ಕೊಪ್ಪಳ : ವಸತಿ ಯೋಜನೆಯ ವಂತಿಕೆ ಹಣ ಭರಿಸಲು ಸೂಚನೆ

ಕೊಪ್ಪಳ ನಗರಸಭೆಯಿಂದ ೨೦೧೨-೧೩ ನೇ ಸಾಲಿನಲ್ಲಿ ಗುಂಪು ಮನೆ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳು ವಂತಿಕೆ ಹಣ ಪಾವತಿಸುವಂತೆ ಸೂಚನೆ ನೀಡಲಾಗಿದೆ.
ವಾಜಪೇಯಿ ನಗರ ವಸತಿ ಯೋಜನೆ ಅಡಿ ನಗರ ನಿವೇಶನ/ವಸತಿ ರಹಿತರಿಗೆ ಮನೆಗಳನ್ನು ನಿರ್ಮಾಣ ಮಾಡಲು ೨೦೧೨-೧೩ ನೇ ಸಾಲಿನಲ್ಲಿ ೨ ಸಾವಿರ ಗುಂಪು ಮನೆಗಳನ್ನು ರಚನೆ ಮಾಡಲಾಗಿದ್ದು, ರಾಜೀವ ಗಾಂಧಿ ಗ್ರಾಮೀಣ ವಸತಿ ನಿಗಮದಿಂದ ೨೦೦೦ ಅರ್ಹ ಫಲಾನುಭವಿಗಳನ್ನು ಈಗಾಗಲೇ ಆಯ್ಕೆ ಮಾಡಲಾಗಿರುತ್ತದೆ. ಅದರಲ್ಲಿ ಕೆಲವು ಫಲಾನುಭವಿಗಳು ವಂತಿಕೆ ಹಣ ರೂ.೩೦,೦೦೦ ಕಾರ್ಯಾಲಯಕ್ಕೆ ಭರಿಸಿರುತ್ತಾರೆ. ಆದರೆ ಇನ್ನು ಸುಮಾರು ೧೦೦೦ ಫಲಾನಿಭವಿಗಳು ವಂತಿಕೆ ಹಣ ಭರಿಸಿರುವುದಿಲ್ಲ ಈ ಕುರಿತು ಈ ಹಿಂದೆ ಪ್ರಕಟಣೆ ನೀಡಿದ್ದರೂ ಸಹ ಬಾಕಿ ಉಳಿದ ಫಲಾನುಭವಿಗಳು ವಂತಿಕೆ ಹಣ ಪಾವತಿ ಮಾಡಿರುವುದಿಲ್ಲ. ಇದರಿಂದ ಮುಂದಿನ ಪ್ರಕ್ರಿಯೆ ನಡೆಸಲು ವಿಳಂಬವಾಗಿದೆ. ಆದ್ದರಿಂದ ವಂತಿಕೆ ಹಣ ಪಾವತಿ ಮಾಡಲು ಅಕ್ಟೋಬರ್-೧೭ ಕೊನೆಯ ದಿನಾಂಕವಾಗಿ ನಿಗದಿಪಡಿಸಲಾಗಿದೆ. ನಿಗದಿತ ಅವಧಿಯೊಳಗಾಗಿ ವಂತಿಕೆ ಹಣ ಪಾವತಿಸದೇ ಇರುವ ಅಭ್ಯರ್ಥಿಗಳನ್ನು ಆಯ್ಕೆಪಟ್ಟಿಯಿಂದ ಕೈಬಿಟ್ಟು ಬೇರೆ ಫಲಾನಿಭವಿಗಳನ್ನು ಆಯ್ಕೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅವಧಿ ಮೀರಿ ವಂತಿಕೆ ಹಣ ಭರಿಸಲು ಅವಕಾಶ ಇರುವುದಿಲ್ಲ. ನಿಗದಿತ ಅವಧಿಯೊಳಗಾಗಿ ವಂತಿಕೆ ಹಣ ಪಾವತಿಸುವಂತೆ ಕೊಪ್ಪಳ ನಗರಸಭೆ ಪೌರಾಯುಕ್ತರು  ತಿಳಿಸಿದ್ದಾರೆ.

Please follow and like us:
error