ಕ್ರೀಡೆ ಬಲ್ಲವನಿಗೆ ರೋಗವಿಲ್ಲ : ಡಾ|| ಸಜ್ಜನ

educare_school_koppal_sports

ಕೊಪ್ಪಳ, ೧೬- ಇಂದಿನ ಒತ್ತಡದ ಬದುಕಿನಲ್ಲಿ ಮನುಷ್ಯ ಆರೋಗ್ಯ ನಿರ್ಲಕ್ಷಿಸುತ್ತಿದ್ದು, ಕ್ರೀಡೆ ಬಲ್ಲವನಿಗೆ ರೋಗವಿಲ್ಲ ಪ್ರತಿಯೊಬ್ಬರು ಕ್ರೀಡೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ವೈದ್ಯ ಮಂಜುನಾಥ ಸಜ್ಜನ ಹೇಳಿದರು.
ಅವರು ನಗರದ ಕಿನ್ನಾಳ ರಸ್ತೆಯಲ್ಲಿರುವ ಕಾಯಕ ಎಜ್ಯುಕೇಷನಲ್ ಟ್ರಸ್ಟ ನ ಎಜುಕೇರ ಇಂಗ್ಲೀಷ ಮೀಡಿಯಂ ಸ್ಕೂಲನಲ್ಲಿ ಶಾಲಾ ಮಕ್ಕಳಿಗೆ ಹಮ್ಮಿಕೊಂಡಿದ್ದ ಕ್ರೀಡಾ ಕೂಟ ಉದ್ಘಾಟಿಸಿ ಮಾತನಾಡುತ್ತಿದ್ದರು.
ಮನುಷ್ಯ ಕ್ರೀಯಾಶೀಲವಾಗಿದ್ದಾಗ ರೋಗಗಳಿಂದ ಮುಕ್ತವಾಗಿರಲೂ ಸಾಧ್ಯ ಇಂದಿನ ಒತ್ತಡದ ಬದುಕು ಪ್ರತಿಯೊಬ್ಬರನ್ನು ರೋಗದಡೆಗೆ ಒಯುತ್ತಿದೆ ಇದರಿಂದ ಮುಕ್ತಿ ಹೊಂದಲು ಕ್ರೀಡೆಯಲ್ಲಿ ತೊಡಗಿಸಿಕೊಂಡಾಗ ಕ್ರೀಯಾಶೀಲನಾಗಿ ರೋಗದಿಂದ ದೂರವಿರಲೂ ಸಾಧ್ಯವೇಂದರು.
ಕ್ರೀಡೆ ಮನುಷ್ಯನ ಅವಿಭಾಜ್ಯ ಅಂಗವಾಗಬೇಕು ಮಕ್ಕಳಿಗೆ ಬಾಲ್ಯದಿಂದಲೆ ಕೀಡೆಯಲ್ಲಿ ಅವರನ್ನು ಪ್ರೋತ್ಸಾಹಿಸಿದಾಗ ಭವಿಷ್ಯದಲ್ಲಿ ಉತ್ತಮ ಕ್ರೀಡಾಪಟು ಹಾಗೂ ಆರೋಗ್ಯವಂತ ವ್ಯಕ್ತಿಯಾಗಿ ಬೆಳೆಯಲೂ ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಸ್ಥೆ ಅಧ್ಯಕ್ಷ ಮಂಜುನಾಥ ಅಂಗಡಿ ವಹಿಸಿದ್ದರು. ಡಾ|| ಕವಿತಾ ಶ್ರೀನಿವಾಸ ಹ್ಯಾಟಿ, ಉಪಾಧ್ಯಕ್ಷ ಸಂತೋಷ ದೇಶಪಾಂಡೆ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಸಹಶಿಕ್ಷಕಿಯರಾದ ಕುಮಾರಿ ಜ್ಯೋತಿ ನಿರೂಪಿಸಿದರು. ಶ್ರೀಮತಿ ಕವಿತಾ ಅಳವಂಡಿ ಸ್ವಾಗತಿಸಿದರೆ ಶುಭಾಂಗಿ ಅವರಾಧಿ ಪ್ರಸ್ಥಾವಿಕವಾಗಿ ಮಾತನಾಡಿದರು. ಕೊನೆಯಲ್ಲಿ ಕುಮಾರಿ ರಶ್ಮಿ ವಂದಿಸಿದರು. ನಿರ್ದೇಶಕ ರಮೇಶ ತುಪ್ಪದ ನಿರ್ವಹಿಸಿದರು. ಶಾಲೆಯಲ್ಲಿ ೩ ದಿನಗಳ ಕಾಲ ವಿವಿಧ ಕ್ರೀಡೆ ಸ್ಪರ್ದೆಗಳು ಜರುಗಲಿವೆ.

Please follow and like us:

Leave a Reply