ಮಾಜಿ ಸಂಸದ ಎಹಸಾನ್ ಜಾಫ್ರಿ ಸೇರಿದಂತೆ 69 ಮಂದಿ ಹತ್ಯೆಗೀಡಾದ ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ ಪ್ರಕರಣ ಸಂಬಂಧ ವಿಶೇಷ ಎಸ್ಐಟಿ ಕೋರ್ಟ್ ಗುರುವಾರ ತೀರ್ಪು ನೀಡಿದ್ದು, ಎಂದು ಹೇಳಿದೆ. ಜೂನ್ 6ರಂದು ಶಿಕ್ಷೆ ಪ್ರಕಟಿಸಲಿದೆ.
ವಿಶೇಷ ಕೋರ್ಟ್ನ ನ್ಯಾಯಾಧೀಶರಾದ ಪಿ.ಬಿ. ದೇಸಾಯಿ ಅವರು ತೀರ್ಪು ನೀಡಿದ್ದು, 66 ಆರೋಪಿಗಳ ಪೈಕಿ ಬಿಜೆಪಿಯ ಕಾರ್ಪೊರೇಟರ್ ಬಿಪಿನ್ ಪಾಟೀಲ್ ಸೇರಿದಂತೆ 36 ಮಂದಿಯನ್ನು ಪಿತೂರಿ ದೋಷಾರೋಪ(120ಬಿ)ಅಡಿ ಖುಲಾಸೆಗೊಳಿಸಿದ್ದಾರೆ.66 ಆರೋಪಿಗಳ ಪೈಕಿ ಆರು ಮಂದಿ ಮೃತಪಟ್ಟಿದ್ದಾರೆ. 24 ಅಪರಾಧಿಗಳ ಪೈಕಿ 11 ಆರೋಪಿಗಳ ವಿರುದ್ಧ ಕೊಲೆ ಆರೋಪ ಸಾಬೀತಾಗಿದೆ. 13 ಮಂದಿ ವಿರುದ್ಧ ಇತರ ಆರೋಪಗಳು ಸಾಬೀತಾಗಿವೆ.
ಹತ್ಯೆ ಸಂಬಂಧ ಸಾಕ್ಷಾಧಾರ ಲಭ್ಯವಿಲ್ಲದ ಕಾರಣ ಆರೋಪಿಗಳನ್ನು ಐಪಿಸಿ ಸೆಕ್ಷನ್ 120ಬಿ ಅಡಿ ಕ್ರಿಮಿನಲ್ ಆರೋಪದಿಂದ ಮುಕ್ತಗೊಳಿಸಲಾಗಿದೆ. ಎಲ್ಲ ಅಪರಾಧಿಗಳ ಶಿಕ್ಷೆಯನ್ನು ಜೂನ್ 6ರಂದು ಪ್ರಕಟಿಸಲಾಗುವುದು ಎಂದು ಕೋರ್ಟ್ ಹೇಳಿದೆ. 2002ರಲ್ಲಿ ಗೋಧ್ರಾ ಘಟನೆಯ ಬಳಿಕ ನಡೆದ ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡದಲ್ಲಿ ಜಾಕಿಯಾ ಪತಿ, ಕಾಂಗ್ರೆಸ್ ಮಾಜಿ ಸಂಸದ ಎಹಸಾನ್ ಜಾಫ್ರಿ ಸೇರಿದಂತೆ 69 ಜನರನ್ನು ಹತ್ಯೆ ಮಾಡಲಾಗಿತ್ತು.
2002ರ ಗಲಭೆಯ ಸಂಚಿನಲ್ಲಿ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು 57 ಜನರು ಶಾಮೀಲಾಗಿದ್ದರು ಎಂದು ಜಾಕಿಯಾ ಗಂಭೀರವಾದ ಆರೋಪ ಮಾಡಿದ್ದರು.ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಿದ್ದ ಜಾಕಿಯಾ ಜಾಫ್ರಿ ಅವರಿಗೆ ಸುಪ್ರೀಂಕೋರ್ಟ್ ನೇಮಿಸಿದ್ದ ಎಸ್ಐಟಿ ಮೋದಿ ಮತ್ತು ಇತರರನ್ನು ಆರೋಪದಿಂದ ಮುಕ್ತಗೊಳಿಸಿತ್ತು.ಪ್ರಕರಣ ಸಂಬಂಧ 2013ರಲ್ಲಿ ಅಹಮದಾಬಾದ್ ಮೆಟ್ರೊಪಾಲಿಟಿನ್ ನ್ಯಾಯಾಲಯ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರಿಗೆ ಕ್ಲೀನ್ ಚಿಟ್ ನೀಡಿದೆ.ಈ ಮೊದಲು ವಿಶೇಷ ತನಿಖಾ ತಂಡವು (ಎಸ್ಐಟಿ) ಮೋದಿ ಸೇರಿದಂತೆ ಇನ್ನಿತರ ಆರೋಪಿಗಳಿಗೆ ಕ್ಲೀನ್ ಚಿಟ್ ನೀಡಿತ್ತು. ಅದನ್ನು ಪ್ರಶ್ನಿಸಿ ಎಹಸಾನ ಜಾಫ್ರಿ ಅವರ ಪತ್ನಿ ಜಾಕಿಯಾ ಜಾಫ್ರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಮೆಟ್ರೊಪಾಲಿಟಿನ್ ಕೋರ್ಟ್ ವಜಾಮಾಡಿತ್ತು.