ಕೋರೆಗಾಂವ್ ದಿ ಗ್ರೇಟ್ ಫೈಟ್ – ಹಾಲೇಶ ಕಂದಾರಿ

koergav-vijayotsavaಭಾರತದ ಇತಿಹಾಸದಲ್ಲಿ ನಡೆದಿರುವ ವಿವಿಧ ಯುದ್ಧಗಳಲ್ಲಿ ಕೇವಲ ರಾಜರಾಜರುಗಳ ನಡುವೆ, ಬ್ರಿಟೀಷರು ಫ್ರೆಂಚರ ವಿರುದ್ಧ, ಫ್ರೆಂಚರು ಡಚ್ಚರ ವಿರುದ್ಧ, ಭಾರತೀಯ ವಿವಿಧ ಸಂಸ್ಥಾನಗಳ ರಾಜರುಗಳು ಬ್ರಿಟೀಷರ ವಿರುದ್ಧ ಹೀಗೆ ಸಾಮ್ರಾಜ್ಯ ಶಾಹಿಗಳು ನಡೆಸಿದ ಯುದ್ಧಗಳ ಬಗ್ಗೆ ಅಷ್ಟೆ ಚರಿತ್ರೆ ದಾಖಲಿಸಲಾಯಿತು. ಆದರೆ ಶೋಷಿತರು ಮೇಲ್ಜಾತಿಯ ಶೋಷಕರ ವಿರುದ್ಧ ಅವರ ಶೋಷಣೆಯ ನಡವಳಿಕೆಯ ವಿರುದ್ಧ ಯುದ್ಧ ಘೋಷಿಸಿದ ಯುದ್ಧ ನಡೆಸಿ ಗೆಲುವು ದಾಖಲಿಸಿದ ಬಗ್ಗೆ ಎಲ್ಲಿಯೂ ದಾಖಲಾಗಿಲ್ಲ. ಶೋಷಿತರು ಶೋಷಕರ ಶಕ್ತಿಗಳ ವಿರುದ್ಧ ಸಾರಿದ ಯುದ್ಧ ಬಗ್ಗೆ ಕೋರೆಗಾಂವ್ ದಿ ಗ್ರೇಟ್ ಫೈಟ್ ಬಹಳ ಮಹತ್ವದ್ದು. ಭೀಮಾ ತೀರದಲ್ಲಿ ನಡೆದಿದ್ದರಿಂದ ಅದು ಇತಿಹಾಸದಲ್ಲಿ ಭೀಮಾ ಕೋರೆಗಾಂವ್ ಯುದ್ಧ ಮತ್ತು ಕೋರೆಗಾಂವ್ ದಿ ಗ್ರೇಟ್ ಫೈಟ್ ಎಂದು ದಾಖಲಾಗಿದೆ ಎಂದು ಯುವ ಮುಖಂಡ ಹಾಲೇಶ ಕಂದಾರಿ ಮಾತನಾಡಿದರು. ಬಸವೇಶ್ವರ ನಗರದ ಡಾ|| ಬಾಬು ಜಗಜೀವನರಾಮ್ ವೃತ್ತದಲ್ಲಿ ೧೯೯ನೇಯ ಕೋರೆಗಾಂವ್ ವಿಜಯೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪೇಶ್ವೆಗಳ ಕಾಲದಲ್ಲಿ ಅಸ್ಪೃಶ್ಯರ ಸ್ಥಿತಿ ಅತ್ಯಂತ ಸೋಚನೀಯವಾಗಿತ್ತು. ಭೀಮಾ ನದಿಯ ತೀರದಲ್ಲಿ ಆ ಕೋರೆಗಾಂವ್ ರಣರಂಗದಲ್ಲಿ ಬಾಂಬೆ ರೆಜಿಮೆಂಟಿನ ಕೇವಲ ೫೦೦ ಜನ ದಲಿತ ಕಾಲ್ದಳದ ಸೈನಿಕರು ಮತ್ತು ಪೂನಾದ ೨೫೦ ಅಶ್ವದಳದವರ ನೆರವಿನೊಂದಿಗೆ ೨೦,೦೦೦ ಅಶ್ವದಳವಿದ್ದ, ೮೦೦೦ ದಷ್ಟು ಕಾಲ್ದಳವಿದ್ದ, ಪೇಶ್ವೆಯ ಬೃಹತ್ ಸೇನೆಯ ವಿರುದ್ಧ ೧೮೧೮ ಜನೇವರಿ ೦೧ ರಂದು ಬೆಳಿಗ್ಗೆ ೯-೦೦ ರಿಂದ ರಾತ್ರಿ ೯-೦೦ ರವರೆಗೆ ಸತತ ೧೨ ಗಂಟೆಗಳ ಯಾವುದೇ ವಿಶ್ರಾಂತಿ, ಆಯಾಸವಿಲ್ಲದೆ ಆಹಾರ ನೀರಿನ ಪರಿವಿಲ್ಲದೆ ಕೋರೆಗಾಂವ್ ಯುದ್ಧವನ್ನು ಜಯಿಸುತ್ತಾರೆ ಎಂದು ಹೇಳಿದರು.

ಪತ್ರಕರ್ತರಾದ ಎನ್.ಎಮ್.ದೊಡ್ಡಮನಿ ಮಾತನಾಡಿ, ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು ಎಂದು ಹೇಳಿದ ಅಂಬೇಡ್ಕರರಿಗೆ ತನ್ನ ಜನರ ಇಂತಹ ಅದ್ಬುತ ಐತಿಹಾಸಿಕ ಜಯದ ಬಗ್ಗೆ ಬಹಳ ಹೆಮ್ಮೆ ಇತ್ತು. ಆ ಕಾರಣಕ್ಕಾಗಿ ಕೋರೆಗಾಂವ್‌ದಲ್ಲಿ ವೀರಮರಣವನ್ನಪ್ಪಿದ ಸೈನಿಕ ಸ್ಮಾರಕಕ್ಕೆ ಪ್ರತಿ ವರ್ಷ ಕುಟುಂಬ ಸಮೇತ ಬೇಟಿ ನೀಡಿ ನಮನ ಸಲ್ಲಿಸುತ್ತಿದ್ದರು. ಕೋರೆಗಾಂವ್‌ನಲ್ಲಿ ದಲಿತ ಸೈನಿಕರು ಹೋರಾಡಿದ್ದು ಒಂದು ಸಾಮ್ರಾಜ್ಯದ ವಿರುದ್ಧವಲ್ಲ, ವ್ಯವಸ್ಥೆಯ ವಿರುದ್ಧ, ಯಾವ ವ್ಯವಸ್ಥೆ ತಮ್ಮನ್ನು ಕೀಳಾವಾಗಿ ಕಾಣುತ್ತಿತ್ತೋ, ಪ್ರಾಣಿಗಳಿಗಿಂತ ಹೀನಾಯವಾಗಿ ನಡೆಸಿಕೊಳ್ಳುತ್ತಿತ್ತೋ ಅಂತಹ ದೌರ್ಜನ್ಯಕೋರ ಸಂಸ್ಥೆಯ ವಿರುದ್ಧ ಎಂಬುದು ಬಾಬಾ ಸಾಹೇಬರಿಗೆ ಗೊತ್ತಿತ್ತು. ಅದನ್ನು ಸಮಸ್ತ ಭಾರತೀಯರಿಗೆ ದಾಖಲಿಸುವ ಮೂಲಕ ತಿಳಿಸಿದರು.

ಮುಂದುವರೆದು ನಗರಸಭೆ ಸದಸ್ಯರಾದ ರಮೇಶ ಗಿಣಿಗೇರಿ ಮಾತನಾಡಿದರು. ಈ ಸಂದರ್ಭದಲ್ಲಿ ಮುಖಂಡರುಗಳಾದ ಚನ್ನಬಸಪ್ಪ ಹೊಳೆಯಪ್ಪನವರ, ಗವಿಸಿದ್ದಪ್ಪ ಗಿಣಿಗೇರಿ, ಪ್ರಭುರಾಜ ಕಿಡದಾಳ, ಶಿವಪ್ಪ ಗಿಣಿಗೇರಿ, ಪ್ರಭು ಬೋಚನಹಳ್ಳಿ, ಪರಶುರಾಮ ಕಿಡದಾಳ, ಗಾಳೆಪ್ಪ ಬಿಸರಳ್ಳಿ, ಈಶಪ್ಪ ದೊಡ್ಡಮನಿ, ಲಕ್ಷ್ಮಣ ಬಂಗಾರಿ, ಮಲ್ಲು ಪೂಜಾರ, ದೇವಪ್ಪ ಕೊಪ್ಪಳ, ಗಣೇಶ ಹೊರತಟ್ನಾಳ, ವಿನಾಯಕ.ಎಮ್.ಹಾದಿಮನಿ, ಚಂದುಸ್ವಾಮಿ ಬಹದ್ದೂರಬಂಡಿ, ಮಹಾಂತೇಶ, ಉಪೇಂದ್ರ ಹೊಸಪೇಟ್, ಇನ್ನೂ ಮುಂತಾದವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕರಾದ ಮಂಜುನಾಥ ಆರೆಂಟ್ನೂರ ನಿರೂಪಿಸಿ, ವಂದಿಸಿದರು.

Leave a Reply