ಖತ್ನಾ ಹೇಗೆ ಮಾಡ್ತಾರೆ ಗೊತ್ತಾ ? katna sunti islamic tradition

ಖತ್ನಾ ಹೇಗೆ ಮಾಡ್ತಾರೆ ಗೊತ್ತಾ ?  please watch this video

  • Dont try this
  • ಮುಸ್ಲಿಂ ಬಂಧುಗಳಲ್ಲಿ ಖತ್ನಾ ( ಸುಂತಿ) ಎನ್ನುವ ಪ್ರಕ್ರಿಯೆಗೆ ಧಾರ್ಮಿಕವಾಗಿ ಬಹಳಷ್ಟು ಮಹತ್ವವಿದೆ. ಪ್ರತಿಯೊಬ್ಬ ಮುಸ್ಲಿಂನು ಖತ್ನಾ ಮಾಡಿಸಿಕೊಳ್ಳುವುದು ಖಡ್ಡಾಯವಾಗಿದೆ. ಇತ್ತೀಚಿನ ದಿನಗಳಲ್ಲಿ ಖತ್ನಾ ಮಾಡಿಸುವುದೂ ಸಹ ದೊಡ್ಡ ಖರ್ಚಿನ ಬಾಬತ್ತೆ. ಬಡವರು ಈ ಕಾರಣಕ್ಕಾಗಿಯೇ ಮುಂದೂಡುತ್ತಾ ಬರುತ್ತಾರೆ. ಇದನ್ನು ಮನಗಂಡೆ ಕೊಪ್ಪಳದ ಹೊಸಳ್ಳಿ ಸಹೋದರರು ಎಂದೇ ಖ್ಯಾತರಾಗಿರುವ ಪೀರಾಹುಸೇನ್ ಮತ್ತು ಡಾ.ಹಸನ್ ಅಲಿ ಯವರು ತಮ್ಮ ತಂದೆ  ರಾಜಾ ಹುಸೇನ ಸಾಹೇಬ್ ಸ್ಮರಣಾರ್ಥ ನಿರಂತರವಾಗಿ ಪ್ರತಿವರ್ಷ ಇಂತಹ ಉಚಿತ ಖತ್ನಾ ಶಿಬಿರಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದಾರೆ. ಕಳೆದ 22 ವರ್ಷಗಳಲ್ಲಿ ಅಂದಾಜು ಒಂದು ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಖತ್ಯಾ ಮಾಡಿದ್ಧಾರೆ. ತಮ್ಮ ಸ್ವಂತ ಖರ್ಚಿನಲ್ಲಿ.  ಇಂತಹ ಖತ್ನಾ ಮಾಡಿಸುವ ಪ್ರಕ್ರಿಯೆ ಬೇಸಿಗೆಯ ಈ ರಜಾದಿನಗಳಲ್ಲಿ ಹೆಚ್ಚು ಹೆಚ್ಚಾಗಿ ನಡೆಯುತ್ತವೆ. ಖತ್ನಾ ಎನ್ನುವುದು ವೈಜ್ಞಾನಿಕವಾಗಿಯೂ ಆರೋಗ್ಯಕ್ಕೆ ಒಳ್ಳೆಯದು ಎಂದು ಸಾಭೀತಾಗಿರುವುದರಿಂದ ಸಣ್ಣ ವಯಸ್ಸಿನಲ್ಲಿಯೇ ಗಂಡು ಮಕ್ಕಳಿಗೆ ಖತ್ನಾ ಮಾಡಲಾಗುತ್ತದೆ. ಖತ್ನಾ ಎಂದರೆ ಜನನಾಂಗದ ಮುಂದೊಗಲನ್ನು ತೆಗೆಯುವುದು ಇದರಿಂದ ಲೈಂಗಿಕ ರೋಗಗಳು ಬರುವುದಿಲ್ಲ  ಅಲ್ಲದೇ ವೈವಾಹಿಕ ಜೀವನಕ್ಕೆ ಸುಗಮವಾಗುತ್ತೆ ಎನ್ನುವ ಕಾರಣಕ್ಕೆ ಇದನ್ನು ನೆರವೇರಿಸಲಾಗುತ್ತದೆ. ಹೊಸಳ್ಳಿ ಸಹೋದರರ ನಿಸ್ವಾರ್ಥ ಸೇವೆ ಜನಮೆಚ್ಚುಗೆಗೆ ಪಾತ್ರವಾಗಿದೆ. ಯಾವುದೇ ಪ್ರತಿಫಲ ಬಯಸದೇ ಇಂತಹ ಶಿಬಿರಗಳನ್ನು ಮಾಡಿ ಬಡವರಿಗೆ ನೆರವಾಗುತ್ತಿರುವ ಅವರ ಈ ಸೇವೆ ಸರಕಾರ ಗುರುತಿಸಿ ಗೌರವಿಸಲಿ ಎನ್ನುವುದು ಮುಸ್ಲಿಂ ಬಂಧುಗಳ ಒತ್ತಾಯ
  • katna sunti islamic tradition

    katna how katna will be done 

Leave a Reply