ಕೊಳೆತ ಶ್ವಾಸಕೋಶದ ಅಪರೂಪದ ಶಸ್ತ್ರಚಿಕಿತ್ಸೆ : ಜಿಲ್ಲಾಸ್ಪತ್ರೆಯ ವೈದ್ಯರ ಪಾಜಿಟಿವ್ ಸುದ್ದಿ

ಯಾವಾಗಲೂ ಸರಕಾರಿ ಆಸ್ಪತ್ರೆಯ ವೈದ್ಯರು ಮತ್ತು ಆಸ್ಪತ್ರೆಯ ಬಗ್ಗೆ ನೆಗೆಟಿವ್ ಸುದ್ದಿಗಳನ್ನೇ ನೋಡುತ್ತಾ ಬಂದಿದ್ದೀರಿ  ಆದರೆ ಇಲ್ಲೊಂದು ಪಾಜಿಟಿವ್ ಸುದ್ದಿ ಇದೆ.  ಇದೊಂದು ಅಪರೂಪದಲ್ಲಿಯೇ ಅಪರೂಪದ ಸುದ್ದಿ.  ಕೊಳೆತ ಸ್ಥಿತಿಯಲ್ಲಿದ್ದ ಶ್ವಾಸಕೋಶವನ್ನು ಅಪರೂಪದ ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆದು ಯುವಕನನ್ನು ಪ್ರಾಣಾಪಾಯದಿಂದ ಪಾರು ಮಾಡಿರುವ ಘಟನೆ  ಕೊಪ್ಪಳದಲ್ಲಿ ನಡೆದಿದೆ.  ಜಯದೇವ, ಕಿದ್ವಾಯಿಯಂತಹ ವೈದ್ಯಕೀಯ ಸಂಸ್ಥೇಗಳಲ್ಲಿ, ಕೇಂದ್ರಗಳಲ್ಲಿ ನಡೆಯುತ್ತಿದ್ದ ಜಟಿಲ ಶಸ್ತ್ರಚಿಕಿತ್ಸೆ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ನಡೆದಿರುವುದು ಅಪರೂಪ ಎgovt-hospital-koppalನಿಸಿದೆ . ಯಾವಾಗಲೂ ಕೆಟ್ಟ ಕಾರಣಗಳಿಂದಾಗಿಯೇ ಸುದ್ದಿಯಾಗುತ್ತಿದ್ದ ಈ ಆಸ್ಪತ್ರೆ ಮತ್ತು ವೈದ್ಯರು  ಒಳ್ಳೆಯ ಸುದ್ದಿಗೂ ಕಾರಣವಾಗಿದ್ದಾರೆ. ಕೊಪ್ಪಳ ತಾಲೂಕಿನ ಮಾದಿನೂರು ಗ್ರಾಮದ ಶರಣಪ್ಪ ಭೃಂಗಿ ಕಳೆದ ೨೫ ವರ್ಷಗಳಿಂದ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ. ಚಳಿಗಾಲ ಸಂದರ್ಭದಲ್ಲಿ ಕೆಮ್ಮು ವಿಪರೀತವಾಗಿ ತೊಂದರೆ ಅನುಭವಿಸುತ್ತಿದ್ದ. ಗದಗ ಸೇರಿ ಹಲವೆಡೆ ಔಷಧಿ ಪಡೆದಾಗ ತಾತ್ಕಾಲಿಕ ಕೆಮ್ಮು ಕಡಿಮೆಯಾಗುತ್ತಿತ್ತು. ಶರಣಪ್ಪ ಕೂಡ ಸುಮ್ಮನಾಗಿ ಬಿಡುತ್ತಿದ್ದ. ಕಳೆದ ತಿಂಗಳು ಶರಣಪ್ಪನಿಗೆ ಕೆಮ್ಮು ವಿಪರೀತವಾಗಿದೆ. ಜಿಲ್ಲಾಸ್ಪತ್ರೆ ವೈದ್ಯರು ಸ್ಕಾನ್ ಮಾಡಿಸಲು ಹೇಳಿದ್ದಾರೆ. ಸ್ಕಾನಿಂಗ್ ವರದಿಯಲ್ಲಿ ಶರಣಪ್ಪನ ಬಲ ಶ್ವಾಸಕೋಶ ಶೇ.೮೦ರಷ್ಟು ಹಾನಿಗೊಳಗಾಗಿದ್ದು ಪತ್ತೆಯಾಗಿದೆ.  ನಾಳಗಳೆಲ್ಲ ಕೀವು ತುಂಬಿಕೊಂಡಿದ್ದು, ಎಡ ಶ್ವಾಸಕೋಶಕ್ಕೂ ಸೋಂಕು ತಗುಲಿ ಪ್ರಾಣಾಪಾಯದ ಲಕ್ಷಣಗಳು ಗೋಚರಿಸಿವೆ. ಎಡ ಶ್ವಾಸಕೋಶ ಉಳಿಸಬೇಕಾದರೆ ಬಲಭಾಗದ ಶ್ವಾಸಕೋಶ ತೆಗೆಯುವುದು ಅನಿವಾರ್ಯವಾಗಿತ್ತು. ಬೆಳೆದು ನಿಂತ ಪುತ್ರನಿಗೆ ರೋಗದಿಂದ ಮುಕ್ತಿ ಕೊಡುಸುವಂತೆ ಕುಟುಂಬ ವರ್ಗವೂ ಕೇಳಿಕೊಂಡಿತು. ಈ ಅಪರೂಪದ ಶಸ್ತ್ರಚಿಕಿತ್ಸೆಗೆ ಜಿಲ್ಲಾಸ್ಪತ್ರೆಯಲ್ಲಿ ಅತ್ಯಾಧುನಿಕ ಉಪಕರಣಗಳೂ ಇರಲಿಲ್ಲ. ಬೇರೆ ಕಡೆಯಿಂದ ಉಪಕರಣ ತರಿಸಿ ಏಪ್ರಿಲ್ ೫ರಂದು ಜಿಲ್ಲಾಸ್ಪತ್ರೆಯಲ್ಲಿ ಕಿಮ್ಸ್ ನಿರ್ದೇಶಕ ಡಾ.ಶಂಕರ ಮಲಪುರೆ ನೇತೃತ್ವದ ತಂಡ ಜಟಿಲ ಶಸ್ತ್ರಚಿಕಿತ್ಸೆ ನಡೆಸಿದೆ. ಡಾ.ವೇಣುಗೋಪಾಲ್, ಡಾ.ಶಶಿಕುಮಾರ್, ಡಾ.ಸಯ್ಯದ್ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಸುದೀರ್ಘ ಅವಧಿಯ ಬಳಿಕ ಬಲಭಾಗದ ಶ್ವಾಸಕೋಶವನ್ನೇ ತೆಗೆಯಲಾಗಿದೆ. ಬಳಿಕ ಶರಣಪ್ಪನಿಗೆ ೧ ತಿಂಗಳ ಕಾಲ ಚಿಕಿತ್ಸೆ ನೀಡಲಾಗಿದೆ. ವಿಶ್ರಾಂತಿ ಬಳಿಕ ಶರಣಪ್ಪ ಗುಣಮುಖನಾಗಿದ್ದು, ಎಂದಿನಂತೆ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾನೆ. ಕಿಮ್ಸ್ ನಿರ್ದೇಶಕರ ಅಪರೂಪದ ಶಸ್ತ್ರಚಿಕಿತ್ಸೆಯಿಂದ ರೈತಾಪಿ ಕುಟುಂಬದ ಯುವಕನ ಬದುಕಿನಲ್ಲಿ ಹೊಸ ಆಶಾಕಿರಣ ಮೂಡಿದೆ.

Please follow and like us:
error