ಗಂಗಾವತಿಯಲ್ಲಿ ಎಸ್.ಎಸ್.ಎಫ್. ಜಿಲ್ಲಾ ಮಟ್ಟದ ಮಾನವತಾ ಮತ್ತು ಶರೀಅತ್ ಕಾನ್ಫರೆನ್ಸ್

ssf-news
ಕೊಪ್ಪಳ:ನ-೨, ಸುನ್ನಿ ಸ್ಟೂಡೆಂಟ್ ಫೆಡರೇಷನ್ (ಎಸ್.ಎಸ್.ಎಫ್) ವತಿಯಿಂದ ಕೊಪ್ಪಳ ಜಿಲ್ಲಾ ಮಟ್ಟದ ಮಾನವತಾ ಹಾಗೂ ಶರೀಅತ್ ಕಾನ್ಫರೆನ್ಸ್ ಗಂಗಾವತಿಯ ಕರ್ನೂಲ್ ಸಾಹೇಬ್ ದರ್ಗಾದ ಮೈದಾನದಲ್ಲಿ ನವೆಂಬರ್-೪ ರಂದು ಶುಕ್ರವಾರ ಸಂಜೆ ೭ ಗಂಟೆಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಕಾವಳಕಟ್ಟೆಯ ಅಲ್ ಖಾದಿಸ ಕಾಲೇಜ್ ಆಫ್ ಇಸ್ಲಾಮಿಕ್ ಸೈನ್ಸ್‌ನ ಪ್ರಾಚಾರ್ಯ ಹಜರತ್ ಹಾಫೀಝ್ ಸುಫ್ಯಾನ್ ಸಖಾಫಿ ಮೂಡಬಿದ್ರೆ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ ಕಾನ್ಫರೆನ್ಸ್‌ನಲ್ಲಿ ಇಸ್ಲಾಮಿ ಶರೀಅತ್‌ಗೆ ವಿರುದ್ಧವಾಗಿರುವ ಏಕರೂಪ ನೀತಿ ಸಂಹಿತೆ ಈ ದೇಶಕ್ಕೆ ಅಗತ್ಯವಿದೆಯೇ? ತ್ರಿವಳಿ ತ್ವಲಾಖ್ ಹೆಣ್ಣಿಗೆ ವರವೇ? ಶಾಪವೇ? ಇಸ್ಲಾಮಿನಲ್ಲಿ ಬಹು ಪತ್ನಿತ್ವ ನೈಜತೆ ಏನು? ಎಂಬ ಬಗ್ಗೆ ಸಮಗ್ರ ಪ್ರವಚನ ನೀಡಲಿರುವ ಕರ್ನಾಟಕದ ಪ್ರಖ್ಯಾತ ಸುನ್ನಿ ಉಲಮಾ ವಿದ್ವಾಂಸರಾದ ಅಖಿಲ ಭಾರತ ಸುನ್ನಿ ಜಂಇಯ್ಯತುಲ್ ಮುಅಲ್ಲಿಮೀನ್‌ದ ಪ್ರಧಾನ ಕಾರ್ಯದರ್ಶಿ ಹಜರ್ ಮೌಲಾನಾ ಡಾ|| ಫಾಝಿಲ್ ರಝ್ವಿ, ಕರ್ನಾಟಕ ವಕ್ಫ್ ಬೋರ್ಡ ಸದಸ್ಯರು ಹಾಗೂ ಎಸ್.ಎಸ್.ಎಫ್. ಕರ್ನಾಟಕ ರಾಜ್ಯ ಅಧ್ಯಕ್ಷ ಹಜರತ್ ಮೌಲಾನಾ ಎನ್.ಕೆ.ಎಂ. ಶಾಫಿ ಸಅದಿ ಬೆಂಗಳೂರು, ಅಲ್ ಖಾದಿಸ್ ಕಾಲೇಜ್ ಆಫ್ ಇಸ್ಲಾಮಿಕ್ ಸೈನ್ಸ್ ಕಾವಳಕಟ್ಟಿಯ ಪ್ರಾಚಾರ್ಯ ಹಜರತ್ ಹಾಫೀಝ್ ಸುಫ್ಯಾನ್ ಸಖಾಫಿ ಮೂಡಬಿದ್ರೆ ಮುಂತಾದವರು ಭಾಗವಹಿಸಲಿದ್ದಾರೆ.

ಉದ್ಘಾಟನೆಯನ್ನು ಮಾಜಿ ಸಚಿವ, ಹಾಲಿ ಶಾಸಕ ಇಕ್ಬಾಲ್ ಅನ್ಸಾರಿ ಅವರು ನೆರವೇರಿಸುವರು ಎಂದು ಹೇಳಿದರು. ಗೋಷ್ಠಿಯಲ್ಲಿ ಸುನ್ನಿ ಸ್ಟೂಡೆಂಟ್ ಫೆಡರೇಷನ್ (ಎಸ್.ಎಸ್.ಎಫ್)ನ ಮುಖಂಡರಾದ ನೂರುದ್ದೀನ್ ರಝ್ವಿ ಗುತ್ತಿ, ಸೈಯ್ಯದ್ ಯಾಸೀನ್, ಶೇಖ ಖಾಜಾ, ಮಹ್ಮದ್ ಅಬುಲ್ ಹಸನ್ ಖಾಜಿ, ಹಾಫೀಝ್ ಮಹ್ಮದ್ ಜಮಾಲ್ ಅಹ್ಮದ್, ಮಹ್ಮದ್ ಗೌಸ್ ನೀಲಿ ಮುಂತಾದವರು ಉಪಸ್ಥಿತರಿದ್ದರು.

 

Leave a Reply