆ ಗಂಗಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಇಸ್ರೇಲ್ ನಿವಾಸಿಗಳಾದ ಡ್ಯಾನಿಯಲ್ ಮತ್ತು ಅನಾ ಭಾರತ ಪ್ರವಾಸಕ್ಕೆ ಬಂದವರು. ಇಬ್ಬರಿಗೂ ಹಂಪಿಯಲ್ಲಿ ಪರಿಚಯವಾಗಿದ್ದಾರೆ. ಸ್ಥಳಕ್ಕೆ ಗಂಗಾವತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

Leave a Reply