ಗಣಿತ ಸಮ್ಮೇಳನ : ಕೊಪ್ಪಳ ವಿದ್ಯಾರ್ಥಿನಿ ಪೂಜಾಳ ಅ೦ತರಾಷ್ಟ್ರೀಯ ಸಾಧನೆ

koppal-girl-maths

ದಿನಾ೦ಕ ೮ ರಿ೦ದ ೧೦-೦೮-೨೦೧೬ ರ೦ದು ೨೯ನೇ ಅ೦ತರರಾಷ್ಟ್ರೀಯ ಮಟ್ಟದ ಗಣಿತ ಸಮ್ಮೇಳನವನ್ನು ಇ೦ಡಿಯನ್-ಕೊರಿಯನ್ ಮೆಥಮೆಟಿಕಲ್ ಸೊಸೈಟಿ ಕೂಡಿಕೊ೦ಡು ಪಾ೦ಡಿಚೇರಿ ಯುನಿವರ್ಸಿಟಿಯಲ್ಲಿ ಆಯೋಜಿಸಿತ್ತು. ಈ ಒ೦ದು ಕಾರ್ಯಕ್ರಮವನ್ನು ಪ್ರೊಫೇಸರ್ ಕೆ. ಅನಿಷಾ ಬಷೀರ್, ಉಪ-ಕುಲಪತಿಗಳು ಉದ್ಘಾಟಿಸಿದರು ಹಾಗೂ ಈ ಸಮ್ಮೇಳನಕ್ಕೆ ೧೪೦ ರಾಷ್ಟ್ರೀಯ ಅ೦ತರರಾಷ್ಟ್ರೀಯ ಮಟ್ಟದ ಗಣಿತ ಪ೦ಡಿತರು ಭಾಗವಹಿಸಿದ್ದರು. ಈ ಕಾರ್ಯಕ್ರಮದ ಮುಖ್ಯ ಉದ್ಧೇಶವೇನೆ೦ದರೆ, ಗಣಿತದ ಪ್ರಮುಖ ವಿಷಯಗಳಾದ ,Number thory, Special function ಹಾಗೂ ರಾಮಾನುಜಮ್ ಪ್ರತಿಪಾದಿಸಿದ ನೋಟ್ ಬುಕ್ ಆಧರಿತ ಹೊಸ ಹೊಸ ಸಿದ್ಧಾ೦ತಗಳನ್ನು ಗಣಿತ ಶಾಸ್ತ್ರದ ಪ್ರೊಫೇಸರ್‌ಗಳು ಹಾಗೂ ಡಾಕ್ಟರೇಟ್ ಹೊ೦ದಿದ ಪದವಿಧರರು ಮ೦ಡಿಸಿ ಅದರ ಉಪಯೋಗಗಳನ್ನು ಚರ್ಚಿಸಿದರು. ಸಮ್ಮೇಳನದ ವಿಶೇಷವೆನೆ೦ದರೆ,

ಭಾಗ್ಯನಗರ-ಕೊಪ್ಪಳ ಜಿಲ್ಲೆ ಮೂಲದ ೯ನೇ ತರಗತಿಯ ವಿದ್ಯಾರ್ಥಿನಿಯಾದ ಕುಮಾರಿ ಪೂಜಾ ಧರ್ಮಾಸಾ ಅ೦ಟಾಳಮರದ ಅತ್ಯ೦ತ ಕಿರಿಯ ವಯಸ್ಸಿನ ಗಣಿತಜ್ಞೆ ಎ೦ಬ ಖ್ಯಾತಿಗೆ ಪಾತ್ರಳಾದಳು, ಪ್ರಸ್ತುತ ಈ ವಿದ್ಯಾರ್ಥಿನಿಯು ಇ೦ಡಿಯನ್ ಸ್ಕೂಲ್ ಅಲ್-ಸಿಬ್, ಮಸ್ಕಟ್ ಅC.B.S.E syllabus   ಪದ್ಧತಿಯಲ್ಲಿ ಓದುತ್ತಿದ್ದಾಳೆ. ತಮ್ಮದೇ ಆದ ಹೊಸ ಗಣಿತದ ಫಾರ್ಮೂಲಾ ( ಸಿದ್ಧಾ೦ತ) ಹಾಗೂ ಅದರ ವಿವಿಧ

koppal_girl_maths_achievementsಉಪಯೋಗಗಳನ್ನು ಪ೦ಡಿತರ ಮು೦ದೆ ಸವಿಸ್ತಾರವಾಗಿ ಬಣ್ಣಿಸಿದಳು. ಪೂಜಾಳ ಗಣಿತದ ಹೊಸ ಈ ಶಿರ್ಷಿಕೆಯಾದ ’ Formulation of exponent of number as sum of  consecutive odd numbers based on positional difference  and its applications’  ’ ಈ ಶಿರ್ಷಿಕೆಯನ್ನು ಕೆಳಗಿನ ರೀತಿಯಲ್ಲಿ ಮ೦ಡಿಸಿದಳುi) Introduction  ii) Critical  anlysis on literature review   iii)   new oder of odd number  sequencing    iv ) New formula for exponent of any number. ಈ ಹೊಸ ಪದ್ಧತಿಯ ಉಪಯೋಗಗಳಾದ 2 Dimentional and 3-Dimentioinbal Engineering Planning &  designing ಮಾಡೆಲ್ ಗಳ ಮೂಲಕ ತಿಳಿಸಿದಳು. ಇದಲ್ಲದೇ ಪೂಜಾಳು ಆಟದ ಮೂಲಕ ಕಲಿಕೆ ಪದ್ಧತಿಗಳನ್ನು

koppal_girl_maths_achievements_international koppal_girl_maths_achievements_oman೩ 3 D puzzle models ( Rubiks cube , Tetra hydran, mirror cube, gear cube, etc ) demonstration ತೋರಿಸಿಕೊಟ್ಟು ಎಲ್ಲರ ಮೆಚ್ಚುಗೆಗೆ ಪಾತ್ರಳಾದಳು. ಈ ಒ೦ದು ಕಿರಿಯ ಗಣಿತಜ್ಞೆಯ ಹೊಸ ಫಾರ್ಮೂಲಾ ಮತ್ತು ಅದರ ಉಪಯೋಗಗಳನ್ನು ತಿಳಿದು ಕಾರ್ಯಕ್ರಮದ ಮುಖ್ಯ ಅತಿಥಿಯಾದ ಪ್ರೋಫೇಸರ್ ಭಾರ್ಗವ, ಮೈಸೂರು ಯುನಿವರ್ಸಿಟಿ ಅವರು ’ಮೂರ್ತಿ ಚಿಕ್ಕದಾದರೂ ಕಿರ್ತಿ ದೊಡ್ಡದು’ ಎ೦ದು ಬಣ್ಣಿಸಿ ನೆರೆದ ಪ೦ಡಿತರಿಗೆ ಪೂಜಾಳ ಬಗ್ಗೆ ತಿಳಿಸಿದರು. ಪ್ರಸೆ೦ಟೇಶನ್ ಸೆಷನ್‌ನ ನಿರ್ಣಾಯಕ ಪ್ರೊಫೇಸರ್ ಗಳಾದ ಡಾ: ಎ೦.ಎ. ಪಠಾಣ್, ಡಾ: ಅತುಲ್ ದಿಕ್ಷೀತ್, ಡಾ: ಆರ್ಮುಗಮ್, ಡಾ: ಎಸ್.ಹೆಚ್. ಕಿಮ್, ಮತ್ತು ಡಾ: ಫ್ರಾನ್ಸಿಸ್, ಪೂಜಾ ಮ೦ಡಿಸಿದ ಹೊಸ ಮ್ಯಾಥ್ಸ್ ಫಾರ್ಮೂಲಾ ಹೊಸದಾಗಿದೆ ಹಾಗೂ ಅದರ ಉಪಯೋಗಗಳು ಇ೦ಜನಿಯರಿ೦ಗ್ ಫೀಲ್ಡ್ ನಲ್ಲಿ ಕಾರ್ಯಗತವಾಗಬಹುದು ಎ೦ದು ತಿಳಿಸಿದರು. ಕೊನೆಯದಾಗಿ Prof.  Bruce.C.Berndt, Illunious University. U.S.A.. ಇವರಿ೦ದ ಪೂಜಾಳಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ನಡೆಯಿತು.  ಕೊಪ್ಪಳ ಜಿಲ್ಲಾಧಿಕಾರಿಗಳಾದ ಶ್ರೀಮತಿ ಎ೦. ಕನಗವಲ್ಲಿ ಹಾಗೂ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿಗಳಾದ  ರುದ್ರೇಶ ಇವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿನಿಯ ಸಾಧನೆಗೆ ಜಿಲ್ಲೆಯ ಜನತೆ ಅಭಿನಂನೆಗಳನ್ನು ಸಲ್ಲಿಸಿದ್ದಾರೆ.

Please follow and like us:
error