ಕೊಪ್ಪಳ ನಗರದ ಕಮಾನುಗಳ ತೆರವು : ಆಕ್ಷೇಪಣೆಗಳಿಗೆ ಆಹ್ವಾನ

koppal-kamanu-teravu

ಕೊಪ್ಪಳ ನಗರದ ಕೋಟೆಯ ರಸ್ತೆಯಲ್ಲಿನ ಕಮಾನು ಹಾಗೂ ಜವಾಹರ ರಸ್ತೆಯಲ್ಲಿನ ಕಮಾನು ತೆರವುಗೊಳಿಸಲು ನಗರಸಭೆಯಿಂದ ನಿರ್ಧರಿಸಲಾಗಿದ್ದು, ಈ ಕುರಿತು ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ.
ಕೊಪ್ಪಳ ನಗರದ ಗವಿಮಠ ರಸ್ತೆ ಹಾಗೂ ಸಿಂದೋಗಿ ರಸ್ತೆಯಲ್ಲಿನ ಕಮಾನುಗಳು ಶಿಥಿಲಗೊಂಡಿದ್ದರಿಂದ, ಸಾರ್ವಜನಿಕರ ಹಿತಾಸಕ್ತಿ ಉದ್ದೇಶದಿಂದ ಅವುಗಳನ್ನು ಈಗಾಗಲೆ ತೆರವುಗೊಳಸಿದ್ದರಿಂದ, ವಾಹನ ಹಾಗೂ ಸಾರ್ವಜನಿಕರ ಓಡಾಟಕ್ಕೆ ರಸ್ತೆ ಅಭಿವೃದ್ಧಿ ಕೆಲಸಕ್ಕೆ ಅನುಕೂಲಕರವಾಗಿದೆ. ಅದರಂತೆ ನಗರದಲ್ಲಿ ಇನ್ನೂ ಎರಡು ಕಮಾನುಗಳು ಇದ್ದು ಅವು ಸಹ ಅಳಿವಿನ ಅಂಚಿಗೆ ಬಂದಿವೆ. ನಗರದ ಕೋಟೆ ಏರಿಯಾಕ್ಕೆ ಹೋಗುವ ರಸ್ತೆಯಲ್ಲಿರುವ ಕಮಾನು ಶಿಥಿಲಗೊಂಡು, ಅದರಿಂದ ಪುಡಿ, ಕಲ್ಲು ಬೀಳುತ್ತಿದೆ. ಇದು ಅಪಾಯದ ಮುನ್ಸೂಚನೆಯಾಗಿರಬಹುದೆಂದು ತಿಳಿಯಲಾಗಿದೆ. ಈ ರಸ್ತೆಯು ತುಂಬಾ ಚಿಕ್ಕದಾಗಿದ್ದು, ವಾಹನಗಳ ಹಾಗೂ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ಜೂ. ೧೩ ರಂದು ನಗರಸಭೆಯ ಠರಾವು ಸಂಖ್ಯೆ ೫೮೦ ರಲ್ಲಿ, ಕಮಾನು ತೆರವುಗೊಳಿಸಲು ನಿರ್ಣಯಿಸಲಾಗಿದೆ. ಕೋಟೆಯ ರಸ್ತೆಯ ಕಮಾನು ಹಾಗೂ ಜವಾಹರ ರಸ್ತೆಯ ಕಮಾನುಗಳನ್ನು ತೆರವುಗೊಳಿಸಲು ನಿರ್ಧರಿಸಿದ್ದು, ಸಾರ್ವಜನಿಕರ ಮತ್ತು ಇನ್ನಿತರರ ಯಾವುದೇ ತಕರಾರು ಇದ್ದಲ್ಲಿ, ೩೦ ದಿನಗಳ ಒಳಗಾಗಿ ನಗರಸಭೆಗೆ ಲಿಖಿತವಾಗಿ ದಾಖಲೆಗಳ ಸಮೇತ ನೀಡುವಂತೆ ಕೊಪ್ಪಳ ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.

Please follow and like us:
error