ಗುರುವಂದನಾ ಸಂಗೀತ ಕಾರ್ಯಕ್ರಮ…!

  ಶ್ರೀಗವಿಸಿದ್ಧೇಶ್ವರ ಸಂಗೀತ ವಿದ್ಯಾಪೀಠವು,  ಶ್ರೀರಾಘವೇಂದ್ರಸ್ವಾಮಿಗಳ ಮಠದಲ್ಲಿ ಹಮ್ಮಿಕೊಂಡ ಗುರುವಂದನಾ ಸಂಗೀತ ಸಂಜೆಯಲ್ಲಿ ಯಲಬುರ್ಗಾ ತಾಲೂಕಿನ ಮುಧೋಳದ ಪಂಡಿತ ದೇವೇಂದ್ರಕುಮಾರ ಪತ್ತಾರ ಅವರಿಗೆ ಗೌರವ ಸಮರ್ಪಣೆ ಹಾಗೂ ಗಾಯನ ಕಾರ್ಯಕ್ರಮವು ನಡೆಯಿತು.  ಅಧ್ಯಕ್ಷತೆಯನ್ನು ಶ್ರೀ ಧೀರೇಂದ್ರಾಚಾರ್ಯ ಬೆಳ್ಳಟ್ಟಿಯವರು ವಹಿಸಿ ವ್ಯಾಸಪೌರ್ಣಿಮೆ, ಗುರುಪೌರ್ಣಿಮೆ, ಬುದ್ಧಪೌರ್ಣಿಮೆ, ಕಡ್ಲಿಗಡಬ ಹುಣ್ಣಿಮೆ ಎಂಬ ನಾಮ ಇರುವ ಈ ಗುರುವಿನ ಮಹಿಮೆ ತಿಳಿಯುವ, ವಂದಿಸುವ, ಸ್ಮರಿಸುವ ದಿನವನ್ನಾಗಿ ಪರಂಪರಾಗತವಾಗಿ ಹಿರಿಯರು ನಡೆಸಿಕೊಂಡು ಬಂದಿದ್ದಾರೆ. ವಿದ್ಯಾಪೀಠದ ಯುವ???????????????????????????????

ಹಾಡುಗಾರ ರೆಲ್ಲಾ ಸೇರಿ ಹಿರಿಯ ಗಾಯಕರಿಗೆ ಗೌರವ ಸಮರ್ಪಿಸಿ ಹಿಂದಿನ ಗಾಯಕರ ಜೀವನ ತಿಳಿದು ಅದೇ ಹಾದಿಯಲ್ಲಿ ಸಾಗಿದಾಗ ಕಲೆಗಳು ಒಲಿತಾವಾ, ಸಾಧನೆಯಿಂದ ಮಾತ್ರ ಸಿದ್ದಿಸ್ತಾವ, ಕೇವಲ ಬಾಯಿಪಾಠದಿಂದಲ್ಲ ಎಂದರು. ವಿಚಾರ ವೈಭವದಲ್ಲಿ ಶ್ರೀಮತಿ ರಕ್ಷಿತಾ ನಾರಾಯಣ ದೇವರಕೇರೆಯವರು ಜನಪದ ವಾದ್ಯಗಳು ಕುರಿತು ಮಾತನಾಡಿದರು. ಆರಂಭದಲ್ಲಿ ವಿದ್ಯಾಪೀಠದ ಕೆಲವು ವಿದ್ಯಾರ್ಥಿಗಳಿಂದ ಗುರುವಂದನಾ ಗಾಯನ ನಡೆಯಿತು. ಶಕುಂತಲಾ ಬೆನ್ನಾಳ ಸ್ವಾಗತಿಸಿದರು, ಸೃಷ್ಠಿ ಸಾಲಿಮಠ ನಿರೂಪಿಸಿದರು.

Leave a Reply