ಕೊಪ್ಪಳ ನಗರದಲ್ಲಿ ಎಟಿಎಂ ದರೋಡೆಗೆ ಯತ್ನ

cctv-atm-robberyಕೊಪ್ಪಳದ ಹೃದಯಭಾಗದಲ್ಲಿರುವ ಅಶೋಕ ಸರ್ಕಲ್ ನ ಹತ್ತಿರದ ಕೆನರಾಬ್ಯಾಂಕ್ ನ ಎಟಿಎಂನ್ನು ದರೋಡೆಮಾಡಲು ಪ್ರಯತ್ನಿಸಲಾಗಿದೆ. ಬೆಳಿಗ್ಗೆ ಬ್ಯಾಂಕ್ ಸಿಬ್ಬಂದಿ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಮದ್ಯರಾತ್ರಿ ಘಟನೆ ನಡೆದಿರಬಹುದು ಎಂದು ಹೇಳಲಾಗುತ್ತಿದೆ. ಸಿಸಿಟಿವಿ ವಿಡಿಯೋಗಳಲ್ಲಿ ಯುವಕನೋರ್ವ ದರೋಡೆಗೆ ಯತ್ನಿಸುತ್ತಿರುವುದು ಕಂಡು ಬಂದಿದೆ. ನಿಖರವಾಗಿ ದುಡ್ಡು ಕಳುವಾಗಿರುವ ಬಗ್ಗೆ ಯಾವುದೇ ಮಾಹಿತಿಯನ್ನು ಬ್ಯಾಂಕ್ ನ ಮ್ಯಾನೇಜರಗೂ ಸಹಿತ ಸ್ಪಷ್ಟ ಮಾಹಿತಿ ಇಲ್ಲ. ಹೃದಯ ಭಾಗದಲ್ಲಿಯೇ ಇರುವ ಎಟಿಎಂ ಕಳ್ಳತನಕ್ಕೆ ಪ್ರಯತ್ನಿಸಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಈ ಎಟಿಎಂಗೆ ಸೆಕ್ಯೂರಿಟಿ ಗಾರ್ಡ್ ಇಲ್ಲದಿರುವುದೇ ದರೋಡೆಗೆ ಯತ್ನಿಸಲು ಕಾರಣವಾಗಿದೆ ಎನ್ನಬಹುದು. ಕಳೆದ ಹಲವಾರು ದಿನಗಳಿಂದ ಈ ರೀತಿಯ ಘಟನೆಗಳು ನಡೆದರೂ ಸಹಿತ ಬ್ಯಾಂಕಿನವರು ಇನ್ನೂ ಎಚ್ಚೆತ್ತುಕೊಂಡಿಲ್ಲ.  ಸ್ಥಳಕ್ಕೆ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

Please follow and like us:
error