ಗಂಗಾವತಿ ಪ್ರೇತಾತ್ಮ, ದೆವ್ವ ಕಾಟಕ್ಕೆ ಜನ ಕಂಗಾಲು ! ನಿಗೂಡವಾಗಿ ಸಾವನ್ನಪ್ಪಿದ ಬಾಲಕ

devvada-kata-gangavati-ghost

Kannadanet News : ಇಲ್ಲಿ ರಾತ್ರಿ ಯಾದ್ರೆ ಸಾಕು ಜನ್ರು ಭಯದಿಂದ ಎದ್ದು ಕೂಡುತ್ತಾರೆ. ಯಾರೋಬ್ಬರು ಹೊರಗೆ ಬರುವುದೇ ಇಲ್ಲ. ಹುಣ್ಣಿಮೆ, ಅಮವಾಸ್ಯೆ ಬಂತೆಂದರೆ ಸಾಕು ಜನ ನಿದ್ದೆ, ನೀರು, ಊಟ ಬಿಟ್ಟು ಕಂಗಲಾಗಿ ಇಡೀ ರಾತ್ರಿ ಎದ್ದು ಕೂರುತ್ತಾರೆ. ಈಗಾಗಲೇ  ಇದರ ಪರಿಣಾಮದಿಂದ  ಓರ್ವ ಬಾಲಕ ಮೃತಪಟ್ಟಿದ್ದಾನೆ. ಇನ್ನೂ ಯಾರಿಗೆ ಏನಾಗಲಿದೆಯೋ ಎಂಬ ಆತಂಕದಲ್ಲಿಯೇ ದಿನ ಕಳೆಯುತ್ತಾರೆ. ಒಬ್ಬರು ನಾನು ನೋಡಿದ್ದೇನೆ  ರಾತ್ರಿ ಎರಡು ಭಾರಿ ಕರಿ ದೆವ್ವನ್ನ ಎನ್ನುತ್ತಿದ್ದರೆ ಇನ್ನೋಂದೆಡೆ ಜನ್ರು ಭಯದಲ್ಲಿ ಮಾತನಾವುದಕ್ಕೂ ಹಿಂದೆಟ್ಟು ಹಾಕುತ್ತಿದ್ದಾರೆ. ಹೌದು ಕೊಪ್ಪಳದ ಗಂಗಾವತಿ ನಗರದಿಂದ ಮೂರು ಕಿಲೋ ಮೀಟರ್ ದೂರವಿರುವ ವಿದ್ಯಾನಗರದಲ್ಲಿ ಪ್ರೇತಾತ್ಮ, ದೆವ್ವ, ಭೂತಗಳ ಕಾಟಕ್ಕೆ ಜನ್ರು ಕಂಗಲಾಗಿದ್ದಾರೆ. ನವೀನ್ ರಾಜು ನಾಯುಡು ಎಂಬ ಬಾಲಕ ಗಂಗಾವತಿಯಲ್ಲಿ ಈ ವರ್ಷ ಎಸ್‌ಎಲ್‌ಸಿ ಪರಿಕ್ಷೆ ಬರೆದಿದ್ದಾನೆ. ನವೀನ್ ಸದಾ ಕ್ರಿಯಾಶೀಲ ಹುಡುಗನಾಗಿದ್ದ, ಆದರೆ ಮೇ ೨೧ರ ಹುಣ್ಣಿಮೆಯ ಬೌದ್ಧ ಪೌರ್ಣಿಮೆ ಬಳಿಕ ಇದ್ದಕ್ಕಿದ್ದಂತೆ ಊಟ, ನಿದ್ದೆ ಎಲ್ಲವನ್ನು ತ್ಯಜಿಸಿದ್ದಾನೆ. ಜನ ಸಾಮಾನ್ಯರಿಗೆ ಸಾಧ್ಯವಾಗದಂತೆ ದೇಹದ ಅಂಗಾಗಳನ್ನು ಹಿದಕ್ಕೆ ಮುಂದಕ್ಕೆ, ವೃತ್ತಾಕಾರವಾಗಿ ತಿರುಗಿಸುತ್ತಿದ್ದನು, ಕೆಲ ಕ್ಷಣಗಳ ಬಳಿಕ ಮತ್ತೆ ಸಹಜ ಸ್ಥಿತಿಗೆ ಮರುಳುತ್ತಿದ್ದವು, ಈ ಬಗ್ಗೆ ವೈದ್ಯರ ಬಳಿ ತೋರಿಸಿದರೂ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದರು. ದಾವಣಗೇರಿಯ ಮಾಂತ್ರಿಕ ವ್ಯಕ್ತಿಯೊಬ್ಬರ ಬಳಿ ಕರೆದೊಯ್ದಾಗ ಬಾಲಕನಿಗೆ ಗಾಳಿ ಅಂದ್ರೆ ಆತ್ಮ ಸೋಕಿದ್ದಾಗಿ ತಿಳಿಸಿದ್ದಾರೆ. ಆತ್ಮ ಪ್ರವೇಶಿಸಿದಾಗ ಬಾಲಕ ಚಿರಾಡುತ್ತಿದ್ದನು. ನಾನು ಮರೇಮ್ಮ ಐದು ವರ್ಷದ ಹಿಂದೆ ಆತ್ಮಹತ್ಯೆ ಮಾಡಿಕೊಂಡಿನಿ. ನಮ್ಮ ಮಕ್ಕಳ ಚೆನ್ನಾಗಿ ನೋಡಿಕೊಳ್ಳಿರಿ, ನಿಮ್ಮ ಬಾಲಕನನ್ನು ಕರೆದುಕೊಂಡು ಹೋಗುತ್ತೆನೆ ಅಂತಾ ಚೀರುತ್ತಿದ್ದನು. ಈ ಮಾತುಗಳನ್ನು ಕೇಳಿ ಸ್ವತಃ ಕುಟುಂಬ ಸದಸ್ಯರು ದಂಗಾಗಿ ಹೋಗಿದ್ದಾರೆ. ದೆವ್ವದ ಕಾಟದಿಂದ ನವೀನ್ ಬುದುವಾರ ಮೃತಪಟ್ಟಿದ್ದಾನೆ ಅಂತಾ ಕುಟುಂಬದವರು ಹೇಳುತ್ತಿದ್ದಾರೆ. watch this video

ವಿದ್ಯಾನಗರದಲ್ಲಿ ಕಳೆದ ಐದು ವರ್ಷದ ಹಿಂದೆ ಮರೇಮ್ಮ ಎನ್ನುವ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಳು, ಮರೇಮ್ಮ ಎನ್ನುವ ಮಹಿಳೆ ನವೀನ್ ಎನ್ನುವರ ಹೊಲದಲ್ಲಿ ಕೆಲಸ ಮಾಡುವುದಕ್ಕು ಬರುತ್ತಿದ್ದರು. ಆದ್ರೆ ನವೀನ್ ಅವರಿಗೆ ಮರೇಮ್ಮ ಯಾರು ಅಂತಾ ಗೋತ್ತಿಲ್ಲ, ಆದ್ರೂ ಕಳೆದ ಹುಣ್ಣಿಮೆಯಿಂದ ನವೀನ್ ದೇಹದಲ್ಲಿ ಬರುತ್ತಿದ್ದಳು. ಈ ಬಾಲಕನನ್ನು ಜನ್ರು ನೋಡಿ ಆತಂಕಗೊಂಡಿದ್ದರು.. ಅಷ್ಟೇಯಲ್ಲ ಅನೇಕ ಜನ್ರು ಕೂಡ ಈ ಕರಿ ದೆವ್ವವನ್ನು ರಾತ್ರಿ ವೇಳೆ ನೋಡಿದ್ದವೆ ಅನ್ನುತ್ತಿದ್ದಾರೆ, ಇನ್ನೂ ಕೆಲವರು ಬೆಳಗ್ಗೆ ಮಲಗಿದ್ದಗ್ಗ ಬಂದು ಕುತ್ತಿಗಿ ಹಿಸುಕುತ್ತಿದೆ ಎನ್ನುತ್ತಿದ್ದಾರೆ. ಇದರಿಂದ ಜನ್ರು ಭಯಭೀತಗೊಂಡಿದ್ದಾರೆ. ರಾತ್ರಿ ಯಾದ್ರೆ ಸಾಕು ಏನು ಆಗುತ್ತೆ ಎನ್ನುವ ಭಯದಲ್ಲಿ ಜನ್ರು ಬದುಕುತ್ತಿದ್ದವೆ ಎನ್ನುತ್ತಿದ್ದಾರೆ. ಇಂದು ಈ ಬಾಲಕ ಮೃತಪಟ್ಟಿದ್ದು ಜನ್ರು ಭಯದಲ್ಲಿ ಬದುಕುತ್ತಿದ್ದಾರೆ. ಕೂಡಲೇ ದೆವ್ವಕಾಟದಿಂದ ಮುಕ್ತಿಗೊಳಿಸಿ ಎಂದು ಜನ್ರು ಪರಿಪರಿ ಬೇಡಿಕೊಳ್ಳುತ್ತಿದ್ದಾರೆ. ದೆವ್ವದಿಂದ ಬಾಲಕ ಮೃತಪಟ್ಟಿದ್ದಾನೆಯೇ ಅಥವಾ ಯಾವುದೋ ಖಾಯಿಲೆಯಿಂದ ಮೃತಪಟ್ಟಿದ್ದಾನೆಯೋ ಗೋತ್ತಿಲ್ಲ, ಆದ್ರೆ ಜನ್ರು ಮಾತ್ರ ದೆವ್ವದ ಕಾಟದಿಂದ ಮೃತಪಟ್ಟಿದ್ದಾನೆ ಎಂದು ನಂಬಿದ್ದಾರೆ. ಜನ್ರು ಈ ಭಯದಿಂದ ಹೊರಬರಬೇಕಿದೆ.

Leave a Reply