ಗಣಿತವೆಂಬುದು ಅಸೀಮ ಮೋಜಿನ ನೆಲೆ – ಗವಿಶ್ರೀ ಅಭಿಮತ

book-release
ಕೊಪ್ಪಳ,ನ.೧೩. ಗಣಿತವೆಂಬುದು ಅಸೀಮ ಮೋಜಿನ ನೆಲೆ ವಿನೋದದ ಸೆಲೆ ಎಮಬುದು ಸ್ಪಷ್ಟ, ಅದು ವಿಸ್ಮಯ, ಅಂಕಿ ಸಂಖ್ಯೆಗಳ ವಿಜ್ಞಾನ ಎಂದು ಗವಿಮಠದ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಅಭಿಪ್ರಾಯವ್ಯಕ್ತಪಡಿಸಿದರು.
ಅವರಿಂದು ಮಠದ ಪಡಸಾಲೆಯಲ್ಲಿ ಶ್ರೀ ವೀರಭದ್ರೇಶ್ವರ ಪಬ್ಲಿಕೇಷನ್ಸ್ ವತಿಯಿಂದ ಪ್ರಕಟಿಸಿರುವ ವ್ಹಿ.ವ್ಹಿ.ಗೊಂಡಬಾಳರ ಸ್ಪರ್ಧಾ ಗಣಿತ ಮತ್ತು ಮಾನಸಿಕ ಸಾಮರ್ಥ್ಯ ಎಂಬ ಗಣಿತ ಪ್ರಶ್ನೋತ್ತರ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ವೀರಭದ್ರಪ್ಪನವರ ಉತ್ತಮ ಪ್ರಯತ್ನ ಮತ್ತು ಪರಿಶ್ರಮದಿಂದ ಕೃತಿ ಮೂಡಿಬಂದಿದ್ದು, ಮುದ್ರಣವೂ ಸಹ ಚೆಂದವಾಗಿ ಬಂದಿದೆ, ಕೃತಿ ಗಣಿತವನ್ನು ಸಿದ್ಧಿಸಿಕೊಳ್ಳುವ ಪಟ್ಟುಗಳು, ತಂತ್ರ, ಕೌಶಲ, ಸುಳಿವು ಮತ್ತು ಹೊಳವುಗಳನ್ನು ಒಳಗೊಂಡಿದೆ, ಜಿಲ್ಲೆಯ ಅನೇಕರ ಈ ರೀತಿಯ ಪ್ರಯತ್ನಗಳು ಕೊಪ್ಪಳದ ಹೆಸರನ್ನು ಎತ್ತರಕ್ಕೆ ಕೊಂಡೊಯ್ಯುವದು ಎಂದ ಅವರು, ವೀರಭದ್ರಪ್ಪ ಅವರು ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದ ಕೊಡುಗೆಯಾಗಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕೃತಿಯ ಲೇಖಕ ಗಂಗಾವತಿ ಕ್ಷೇತ್ರ ಸಮನ್ವಯಾಧಿಕಾರಿ ವ್ಹಿ.ವ್ಹಿ.ಗೊಂಡಬಾಳ, ಶ್ರೀ ಗವಿಸಿದ್ಧೇಶ್ವರ ಬಿ.ಇಡಿ ಕಾಲೇಜು ಪ್ರಾಚಾರ್ಯ ಪ್ರಕಾಶ ಬಡಿಗೇರ, ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ಶಿಕ್ಷಕ ಖಾದರಭಾಷಾ ಸೋಂಪೂರ, ಮುದ್ರಕ ಆನಂದ ಜಿ. ಗೊಂಡಬಾಳ ಇತರರು ಇದ್ದರು.

Please follow and like us:
error