ಕೊಪ್ಪಳ ನಗರಸಭೆಯಿಂದ ವಿವಿಧ ತರಬೇತಿಗೆ ಅರ್ಜಿ ಆಹ್ವಾನ.

ಕೊಪ್ಪಳ ಮೇ.೦೩  ಕೊಪ್ಪಳ ನಗರಸಭೆಯಿಂದ ಪ್ರಸಕ್ತ ಸಾಲಿಗೆ ನಲ್ಮ ಯೋಜನೆಯಡಿ ವಿವಿಧ ತರಬೇತಿಗಳಿಗಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ (ನಲ್ಮ) ಪ್ರಸಕ್ತ ಸಾಲಿಗೆ ನಗರ ಪ್ರದೇಶದ ೧೮ ವರ್ಷ ಮೇಲ್ಪಟ್ಟ, ಬಡತನ ರೇಖೆಗಿಂತ ಕೆಳಗಿರುವ (ರೂ.೨೩೧೨೪ ಕ್ಕಿಂತ ಕಡಿಮೆ ವಾರ್ಷಿಕ ಆದಾಯ) ಅಭ್ಯರ್ಥಿಗಳಿಗೆ ಕಿಯೋನಿಕ್ಸ್, ಕೈಮಗ್ಗ ಮತ್ತು ಜವಳಿ ಇಲಾಖೆ, ನೊಂದಾಯಿತ ವಾಹನ ತರಬೇತಿದಾರರಿಂದ ಹಾಗೂ ಮಾಹಿತಿ, ತಂತ್ರಜ್ಞಾನ ಮತ್ತು ಇತರೆ ಕೌಶಲ್ಯ ಅಭಿವೃದ್ಧಿಯ ಉಚಿತ ತರಬೇತಿ ನೀಡಲಾಗುವುದು. ಹಾಗೂ ಸ್ವಯಂ ಉದ್ಯೋಗ ಮಾಡಲು ಇಚ್ಚಿಸುವ ಅಭ್ಯರ್ಥಿಗಳಿಗೆ ಶೇ.೭ ರ ಬಡ್ಡಿ ಸಹಾಯ ಧನದಲ್ಲಿ ಸಾಲ ಮಂಜೂರು ಮಾಡಲಾಗುವುದು.ನಗರಸಭೆ ವತಿಯಿಂದ ಅಭ್ಯರ್ಥಿಗಳಿಗೆ ನೀಡಲು ಉದ್ದೇಶಿಸಲಾಗಿರುವ ತರಬೇತಿ ವಿವರ ಇಂತಿದೆ. ಅಡ್ವಾನ್ಸ್ಡ್ trainingಟ್ರೈನಿಂಗ್ ಇನ್ ಕಂಪ್ಯೂಟರ್ ಅಪ್ಲಿಕೇಷನ್, ಕಂಪ್ಯೂಟರ್ ಪ್ರೋಗ್ರಾಮಿಂಗ್, ಕಾಲ್ ಸೆಂಟರ್ ಟ್ರೈನಿಂಗ್, ಕಂಪ್ಯೂಟರ್ ಹಾರ್ಡ್‌ವೇರ್ ಅಂಡ್ ನೆಟ್‌ವರ್ಕಿಂಗ್, ಡಿಪ್ಲೋಮಾ ಟೀಚರ್‍ಸ್ ಟ್ರೈನಿಂಗ್ ಕೋರ್ಸ್, ಅಕೌಂಟಿಂಗ್ ಟ್ಯಾಲಿ, ಗಾರ್ಮೆಂಟ್ ಪ್ಯಾಕರ್/ಐರನರ್/ಫ್ಯೂಸಿಂಗ್ ಟೆಕ್ನಿಷಿಯನ್, ಗಾರ್ಮೆಂಟ್ ಕನ್ಸ್‌ಟ್ರಕ್ಷನ್ ಟೆಕ್ನಿಕ್, ಫ್ಯಾಷನ್ ಡಿಸೈನಿಂಗ್, ಭಾರಿ ವಾಹನ ಚಾಲನೆ, ಲಘು ಮೋಟಾರು ವಾಹನ ಚಾಲನೆ. ಪ್ರತಿ ತರಬೇತಿಗೆ ೩೦ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.ಸ್ವಯಂ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಲು ಯಾವುದೇ ವಿದ್ಯಾರ್ಹತೆ ದಾSಲೆ ಅವಶ್ಯವಿರುವುದಿಲ್ಲ. ಇತರೆ ತರಬೇತಿ ಪಡೆಯಲು ಕನಿಷ್ಟ ೧೦ನೇ ತರಗತಿ ಪಾಸಾಗಿರಬೇಕು, ಅರ್ಜಿ ದ್ವಿಪತ್ರಿಯಲ್ಲಿ ಸಲ್ಲಿಸಬೇಕು. ಚಾಲ್ತಿ ಸಾಲಿನ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಿದ್ಯಾರ್ಹತೆಯ ಬಗ್ಗೆ ದಾಖಲಾತಿ, ಉದ್ದೇಶಿಸಿರುವ ಚಟುವಟಿಕೆಯ ಬಗ್ಗೆ ಅನುಭವ ಹೊಂದಿದ್ದರೆ, ತರಬೇತಿಯ ಪ್ರಮಾಣ ಪತ್ರ, ಕನಿಷ್ಟ ೩ ವರ್ಷ ನಗರ ನಿವಾಸಿಯಾಗಿರುವ ಬಗ್ಗೆ ಪಡಿತರ ಚೀಟಿ, ಚುನಾವಣೆ ಗುರುತಿನ ಚೀಟಿ, ಅಥವಾ ಸಂಬಂಧಿಸಿದ ದಾಖಲೆಯೊಂದಿಗೆ ಸಲ್ಲಿಸಬೇಕು. ಆಸಕ್ತ ಬಿಪಿಎಲ್ ಅಭ್ಯರ್ಥಿಗಳು ನಿಗದಿತ ಅರ್ಜಿಯನ್ನು ನಗರಸಭೆ ಕಾರ್ಯಾಲಯದಿಂದ ಪಡೆದು ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದ ವಿಭಾಗದಲ್ಲಿ ಮೇ.೫ ರೊಳಗಾಗಿ ಖುದ್ದಾಗಿ ಸಲ್ಲಿಸಬಹುದಾಗಿದೆ ಎಂದು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.

Leave a Reply