ಕೊಪ್ಪಳ ಮಹಿಳೆಯ ಸಜೀವ ದಹನ

murder_koppal

ಮನೆಯೊಳಗೆ  ಕೂಡಿಹಾಕಿ ಬೆಂಕಿ ಹಚ್ಚಿ ಮಹಿಳೆ ಕೊಲೆ ಮಾಡಿದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಜಾಹಗೀರ್ ಗುಡದೂರ ಗ್ರಾಮದಲ್ಲಿ ಘಟನೆ ನಡೆದಿದ್ದು ಕಸ್ತೂರೆವ್ವ (35) ಸಜೀವ ದಹನವಾದ ಮಹಿಳೆ. ಗಂಡನೇ ಬೆಂಕಿ ಹಚ್ಚಿದ್ಧಾನೆ ಎಂದು ಆರೋಪಿಸಲಾಗಿದ್ದು ಬೆಂಕಿ ಹಚ್ಚಿದ ಗಂಡ ಚೆನ್ನವೀರಯ್ಯ ಹಿರೇಮಠ ಕುಟುಂಬಸ್ಥರು ಪರಾರಿಯಾಗಿದ್ಧಾರೆ.

 

ವರದಕ್ಷಿಣೆ ಸಂಬಂಧ ನಿರಂತರ ಕಿರುಕುಳವಿತ್ತು ಎನ್ನಲಾಗಿದ್ದು. ಘಟನಾ ಸ್ಥಳಕ್ಕೆ ಪೊಲೀಸರ ಭೇಟಿ  ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.ಹನಮಸಾಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply