fbpx

ಕೊಪ್ಪಳ : ಪುಸ್ತಕ ಪ್ರದರ್ಶನಕ್ಕೆ ಚಾಲನೆ

libraray_book_reading ಕೊಪ್ಪಳ ಸಾಹಿತ್ಯ ಭವನದ ಬಳಿಯಿರುವ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ನವೆಂಬರ್ ೧೪ ರಿಂದ ೨೦ ರವರೆಗೆ ನಡೆಯುವ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಅಂಗವಾಗಿ ಎರ್ಪಡಿಸಿದ್ದ ಪುಸ್ತಕ ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು.
ಪುಸ್ತಕ ಪ್ರದರ್ಶನಕ್ಕೆ ಚಾಲನೆ ನೀಡಿ, ದೀಪ ಬೆಳಗಿಸಿ ಮಾತನಾಡಿದ ವೀರ ಕನ್ನಡಿಗ ಸಂಘದ ಅಧ್ಯಕ್ಷ ಶಿವಾನಂದ ಹೊದ್ಲೂರ ಅವರು, ಯುವಕರಲ್ಲಿ ಓದಿನ ಆಸಕ್ತಿ ಕಡಿಮೆಯಾಗುತ್ತಿದ್ದು . ಯುವಕರು ಹೆಚ್ಚು ಹೆಚ್ಚು ಓದಬೇಕು. ಪುಸ್ತಕ ಪ್ರೇಮಿಗಳಾಬೇಕು, ಸಾರ್ವಜನಿಕ ಗ್ರಂಥಾಲಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಗ್ರಂಥಾಲಯ ಸಹಾಯಕ ನಾಗರಾಜನಾಯಕ ಡೊಳ್ಳಿನ ಮಾತನಾಡಿ ಸಾರ್ವಜನಿಕ ಗ್ರಂಥಾಲಯಗಳು ಶ್ರೀಸಾಮಾನ್ಯನ ವಿಶ್ವವಿದ್ಯಾಲಯಗಳಿದ್ದಂತೆ ಎಲ್ಲರೂ ಗ್ರಂಥಾಲಯದ ಸದುಪಯೋಗ ಪಡೆದುಕೊಳ್ಳಬೇಕು. ಗ್ರಂಥಗಳಿರುವುದೇ ಓದುಗರಿಗಾಗಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಓದುಗರಾದ ಶ್ರೀಧರ, ವಿರುಪಣ್ಣ, ಉಮೇಶ ಮಾಲಿಪಾಟೀಲ, ಕನಕಾಚಲ ಗೊಂಡಬಾಳ ಹಾಗೂ ಗ್ರಂಥಾಲಯ ಇಲಾಖೆ ಸಿಬ್ಬಂದಿಗಳು ಮತ್ತಿತರರು ಹಾಜರಿದ್ದರು.

Please follow and like us:
error

Leave a Reply

error: Content is protected !!