You are here
Home > Koppal News-1 > koppal news > ಗವಿಸಿದ್ದ ಎನ್ ಬಳ್ಳಾರಿ ಇವರ ಸ್ಮರಣೆಗಾಗಿ ಕವಿಗೋಷ್ಠಿ

ಗವಿಸಿದ್ದ ಎನ್ ಬಳ್ಳಾರಿ ಇವರ ಸ್ಮರಣೆಗಾಗಿ ಕವಿಗೋಷ್ಠಿ

kavigosti-koppal

ಕೊಪ್ಪಳ: ಕೊಪ್ಪಳದ ನಾಡಕವಿ ಗವಿಸಿದ್ದ ಎನ್ ಬಳ್ಳಾರಿ ಇವರ ಸ್ಮರಣೆಯ ಅಂಗವಾಗಿ ಶ್ರೀಗವಿಸಿದ್ದ ಎನ್ ಬಳ್ಳಾರಿ ವೇದಿಕೆ ವತಿಯಿಂದ ದಿನಾಂಕ ೧೭-೦೬-೨೦೧೬ ಶುಕ್ರವಾರ ಸಾಯಂಕಾಲ ೬ ಗಂಟೆಗೆ ಕರ್ನಾಟಕ ರಾಜ್ಯ ನೌಕರರ ಸಂಘದ ಸಾಂಸ್ಕೃತಿಕ ಭವನ ( ಐ.ಬಿ ಎದುರುಗಡೆ, ಈಶ್ವರ ದೇವಸ್ಥಾನದ ಹಿಂಭಾಗ) ದಲ್ಲಿ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ. ಮುಖ್ಯ ಅತಿಥಿಗಳಾಗಿ ಹುಬ್ಬಳ್ಳಿಯ ಖ್ಯಾತ ವಿಮರ್ಶಕ ಹಾಗೂ ಸಾಹಿತಿ ಡಾ.ಶ್ಯಾಮಸುಂದರ ಬಿದರಕುಂದಿ ಆಗಮಿಸಲಿದ್ದಾರೆ.
ಕವಿಗೋಷ್ಠಿಯಲ್ಲಿ ವಿಠ್ಠಪ್ಪ ಗೋರಂಟ್ಲಿ, ಮುನಿಯಪ್ಪ ಹುಬ್ಬಳ್ಳಿ, ಕೆ.ಬಿ. ಬ್ಯಾಳಿ ,ವಿಮಲಾಇನಾಂದಾರ, ವಿಜಯಲಕ್ಷ್ಮಿಕೊಟಗಿ, ಅನಸೂಯ ಜಹಗೀರದಾರ, ಪುಷ್ಪಲತಾ ಯೋಳುಭಾವಿ, ಈಶ್ವರ ಹತ್ತಿ, ಎಸ್.ಎನ್.ತಿಮ್ಮನಗೌಡರ, ಶಿ.ಕಾ ಬಡಿಗೇರ, ಮಹಾಂತೇಶಕೊತಬಾಳ, ಸಿರಾಜ ಬಿಸರಳ್ಳಿ, ವಿ.ಬಿ ರಡ್ಡೇರ, ಶರಣಪ್ಪ ಎನ್ ಮೆಟ್ರಿ, ರಮೇಶಗಬ್ಬೂರ, ನಟರಾಜ ಸೋನಾರ, ಜಗನ್ನಾಥ ಬಿಸರಳ್ಳಿ, ಟಿ.ಕೆ ಗಂಗಾಧರ ಪತ್ತಾರ, ಮಹೇಶ ಬಳ್ಳಾರಿ ಭಾಗವಹಿಸಿ ಕವನ ವಾಚಿಸಲಿದ್ದಾರೆ.
ಸಾಹಿತ್ಯಾಸಕ್ತರು ಈ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಅಂಗವಾಗಿ ಶ್ರೀಗವಿಸಿದ್ದ ಎನ್ ಬಳ್ಳಾರಿ ವೇದಿಕೆಯ ಎಚ್.ಎಸ್ ಪಾಟೀಲ, ಅಲ್ಲಮಪ್ರಭು ಬೆಟ್ಟದೂರ, ಪ್ರಕಾಶಬಳ್ಳಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Leave a Reply

Top